Advertisement

ಪೇರ್‌ ಕ್ವಾರ್ಟರ್‌ ಫೈನಲ್ ಪ್ರವೇಶ

02:01 AM Aug 23, 2019 | Team Udayavani |

ನಾರ್ತ್‌ ಕ್ಯಾರೋಲಿನಾ: ಅಗ್ರ ಶ್ರೇಯಾಂಕದ ಫ್ರೆಂಚ್ ಆಟಗಾರ ಬೆನೊಯಿಟ್ ಪೇರ್‌ ತಮ್ಮದೇ ದೇಶದ ಯುಗೊ ಹಂಬರ್ಟ್‌ ವಿರುದ್ಧ ಅದೃಷ್ಟದ ಗೆಲುವು ಸಾಧಿಸಿ ‘ವಿನ್‌ಸ್ಟನ್‌ ಸಲೇಮ್‌ ಓಪನ್‌’ ಟೆನಿಸ್‌ ಕೂಟದ ಕ್ವಾ. ಫೈನಲ್ ತಲುಪಿದ್ದಾರೆ.

Advertisement

2 ಗಂಟೆ, 27 ನಿಮಿಷಗಳ ಹೋರಾಟದ ಬಳಿಕ ಪೇರ್‌ 3-6, 7-6 (2), 6-3 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಮೊದಲ ಸೆಟ್ ಗೆದ್ದ ಹಂಬರ್ಟ್‌ ದ್ವಿತೀಯ ಸೆಟ್ ವೇಳೆಯೂ ಮುನ್ನಡೆಯಲ್ಲಿದ್ದರು. ಆದರೆ ತಿರುಗಿ ಬಿದ್ದ ಪೇರ್‌ ಇದನ್ನು ಟೈ ಬ್ರೇಕರ್‌ಗೆ ವಿಸ್ತರಿಸಿ ತಮ್ಮದಾಗಿಸಿಕೊಂಡರು.

ಬೆನೊಯಿಟ್ ಪೇರ್‌ ಅವರ ಮುಂದಿನ ಎದುರಾಳಿ ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ. ಅವರು ಇಟೆಲಿಯ ಲೊರೆಂಜೊ ಸೊನೆಗೊ ವಿರುದ್ಧ 7-6 (7), 6-0 ಜಯ ಸಾಧಿಸಿದರು.

ಕೆನಡಾದ ಡೆನ್ನಿಸ್‌ ಶಪೊವಲೋವ್‌, ರಶ್ಯದ ಆ್ಯಂಡ್ರೆ ರುಬ್ಲೇವ್‌ ಕೂಡ ಕ್ವಾ. ಫೈನಲ್ ಮುಖಾಮುಖೀಗೆ ಅಣಿಯಾ ಗಿದ್ದಾರೆ. ಅಮೆರಿಕದ ಫ್ರಾನ್ಸೆಸ್‌ ಟಿಯಾಫೊ ಮತ್ತು ಪೋಲೆಂಡಿನ ಹ್ಯೂಬರ್ಟ್‌ ಹರ್ಕಾಜ್‌ ಇವರು ಇನ್ನೊಂದು ಕ್ವಾ. ಫೈನಲ್ನಲ್ಲಿ ಎದುರಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next