Advertisement

ಕಪಿಲ್‌ದೇವ್‌, ಸಚಿನ್‌ ತೆಂಡುಲ್ಕರ್‌, ಕೊಹ್ಲಿಗೆ “ವಿಸ್ಡನ್‌ ದಶಕದ ಗೌರವ’

10:59 PM Apr 15, 2021 | Team Udayavani |

ಲಂಡನ್: ಭಾರತಕ್ಕೆ ಪ್ರಥಮ ಏಕದಿನ ವಿಶ್ವಕಪ್‌ ತಂದಿತ್ತ ನಾಯಕ ಕಪಿಲ್‌ದೇವ್‌, ಲೆಜೆಂಡ್ರಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಮತ್ತು ಟೀಮ್‌ ಇಂಡಿಯಾದ ಹಾಲಿ ನಾಯಕ ವಿರಾಟ್‌ ಕೊಹ್ಲಿ ಅವರು ಲಂಡನ್ನಿನ ಪ್ರತಿಷ್ಠಿತ “ವಿಸ್ಡನ್‌’ ಪತ್ರಿಕೆಯ “ದಶಕದ ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಇಂಗ್ಲೆಂಡ್‌ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಸತತ ಎರಡನೇ ಸಲ “ವರ್ಷದ ಕ್ರಿಕೆಟಿಗ’ (ಲೀಡಿಂಗ್‌ ಕ್ರಿಕೆಟರ್‌) ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ಏಕದಿನ ಕ್ರಿಕೆಟಿನ 50ನೇ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ವಿಸ್ಡನ್‌, 1971ರಿಂದ ಮೊದಲ್ಗೊಂಡು 2021ರ ವರೆಗಿನ 5 ದಶಕಗಳಿಗೆ ಒಬ್ಬರಂತೆ ಕ್ರಿಕೆಟ್‌ ಸಾಧಕರನ್ನು ಗುರುತಿಸಿ ಗೌರವಿಸಿದೆ. ಇದರಂತೆ 1970ರ ದಶಕದಲ್ಲಿ ವಿವಿಯನ್‌ ರಿಚರ್ಡ್ಸ್‌, 1980ರ ದಶಕದಲ್ಲಿ ಕಪಿಲ್‌ದೇವ್‌, 1990ರ ದಶಕದಲ್ಲಿ ಸಚಿನ್‌ ತೆಂಡುಲ್ಕರ್‌, 2000ದ ದಶಕದಲ್ಲಿ ಮುತ್ತಯ್ಯ ಮುರಳೀಧರನ್‌ ಹಾಗೂ 2010ರ ದಶಕದ ಗೌರವ ವಿರಾಟ್‌ ಕೊಹ್ಲಿ ಅವರಿಗೆ ಒಲಿದಿದೆ.

ಇದನ್ನೂ ಓದಿ :ಭಾರತ ಮೂಲದ ಸಂಸದನಿಂದ ಅಮೆರಿಕ ಸಂಸತ್ತಿನಲ್ಲಿ ಅಂಬೇಡ್ಕರ್‌ ಬಗ್ಗೆ ಠರಾವು

2021ರ ವಿಸ್ಡನ್‌ ಶ್ರೇಷ್ಠರು
ಇದೇ ವೇಳೆ 2021ನೇ ಸಾಲಿನ ವಿಸ್ಡನ್‌ ಗೌರವಕ್ಕೆ ಪಾತ್ರರಾದ ಐವರು ಕ್ರಿಕೆಟಿಗರ ಹೆಸರನ್ನೂ ಪ್ರಕಟಿಸಲಾಗಿದೆ. ಇವರೆಂದರೆ ಡಾಮ್‌ ಸಿಬ್ಲಿ, ಜಾಕ್‌ ಕ್ರಾಲಿ, ಜಾಸನ್‌ ಹೋಲ್ಡರ್‌, ಮೊಹಮ್ಮದ್‌ ರಿಜ್ವಾನ್‌ ಮತ್ತು ಡ್ಯಾರನ್‌ ಸ್ಟೀವನ್ಸ್‌.

ಕೈರನ್‌ ಪೊಲಾರ್ಡ್‌ ಟಿ20 ಲೀಡಿಂಗ್‌ ಕ್ರಿಕೆಟರ್‌ ಹಾಗೂ ಆಸ್ಟ್ರೇಲಿಯದ ಬೆತ್‌ ಮೂನಿ ಲೀಡಿಂಗ್‌ ವುಮೆನ್ಸ್‌ ಕ್ರಿಕೆಟರ್‌ ಗೌರವಕ್ಕೆ ಆಯ್ಕೆಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next