Advertisement

ವಿಂಗ್‌ ಕಮಾಂಡರ್‌ ಅಭಿನಂದನ್‌ಗೆ Social Media account ಇಲ್ಲ: IAF

10:33 AM Mar 06, 2019 | Team Udayavani |

ಹೊಸದಿಲ್ಲಿ : ”ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಹೆಸರಿನಲ್ಲಿ ಈಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ಸಾಮಾಜಿಕ ಮಾಧ್ಯಮ ಖಾತೆಗಳೆಲ್ಲವೂ ನಕಲಿ; ಅಭಿನಂದನ್‌ ಅವರಿಗೆ ಯಾವುದೇ ಸೋಶಿಯಲ್‌ ಮೀಡಿಯಾ ಖಾತೆ ಇಲ್ಲ” ಎಂದು ಭಾರತೀಯ ವಾಯು ಪಡೆ ಇಂದು ತನ್ನ ಅಧಿಕೃತ ಟ್ಟಿಟರ್‌ ಖಾತೆಯಲ್ಲಿ ಸ್ಪಷ್ಟಪಡಿಸಿದೆ. 

Advertisement

”ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರಿಗೆ ಫೇಸ್‌ ಬುಕ್‌, ಇನ್‌ಸ್ಟಾಗ್ರಾಂ ಅಥವಾ ಟ್ಟಿಟರ್‌ ನಲ್ಲಿ ಯಾವುದೇ ಖಾತೆ ಇಲ್ಲ; ಒಂದೊಮ್ಮೆ ಅವರ ಹೆಸರಲ್ಲಿ ಖಾತೆ ಕಂಡು ಬಂದರೆ ಅದು ನಕಲಿ. ಆದುದರಿಂದ ತಪ್ಪು ಮಾಹಿತಿ ಹರಡುವ ಉದ್ದೇಶದ ಆ ರೀತಿಯ ನಕಲಿ ಖಾತೆಗಳನ್ನು ಯಾರೂ ಹಿಂಬಾಲಿಸಬಾರದು, ಜೈಹಿಂದ್‌” ಎಂದು ಐಎಎಫ್ ಎಚ್ಚರಿಸಿದೆ. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next