Advertisement

ದೇಣಿಗೆ ಕೊಟ್ಟ ಪ್ರೇಮ್‌ಜಿ

12:30 AM Mar 14, 2019 | Team Udayavani |

ಹೊಸದಿಲ್ಲಿ:  ವಿಪ್ರೋ ಸಂಸ್ಥೆಯಲ್ಲಿ ತಾನು ಹೊಂದಿರುವ 57 ಸಾವಿರ ಕೋಟಿ ರೂ. ಮೌಲ್ಯದ ಶೇ. 34ರಷ್ಟು ಷೇರುಗಳನ್ನು ಉದ್ಯಮಿ ಅಜೀಮ್‌ ಪ್ರೇಮ್‌ಜಿ ದೇಣಿಗೆ ನೀಡಿದ್ದಾರೆ. ಈ ಮೂಲಕ ಅವರು ಈವರೆಗೆ ನೀಡಿದ ಒಟ್ಟು ದೇಣಿಗೆಯ ಮೊತ್ತ 1.45 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ವಿಪ್ರೋದಲ್ಲಿ ತಾನು ಹೊಂದಿದ್ದ ಶೇ. 67ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇವರು ಒಟ್ಟು ಶೇ. 74.3ರಷ್ಟು ಪಾಲನ್ನು ವಿಪ್ರೋದಲ್ಲಿ ಹೊಂದಿದ್ದರು. ಇವರು ಈ ಮೊತ್ತವನ್ನು ತಮ್ಮ ಅಜೀಮ್‌ ಪ್ರೇಮ್‌ಜಿ ಫೌಂಡೇಶನ್‌ಗೆ ನೀಡಿದ್ದು, ಈ ಸಂಸ್ಥೆ ದತ್ತಿ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಈ ಸಂಸ್ಥೆ ಮಹತ್ವದ ಕಾರ್ಯನಿರ್ವಹಿಸುತ್ತಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next