Advertisement
ಅವರು ಇಂದು ಕುಷ್ಟಗಿ ಜಿಲ್ಲಾ ಬಿಜೆಪಿ ವತಿಯಿಂದ ಕುಷ್ಟಗಿಯ ಐಎಂ ಕಚೇರಿ ಬಳಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ,ನಮ್ಮ ಸರ್ಕಾರ ಹಾಲು ಉತ್ಪಾದಕ ರೈತರಿಗೆ, ರೈತರ ವಿದ್ಯಾರ್ಥಿಗಳ ಮಕ್ಕಳಿಗೆ ರೈತ ವಿದ್ಯಾನಿಧಿಯನ್ನು ನೇಕಾರರು, ಕೃಷಿ ಕೂಲಿ ಕಾರ್ಮಿಕರು, ಮೀನುಗಾರರು, ಆಟೋ ಹಾಗು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಿಸಿದೆ. ದುಡಿಯುವ ಕಾರ್ಮಿಕ ಮಕ್ಕಳಿಗೂ ನೀಡುತ್ತಿದ್ದೇವೆ. ಎಸ್.ಸಿ. ಎಸ್.ಟಿ ಬಡವರಿಗೆ 75 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ ಈ ತಿಂಗಳಿನಿಂದ ಪ್ರಾರಂಭವಾಗಿದೆ. ಎಸ್ ಸಿ. ಎಸ್ ಟಿ ಯವರಿಗೆ ವಸತಿ ಯೋಜನೆ ಸಹಾಯಧನ 2 ಲಕ್ಷ ರೂ. ನೀಡುತ್ತಿದ್ದು, ಭೂ ಒಡೆತನ ಯೋಜನೆಯ ಘಟಕ ವೆಚ್ಚ 20 ಲಕ್ಷ ರೂ.ವರೆಗೆ ನೀಡುವ ತೀರ್ಮಾನ ಮಾಡಲಾಗಿದೆ ಎಂದರು.
ಅದಕ್ಕೆ ದೊಡ್ಡ ಬದಲಾವಣೆಗಳನ್ನು ನಮ್ಮ ಸರ್ಕಾರ ತರುತ್ತಿದೆ. 28000 ಕೋಟಿ ರೂ.ಗಳನ್ನು ಪರಿಶಿಷ್ಟ. ವರ್ಗದವರ ಕಲ್ಯಾಣಕ್ಕೆ ಮೀಸಲಿಟ್ಟು ಖರ್ಚು ಮಾಡುತ್ತಿದ್ದೇವೆ. 100 ಅಂಬೇಡ್ಕರ್ ವಿದ್ಯಾರ್ಥಿನಿಲಯಗಳನ್ನು ಇದೇ ವರ್ಷ ನಿರ್ಮಾಣ ಮಾಡಲಾಗುತ್ತಿದ್ದು, 50 ಕನಕದಾಸರ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸುತ್ತಿದ್ದೇವೆ. ಕನಕದಾಸರು ಹುಟ್ಟಿದ ಊರನಿಂದ ನಾನು ಬಂದಿದ್ದೇನೆ. ಬಾಡಾ ನನ್ನ ಕ್ಷೇತ್ರದಲ್ಲಿದೆ. ಸಂಪೂರ್ಣ ಭಕ್ತಿ ಭಾವ ನಮ್ಮ ಕಣಕಣದಲ್ಲಿ ಅಳವಡಿಸಿಕೊಂಡಿದ್ದೇವೆ. 14 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಅಭಿವೃದ್ಧಿ ಮಾಡಿದ್ದೇವೆ. ಬಾಡ ಅಭಿವೃದ್ಧಿಗೆ ಬಿ.ಎಸ್ ಯಡಿಯೂರಪ್ಪ ಅವರು ಅನುದಾನ ನೀಡಿ, ಅವರ ವಿಚಾರಗಳನ್ನು ಯಾವ ರೀತಿ ಬಿಂಬಿಸಿದ್ದೇವೆ ಎಂದು ಹಾಲುಮತಸ್ತ ಬಂಧುಗಳು ಬಂದು ನೋಡಬೇಕು. ಯಾವುದೇ ಸಮುದಾಯಕ್ಕೆ ಭೇದಭಾವ ಮಾಡಿಲ್ಲ. ನಿಜವಾದ ಸಾಮಾಜಿಕ ನ್ಯಾಯ ನಾವು ನೀಡುತ್ತಿದ್ದೇವೆ ಎಂದರು.
Related Articles
ಕುಷ್ಟಗಿಯ ಸಮಗ್ರ ಅಭಿವೃದ್ಧಿಯನ್ನು ನಾವು ಮಾಡುತ್ತೇವೆ. ಇಡೀ ದೇಶದಲ್ಲಿ ನರೇಂದ್ರ ಮೋದಿಯವರ ಪರವಾದ ಅಲೆ ಎದ್ದಿದೆ. ಇಡೀ ವಿಶ್ವದಲ್ಲಿ ಭಾರತದ ಬಗ್ಗೆ ಗೌರವ ಹೆಚ್ಚಿಸಿರು ಶ್ರೇಯಸ್ಸು ನರೇಂದ್ರ ಮೋದಿಯವರದ್ದು. ನರೇಂದ್ರ ಮೋದಿವರ ಕಾರ್ಯಕ್ರಮಗಳು ಬಡವರ ಪರವಾಗಿದೆ. ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್, ಎಲ್ಲವೂ ಜನರಿಗೆ ತಿಳಿದಿದೆ. ಇವೆಲ್ಲರೂ ಪರಿಣಾಮಕಾರಿಯಾಗಿ ಮುಟ್ಟಲು ಡಬಲ್ ಇಂಜಿನ್ ಸರ್ಕಾರ ಕಾರಣ. ಡಬಲ್ ಇಂಜಿನ್ ಸರ್ಕಾರ ಬಂದ ನಂತರ ಆರ್ಥಿಕವಾಗಿ, ಸಾಮಾಜಿಕವಾಗಿ ಕರ್ನಾಟಕವನ್ನು ಮುನ್ನಡೆಸಲಾಗುತ್ತಿದೆ. ಇದು ಮುಂದುವರೆಯಬೇಕಾದರೆ ಬಿಜೆಪಿ ಅಗತ್ಯ. ಮುಂಬರುವ ಚುನಾವಣೆಯಲ್ಲಿ ವಿಧಾನಸಭೆಯ 3 ನೇ ಮಹಡಿಯಲ್ಲಿ ಕಮಲವನ್ನು ಅರಳಿಸಿ ಮತ್ತೊಮ್ಮೆ ಜನಪರವಾದ ಸರ್ಕಾರವನ್ನು ತರುವ ವಿಶ್ವಾಸವಿದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಲು ನಿಮ್ಮ ಆಶೀರ್ವಾದ ಅಗತ್ಯ ಎಂದರು. ನಿಮ್ಮ ಮತ, ವಿಶ್ವಾಸಕ್ಕೆ ನೀವು ಖುಷಿ ಪಡುವ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದರು.
Advertisement
ನೀನ್ಯಾವ ಗಿರಾಕಿ? ಸಿದ್ದರಾಮಯ್ಯಗೆ ಸಿಎಂ ಪ್ರಶ್ನೆ
ಸಿದ್ದರಾಮಯ್ಯ ಅವರು ಬಸವರಾಜ ಬೊಮ್ಮಾಯಿ ನಮ್ಮ ಗಿರಾಕಿ ಎಂದು ಹೇಳಿದ್ದಾರೆ ಅವರು ಮತ್ತು ನಾನು ಜನತಾದಳದಲ್ಲಿದ್ದೆವು. ಆಗ ನಾವಿಬ್ಬರೂ ಕಾಂಗ್ರೆಸ್ಸನ್ನು ಕಟ್ಟಾ ವಿರೋಧಿಸಿದರೂ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಯಾಕೆ ಹೋದಿರಿ ನಾನು ಸಿದ್ದರಾಮಯ್ಯ ಅವರನ್ನು ಕೇಳುವೆ? ನೀನು ಈಗ ಎಲ್ಲಿದ್ದೀಯಪ್ಪಾ? ನೀನ್ಯಾವ ಗಿರಾಕಿ ಎಂದು ಕುಟುಕಿದರು.