Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಮೊದಲ ಹಂತದ 14 ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದು, ಹೆಚ್ಚು ಸ್ಥಾನ ಗೆಲ್ಲುತ್ತೇವೆ’ ಎಂದು ತಾವು ಮತದಾನ ಮಾಡಿ ಬಂದಬೆರಳನ್ನು ತೋರಿಸಿದರು. ಅಲ್ಲದೇ ಐಟಿ ದಾಳಿಗೆ ನಮ್ಮ ವಿ ರೋಧವಿಲ್ಲ. ಆದರೆ ಅದು ರಾಜಕೀಯ ಪ್ರೇರಿತವಾಗಬಾರದು. ಶಿರಸಿಯಲ್ಲಿ ಬಿಜೆಪಿ ಮುಖಂಡನೊಬ್ಬನ ಮನೆ ಮೇಲೆ ಮಾಡಿದ ದಾಳಿತೋರಿಕೆಯದ್ದಾಗಿದ್ದು, ಇದು ಕಾಂಗ್ರೆಸ್ನವರ ಮೇಲೆ ಮತ್ತಷ್ಟು ದಾಳಿ ಮಾಡಲು ಮಾಡಿದ ನಾಟಕ, ಪ್ಲಾ ನ್ ಆಗಿದೆ. ಐಟಿಯವರು ಯಡಿಯೂರಪ್ಪ, ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಮೋದಿ ಅವರದ್ದು ಈಗ “ಓಲ್ಡ್ ವೈನ್ ಇನ್ ನ್ಯೂ ಬಾಟಲ್’ ಎನ್ನುವಂತಿದೆ.