Advertisement

ಅಭಿನಂದನ್‌ಗೆ ವೀರ ಚಕ್ರ: ವಾಯುಪಡೆ ಶಿಫಾರಸು

01:25 AM Apr 21, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದ ಜತೆಗಿನ ವೈಮಾನಿಕ ಸಂಘರ್ಷದ ವೇಳೆ ಪಾಕ್‌ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಸಾಹಸ ಮೆರೆದ ವೀರ ಯೋಧ, ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿಗೆ ಯುದ್ಧ ಕಾಲದ ಶೌರ್ಯ ಪದಕವಾದ “ವೀರಚಕ್ರ’ವನ್ನು ನೀಡಿ ಗೌರವಿಸುವಂತೆ ಭಾರತೀಯ ವಾಯುಪಡೆ ಶಿಫಾರಸು ಮಾಡಿದೆ.

Advertisement

ವೀರ ಚಕ್ರವು ಯುದ್ಧದ ಸಮಯದ ಶೌರ್ಯಕ್ಕೆ ನೀಡಲಾಗುವ ಸೇನೆಯ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾಗಿದೆ. ಪರಮ ವೀರ ಚಕ್ರ ಮತ್ತು ಮಹಾವೀರ ಚಕ್ರದ ನಂತರದ ಸ್ಥಾನ ವೀರ ಚಕ್ರಕ್ಕಿದೆ. ಇದೇ ವೇಳೆ, ಅಭಿನಂದನ್‌ ಅವರಿಗೆ ಜಮ್ಮು ಕಾಶ್ಮೀರದಲ್ಲಿ ಪ್ರಾಣ ಭೀತಿ ಇರುವುದರಿಂದಾಗಿ, ಅವರನ್ನು ಶ್ರೀನಗರದ ವಾಯುನೆಲೆಯಿಂದ ಪಶ್ಚಿಮ ವಲಯದಲ್ಲಿ ಬರುವ ಬೇರೊಂದು ಪ್ರಮುಖ ವಾಯು ನೆಲೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೀಘ್ರ ಕೆಲಸಕ್ಕೆ ಹಾಜರ್‌: ಈ ನಡುವೆ, ಅಭಿನಂದನ್‌ ಶೀಘ್ರದಲ್ಲೇ ವಿಮಾನದ ಪೈಲಟ್‌ ಸೀಟ್‌ನಲ್ಲಿ ಪುನಃ ಕುಳಿತುಕೊಳ್ಳಲಿದ್ದಾರೆ. ಬೆಂಗ ಳೂರಿನ ಏರೋಸ್ಪೇಸ್‌ ಮೆಡಿಸಿನ್‌ ಇನ್‌ಸ್ಟಿಟ್ಯೂಟ್‌ನಿಂದ ಅನುಮತಿ ಪಡೆಯುವು ದೊಂದೇ ಬಾಕಿ ಇದ್ದು, ಇಲ್ಲಿನ ಪರಿಣರ ಅನುಮತಿ ಸಿಕ್ಕ ಅನಂತರ ಅಭಿನಂದನ್‌ ಪುನಃ ಪೈಲಟ್‌ ಆಗಿ ಕಾರ್ಯನಿರ್ವ ಹಿಸಲಿದ್ದಾರೆ. ಮಿಗ್‌ ವಿಮಾನ ಅಪಘಾತಕ್ಕೀಡಾದಾಗ ಪಾಕಿಸ್ಥಾನಿ ಸೇನೆಗೆ ಸಿಕ್ಕಿಕೊಂಡಿದ್ದ ಅಭಿನಂದನ್‌, ಭಾರತಕ್ಕೆ ಬಂದ ಅನಂತರ ಈ ವರೆಗೂ ಹಲವು ವಿಧದ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ಅಲ್ಲದೆ, ಅವರಿಗೆ ಕೆಲವು ದಿನಗಳ ಕಾಲ ವಿಶ್ರಾಂತಿಯನ್ನೂ ಒದಗಿಸಲಾಗಿದೆ. ಸಾಮಾ ನ್ಯವಾಗಿ ವಿಮಾನದಿಂದ ಪ್ಯಾರಾಶೂಟ್‌ ಬಳಸಿ ಹಾರಿದಾಗ 12 ವಾರ ಗಳವರೆಗೆ ಅವರಿಗೆ ಪುನಃ ವಿಮಾನವ ನ್ನೇರಲು ಅವಕಾಶ ನೀಡು ವುದಿಲ್ಲ. ಆದರೆ ಅಭಿನಂದನ್‌ ಮನೋ ಸ್ಥೈರ್ಯ ಹಾಗೂ ಕೆಲಸಕ್ಕೆ ಮರಳ ಬೇಕೆಂಬ ಇಚ್ಛೆಯನ್ನು ಪರಿಗಣಿಸಿ ಬೇಗ ಅವ ರಿಗೆ ಪುನಃ ಪೈಲಟ್‌ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next