Advertisement

ಉದ್ದೀಪನ ಸೇವನೆ: ರಶ್ಯ ಆ್ಯತ್ಲೀಟ್‌ನಿಂದ ಕಂಚು ವಾಪಸ್‌

06:10 AM Feb 23, 2018 | |

ಪಿಯಾಂಗ್‌ಚಾಂಗ್‌: ಉದ್ದೀಪನ ಮದ್ದು ಸೇವನೆ ಸಾಬೀತಾಗಿರುವ ಹಿನ್ನೆಯಲ್ಲಿ ರಶ್ಯನ್‌ ಕರ್ಲರ್‌ ಅಲೆಕ್ಸಾಂಡರ್‌ ಕ್ರುಶೆಲ್‌ನಿತ್‌ಸ್ಕಿ ಪಿಯಾಂಗ್‌ಚಾಂಗ್‌ ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ಕಸಿದುಕೊಳ್ಳಲಾಗಿದೆ.

Advertisement

ಉದ್ದೀಪನ ಮದ್ದು ಸೇವನೆ ಆರೋಪದಡಿ ಪಿಯಾಂಗ್‌ಚಾಂಗ್‌ ಒಲಿಂಪಿಕ್ಸ್‌ನಿಂದ ನಿಷೇಧಕ್ಕೆ ಒಳಗಾಗಿದ್ದ ರಶ್ಯದ 168 ಆ್ಯತ್ಲೀಟ್‌ಗಳಲ್ಲಿ 25ರ ಹರೆಯದ ಕ್ರುಶೆಲ್‌ನಿತ್‌ಸ್ಕಿ ಒಬ್ಬರಾಗಿದ್ದರು. ಆದರೆ ನಿಷೇಧಕ್ಕೊಳಗಾಗಿದ್ದ ಬಹುತೇಕ ರಶ್ಯನ್‌ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ವಿವಾದಾತ್ಮಕವಾಗಿ ಪ್ರವೇಶ ನೀಡಿತ್ತು.

ಕ್ರುಶೆಲ್‌ನಿತ್‌ಸ್ಕಿಯಿಂದ ಒಲಿಂಪಿಕ್‌ ಸಮಿತಿ ಪದಕ ವಾಪಸ್‌ ಪಡೆದಿರುವ ಬಗ್ಗೆ ತಿಳಿಸಿರುವ ಕೋರ್ಟ್‌ ಆಫ್ ಆರ್ಬಿಟ್ರೇಶನ್‌ ಫಾರ್‌ ಸ್ಫೋರ್ಟ್ಸ್, “ರಶ್ಯನ್‌ ಕ್ರೀಡಾಪಟು ಉದ್ದೀಪನ ಸೇವನೆ ವಿರೋಧಿ ನಿಯಮ ಉಲ್ಲಂ ಸಿರುವುದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರನ್ನು ಮಿಶ್ರ ಡಬಲ್ಸ್‌ ಕರ್ಲಿಂಗ್‌ ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ’ ಎಂದಿದೆ.

ತನ್ನ ಪತ್ನಿ ಅನಸ್ತಾಸಿಯಾ ಬ್ರೈಜಗೊವಾ ಜತೆಗೂಡಿ ಕರ್ಲಿಂಗ್‌ನಲ್ಲಿ ಸ್ಪರ್ಧಿಸಿದ್ದ ಕ್ರುಶೆಲ್‌ನಿತ್‌ಸ್ಕಿ ಕಂಚಿನ ಪದಕ ಗೆದ್ದಿದ್ದರು. ತಮ್ಮಿಂದ ಪದಕ ವಾಪಸ್ಸು ಪಡೆದಿರುವುದನ್ನು ಪ್ರತಿಭಟಿಸಿರುವ ಬ್ರೈಜಗೊವಾ, “ಪತಿ ತೆಗೆದುಕೊಂದಿದ್ದ ಎಂಡೋರ್ಯಾನ್ಸ್‌ ಬೂಸ್ಟರ್‌ ಪರೀಕ್ಷೆಯ ವೇಳೆ ಪಾಸಿಟಿವ್‌ ಎಂದು ಬಂದಿದ್ದಕ್ಕೆ ಪದಕ ನಿರಾಕರಿಸಿದ್ದು ಮೂರ್ಖತನವಾಗಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next