ಮೈಸೂರು: ಮಳೆಗಾಲ ಕಳೆದು ಮೈ ಕೊರೆಯುವ ಮಾಗಿಯ ಚಳಿ ಎಲ್ಲೆಡೆ ಆರಂಭವಾಗಿದ್ದು, ಜನರು ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚನೆ ಉಡುಪುಗಳ ಮೊರೆ ಹೋಗಿದ್ದಾರೆ.
ಮುಂಜಾನೆ ಸೂರ್ಯ ನೆತ್ತಿಗೆ ಬಂದರೂ ಚಳಿ ಇರುವುದರಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಜೊತೆಗೆ ಸಂಜೆಯಾಗುತ್ತಿದ್ದಂತೆ ಶೀತಗಾಳಿಯೊಂದಿಗೆ ನಿಧಾನವಾಗಿ ಮೈ ಕೊರೆಯುವ ಚಳಿ ಶುರುವಾಗುತ್ತಿದೆ.ಹಗಲಿನಲ್ಲಿ ಸುಡುವ ಬಿಸಿಲು, ರಾತ್ರಿ ಮೈ ಕೊರೆಯುವ ಚಳಿ ಆವರಿಸುತ್ತದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಾಗಿಯ ಚಳಿ ತೀವ್ರತೆ ಹೆಚ್ಚಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಚಳಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿಮತ್ತಷ್ಟು ಹೆಚ್ಚಾಗಲಿದೆ. ನಗರದಲ್ಲಿ ವಾರದ ಹಿಂದೆ ಗರಿಷ್ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾನುವಾರ ನಗರ ಪ್ರದೇಶದಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಗ್ರಾಮಾಂತರ ಭಾಗದಲ್ಲಿ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಜನರುಸೂರ್ಯನ ಕಿರಣಗಳು ಬೀಳುವವರೆಗೂ ಮನೆಯಿಂದ ಹೊರಬರುವುದಕ್ಕೆ ಹಿಂದೇಟು ಹಾಕುವಂತಾಗಿದೆ.
ಬೆಚ್ಚನೆ ಉಡುಪುಗಳಿಗೆ ಹೆಚ್ಚಿದ ಬೇಡಿಕೆ: ಮೈ ಕೊರೆಯುವ ಚಳಿಗೆ ತತ್ತರಿಸಿರುವ ಜನರು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗಿದ್ದಾರೆ. ಜನರು ಸ್ವೆಟರ್, ಜಾಕೆಟ್, ಶಾಲು, ಕಾಲು ಚೀಲ, ಕೈ ಚೀಲ, ಟೋಪಿ, ಕಿವಿ ಮುಚ್ಚುವ ಬಟ್ಟೆ ಸೇರಿ ದಪ್ಪನೆಯ ಹೊದಿಕೆಗಳ ಖರೀದಿಗೆ ಮುಂದಾಗಿದ್ದು, ನಗರದಲ್ಲಿ ಈಗ ಬೆಚ್ಚನೆಯ ಉಡುಪುಗಳಿಗೆ ಬೇಡಿಕೆ ಬಂದಿದೆ. ಜೊತೆಗೆ ಇವುಗಳ ಬೆಲೆಯೂ ತುಸು ಏರಿಕೆ ಕಂಡಿದೆ.
ಮಹಿಳೆಯರಿಗಾಗಿ ಚಳಿಗಾಲದ ಫ್ಯಾಷನ್ ಉಡುಪುಗಳು ಸಹ ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನಗರದ ಪ್ರಮುಖ ಮಾಲ್‌ಗಳಲ್ಲಿ, ಡಿ.ದೇವರಾಜಅರಸುರಸ್ತೆ,ಸಯ್ನಾಜಿರಾವ್ ರಸ್ತೆಗ ಳಲ್ಲಿರುವ ಬಟ್ಟೆ ಮಳಿಗೆಗಳಲ್ಲಿ, ಗಾಂಧಿ ಚೌಕ ರಸ್ತೆಗಳ ಫುಟ್‌ಪಾತ್ ಗಳಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಈಗಾಗಲೇ ಚಳಿ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಚ ಳಿಯ ತೀವ್ರತೆ ಹೆಚ್ಚಾಗುತ್ತಿದೆ. ಭಾನುವಾರ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕ ಳೆದ ಎರಡು ವರ್ಷಗಳಿಂದ ಉತ್ತಮವಾದ ಮಳೆ ಬಿದ್ದಿರುವ ಕಾರಣ ಹಾಗೂ ಕೆಆರ್‌ಎಸ್ ಜಲಾಶಯ ಇನ್ನೂ ತುಂಬಿರುವ ಕಾರಣ ಮುಂದಿನ ದಿನಗ ಳಲ್ಲಿ ನಗರದಲ್ಲಿ ಚಳಿ ಇನ್ನೂ ಹೆಚ್ಚಾಗುವಾ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಸಿ ನೀರು, ಶುಚಿ ಆಹಾರ ಸೇವಿಸಿ : ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಎದುರಾಗುವ ಸಾಧ್ಯತೆಗಳಿವೆ. ಕಾಲಿನ ಹಿಮ್ಮಡಿ, ತುಟಿ ಸೇರಿದಂತೆ ಕೈಕಾಲಿನ ಚರ್ಮ ಒಣಗಲಿದೆ. ಈ ಬಗ್ಗೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ ಕ್ರಮದತ್ತ ಗಮನವಿಡಬೇಕು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜೊತೆಗೆ ಕುದಿಸಿಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರ ಸೇವಿಸಬೇಕು. ಫ್ರಿಡ್ಜ್ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರ ಬಳಸಬಾರದು. ದೂಳಿನಿಂದ ದೂರವಿರಬೇಕು. ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈತುಂಬಾ ಧರಿಸುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.