ಹೊಸದಿಲ್ಲಿ: ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಸತ್‌ನ ಚಳಿಗಾಲದ ಅಧಿವೇಶನ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಕಳೆದ ವರ್ಷ ಕೂಡ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಧಿವೇಶನ ಡಿಸೆಂಬರ್‌ನಲ್ಲಿಯೇ ಆರಂಭವಾಗಿತ್ತು. ಸತತ ಎರಡನೇ ವರ್ಷ ಚಳಿಗಾಲದ ಅಧಿವೇಶನ ಮುಂದೂಡಿಕೆಯಾಗುತ್ತಿದೆ. ರಾಜಕೀಯ ವ್ಯವಹಾರ ಗಳಿಗಾಗಿನ ಕೇಂದ್ರ ಸಂಪುಟ ಸಮಿತಿ (ಸಿಸಿಪಿಎ) ಈ ಬಗ್ಗೆ ಶೀಘ್ರ ಸಭೆ ಸೇರಿ ನಿರ್ಧಾರ ಕೈಗೊಳ್ಳಲಿದೆ. ಸಂಸತ್ ಸದಸ್ಯರು ಸೇರಿದಂತೆ ಪ್ರಮುಖರು ಪ್ರಚಾರದಲ್ಲಿ ನಿರತವಾಗಿರುವುದರಿಂದ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯವಾದ ಬಳಿಕವೇ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ತ್ರಿವಳಿ ತಲಾಖ್ ಅಧ್ಯಾದೇಶ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ರದ್ದು ಮಾಡಿದ ಸುಗ್ರೀವಾಜ್ಞೆ ಮತ್ತು ಪ್ರಮುಖ ಮಸೂದೆಗಳು ಸಂಸತ್‌ನ ಅಂಗೀಕಾರಕ್ಕಾಗಿ ಕಾಯುತ್ತಿವೆ.