Advertisement

ವಯರ್‌ಲೆಸ್‌ ಕಾರ್‌ ಚಾರ್ಜಿಂಗ್‌

04:09 AM May 18, 2020 | Lakshmi GovindaRaj |

ನಮ್ಮ ಮನೆಗಳಲ್ಲಿರುವ ಯಾವುದೇ ಉಪಕರಣ ಗಳನ್ನು ನೋಡಿ. ಅವುಗಳಲ್ಲಿ ಕಂಡುಬರುವ ಸಾಮಾನ್ಯ ಬಿಡಿಭಾಗ ವಯರು. ಗೋಜಲು ಗೋಜಲಾಗಿರುವ ವಯರನ್ನು ಕಂಡರೆ, ನಮ್ಮೆಲ್ಲರಿಗೂ ಅಷ್ಟಕ್ಕಷ್ಟೆ. ಈ ವಯರನ್ನು  ಅವಾಯ್ಡ್ ಮಾಡಲು ಇರುವ ನಾವು ಏನೆಲ್ಲಾ ಪ್ರಯತ್ನ ಮಾಡುತ್ತೇವೆ. ಮನುಷ್ಯನ ಈ ಅಗತ್ಯವನ್ನು ಪೂರೈಸಲೆಂದೇ ವಯರ್‌ಲೆಸ್‌ ಉಪಕರಣಗಳ ಆವಿಷ್ಕಾರವಾಗಿದೆ. ಈಗಿರುವ ಮಿತಿಯಲ್ಲಿ ನಮ್ಮ ವಯರ್‌ಲೆಸ್‌ ತಂತ್ರಜ್ಞಾನ ತುಂಬಾ ಸೀಮಿತ,  ಎಂದೇ ಹೇಳಬಹುದು, ಬ್ಲೂಟೂತ್‌ ಮೂಲಕ ಡಾಟಾ ಟ್ರಾನ್ಸ್‌ಫ‌ರ್‌, ವಯರ್‌ಲೆಸ್‌ ಸ್ಪೀಕರ್‌, ಹೆಡ್‌ಫೋನ್‌- ಇವಿಷ್ಟೇ ನಮ್ಮ ದೈನಂದಿನ ಬಳಕೆಯಲ್ಲಿರುವುದು.

Advertisement

ಇತ್ತೀಚಿಗೆ ಸ್ಮಾರ್ಟ್‌ಫೋನನ್ನು ವಯರ್‌ ಲೆಸ್‌ ಚಾರ್ಜಿಂಗ್‌ ಮಾಡುವ ತಂತ್ರಜ್ಞಾನ ಜನಪ್ರಿಯಗೊಂಡಿತ್ತು. ಈ ಸೌಲಭ್ಯವನ್ನು ಹೈ ಎಂಡ್‌ ಫೋನ್‌ಗಳಲ್ಲಿ ಮಾತ್ರವೇ ನೀಡಲಾಗಿತ್ತು. ಹೀಗಿರುವಾಗ, ಈ ಕ್ಷೇತ್ರದಲ್ಲಿ ಹೊಸದೊಂದು ತಂತ್ರಜ್ಞಾನ ನಿಜವಾಗುವ ಸಮಯ ಸನ್ನಿಹಿತವಾಗಿದೆ. ಎಲೆಕ್ಟ್ರಿಕ್‌ ಕಾರುಗಳನ್ನು,  ವಯರ್‌ಲೆಸ್‌ ಆಗಿ ಚಾರ್ಜ್‌ ಮಾಡುವ ತಂತ್ರಜ್ಞಾನವದು. ವೈಟ್ರಿಸಿಟಿ ಎನ್ನುವ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿರುವ ಈ ತಂತ್ರಜ್ಞಾನ, ವಯಾಗ್ನೆಟಿಕ್‌ ರೆಸೊನೆನ್ಸ್ ತತ್ವವನ್ನು ಆಧರಿಸಿದೆ.

ಬದಲಾವಣೆಗಳಿಗೆ ಹಾದಿ ಸುಗಮ: ಎಲೆಕ್ಟ್ರಿಕ್‌ ವಾಹನಗಳ ಭವಿಷ್ಯ ಉಜ್ವಲವಾಗಿ ಗೋಚರಿಸುತ್ತಿರುವ ಈ ದಿನಗಳಲ್ಲಿ, ಈ ತಂತ್ರಜ್ಞಾನ  ಅಭಿವೃದ್ಧಿಯಾಗುತ್ತಿರುವುದು ಒಳ್ಳೆಯ ಸುದ್ದಿ. ಮಾರಾಟವಿಲ್ಲದ ಕಾರಣಕ್ಕೆ ಆಟೊಮೊಬೈಲ್‌ ಸಂಸ್ಥೆಗಳು ನಷ್ಟದಲ್ಲಿರುವ ಈ ಸಂದರ್ಭದಲ್ಲಿ, ವಯರ್‌ಲೆಸ್‌  ತಂತ್ರಜ್ಞಾನಗಳಂಥ ಸವಲತ್ತುಗಳಿಂದ, ಆಟೋ ಮಾರುಕಟ್ಟೆಗೆ ಚೈತನ್ಯ ದೊರೆಯಲಿದೆ ಎನ್ನಬಹುದು. “ವೈಟ್ರಿಸಿಟಿ’ ಚೀನಾ ಮೂಲದ ಸಂಸ್ಥೆ. ಅದು ತನ್ನ  ಆವಿಷ್ಕಾರವನ್ನು ಇತ್ತೀಚಿಗಷ್ಟೆ ಕಾರಿಗೆ ಅಳವಡಿಸಿ ಜಗತ್ತಿನ ಮುಂದೆ ಪ್ರಸ್ತುತ ಪಡಿಸಿದೆ. ಎಲೆಕ್ಟ್ರಿಕ್‌ ವಾಹನಗಳಿಗೆ ಇನ್ನೂ ಚಾರ್ಜಿಂಗ್‌ ಪಾಯಿಂಟುಗಳೇ  ನಿರ್ಮಾಣವಾಗಿಲ್ಲ. ಹೀಗಿರುವಾಗ, ಅದಕ್ಕೂ ಮೊದಲೇ, ಅದಕ್ಕಿಂತ ಅಡ್ವಾನ್ಸ್ಡ್ ಆಗಿರುವ ವಯರ್‌ಲೆಸ್‌ ತಂತ್ರಜ್ಞಾನ ದಾಪುಗಾಲಿಕ್ಕಿದರೆ, ಅಚ್ಚರಿ  ಪಡಬೇಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next