Advertisement

ಮೈಕ್ರೋಸಾಫ್ಟ್ ನಿಂದ ವಿಂಡೋಸ್ 365 ಕ್ಲೌಡ್ ಸೇವೆ ಅನಾವರಣ

03:35 PM Jul 20, 2021 | Team Udayavani |

ನವದೆಹಲಿ: ಕಾರ್ಪೊರೇಷನ್ ವಿಂಡೋಸ್ 365 ಎಂಬ ಕ್ಲೌಡ್ ಸೇವೆಯನ್ನು ಘೋಷಿಸಿದ್ದು, ಎಲ್ಲ ಗಾತ್ರದ ಉದ್ಯಮಗಳಿಗೆ ವಿಂಡೋಸ್ 10 ಅಥವಾ ವಿಂಡೋಸ್ 11ರ ನವೀನ ಅನುಭವವನ್ನು ನೀಡಲಿದೆ. ವಿಂಡೋಸ್ 365 ನಿಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಮೈಕ್ರೋಸಾಫ್ಟ್ ಕ್ಲೌಡ್‌ಗೆ ಸಂಪರ್ಕಿಸುತ್ತದೆ, ಸಂಪೂರ್ಣ ವಿಂಡೋಸ್ ಅನುಭವವನ್ನು – ಅಪ್ಲಿಕೇಶನ್‌ಗಳು, ಡೇಟಾ ಮತ್ತು ಸೆಟ್ಟಿಂಗ್‌ಗಳನ್ನು ವೈಯಕ್ತಿಕ ಅಥವಾ ಕಾರ್ಪೊರೇಟ್ ಡಿವೈಸ್‌ಗಳಿಗೆ ಒದಗಿಸುತ್ತದೆ. ಇದು ವಿನ್ಯಾಸದಿಂದ ಸುರಕ್ಷಿತವಾಗಿದೆ ಮತ್ತು ಝೀರೋ ಟ್ರಸ್ಟ್‌ ತತ್ವಗಳೊಂದಿಗೆ ನಿರ್ಮಿಸಲಾಗಿದೆ, ವಿಂಡೋಸ್ 365 ಮಾಹಿತಿಯನ್ನು ಡಿವೈಸ್‌ಗಳ ಬದಲಿಗೆ ಕ್ಲೌಡ್‌ನಲ್ಲಿ ಸಂಗ್ರಹಿಸುತ್ತದೆ. ಮತ್ತು ಇಂಟರ್ನ್‌, ಗುತ್ತಿಗೆದಾರರಿಂದ ಆರಂಭಿಸಿ ಸಾಫ್ಟ್‌ ವೇರ್ ಡೆವಲಪರ್‌ಗಳು ಮತ್ತು ಕೈಗಾರಿಕಾ ವಿನ್ಯಾಸಕರ ತನಕ ಎಲ್ಲರಿಗೂ ಸುರಕ್ಷಿತ, ಉತ್ಪಾದಕ ಅನುಭವವನ್ನು ನೀಡುತ್ತದೆ. ವಿಂಡೋಸ್ 365 ಬೊಸ ಹೈಬ್ರೀಡ್ ವೈಯಕ್ತಿಕ ಕಂಪ್ಯೂಟಿಂಗ್ ವರ್ಗವನ್ನೂ ಸೃಷ್ಟಿಸಿದ್ದು, ಅದನ್ನು ಕ್ಲೌಡ್ ಪಿಸಿ (Cloud PC) ಎಂದು ಕರೆಯಲಾಗುತ್ತದೆ. ಇದು ಕ್ಲೌಡ್‌ನ ಶಕ್ತಿ ಹಾಗೂ ಡಿವೈಸ್‌ನ ಸಾಮರ್ಥ್ಯಗಳೊಂದಿಗೆ ವೈಯಕ್ತಿಕಗೊಳಿಸಿದ ವಿಂಡೋಸ್‌ನ ಪರಿಪೂರ್ಣ ಅನುಭವ ನೀಡಲಿದೆ.

Advertisement

ಜಗತ್ತಿನೆಲ್ಲೆಡೆಯ ಸಂಸ್ಥೆಗಳು ಹೈಬ್ರಿಡ್ ಮಾದರಿಯಲ್ಲಿ ಕಾರ್ಯಗಳನ್ನು ಸುಗಮಗೊಳಿಸಲು ಉತ್ತಮ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಉದ್ಯೋಗಿಗಳು ತಾವಿರುವ ಸ್ಥಳದಿಂದ ಅಥವಾ ಜಗತ್ತಿನ ಎಲ್ಲಿಂದಲೇ ಆದರೂ ಕೆಲಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಈ ಘೋಷಣೆಯು ಮಹತ್ವದ್ದಾಗಿದೆ.

“ವಿಂಡೋಸ್ 365 ಮೂಲಕ ನಾವು ಒಂದು ಹೊಸ ವರ್ಗವನ್ನು ಸೃಷ್ಟಿಸುತ್ತಿದ್ದೇವೆ: ಅದು ಕ್ಲೌಡ್ ಪಿಸಿ! ಸಾಸ್‌ (SaaS)ನೊಂದಿಗೆ ಅಪ್ಲಿಕೇಶನ್‌ಗಳನ್ನು ಕ್ಲೌಡ್‌ಗೆ ತಂದಂತೆಯೇ, ನಾವು ಈಗ ಆಪರೇಟಿಂಗ್ ಸಿಸ್ಟಮ್ ಅನ್ನು ಕ್ಲೌಡ್‌ಗೆ ತರುತ್ತಿದ್ದೇವೆ. ಸ್ಥಳ ಯಾವುದೇ ಇರಲಿ, ಸಂಸ್ಥೆಗಳು ತಮ್ಮ ಕಾರ್ಯಪಡೆಯು ಹೆಚ್ಚು ಉತ್ಪಾದಕ ಮತ್ತು ಸಂಪರ್ಕ ಹೊಂದುವ ಸುರಕ್ಷಿತ ಮಾರ್ಗವನ್ನು ಒದಗಿಸುತ್ತಿದ್ದೇವೆ,” ಎಂದು ಮೈಕ್ರೋಸಾಫ್ಟ್ ಚೇರ್‌ಮನ್ ಹಾಗೂ ಸಿಇಒ ಸತ್ಯ ನಾಡೆಲ್ಲ ಹೇಳಿದರು.

ಹೈಬ್ರಿಡ್ ಕೆಲಸವು ಸಂಸ್ಥೆಗಳಲ್ಲಿ ಈಗ ತಂತ್ರಜ್ಞಾನದ ಪಾತ್ರವನ್ನು ಮೂಲಭೂತವಾಗಿಯೇ ಬದಲಾಯಿಸಿದೆ. ಕಾರ್ಯಪಡೆಗಳು ಹಿಂದೆಂದಿಗಿಂತಲೂ ಹೆಚ್ಚು ಭಿನ್ನವಾಗಿರುವುದರಿಂದ, ಹೆಚ್ಚಿದ ಬಹುಮುಖತೆ, ಸರಳತೆ ಮತ್ತು ಸುರಕ್ಷತೆಯೊಂದಿಗೆ ಉತ್ತಮ ಉತ್ಪಾದಕತೆಯ ಅನುಭವವನ್ನು ನೀಡಲು ಸಂಸ್ಥೆಗಳಿಗೆ ಹೊಸ ದಾರಿಯ ಅಗತ್ಯವಿದೆ. ಕ್ಲೌಡ್ ಪಿಸಿ ಅತ್ಯಾಕರ್ಷಕ, ಹೊಸ ವರ್ಗದ ಹೈಬ್ರಿಡ್ ಪರ್ಸನಲ್ ಕಂಪ್ಯೂಟಿಂಗ್ ಆಗಿದ್ದು, ಅದು ಯಾವುದೇ ಸಾಧನವನ್ನು ವೈಯಕ್ತಿಕಗೊಳಿಸಿದ, ಉತ್ಪಾದಕ ಮತ್ತು ಸುರಕ್ಷಿತ ಡಿಜಿಟಲ್ ಕಾರ್ಯಕ್ಷೇತ್ರವಾಗಿ ಪರಿವರ್ತಿಸುತ್ತದೆ. ಇಂದಿನ ಘೋಷಣೆಯಾದ ವಿಂಡೋಸ್ 365 ಸಾಧ್ಯತೆಯ ಒಂದು ಹೊಸ ಆರಂಭವಾಗಿದೆ. ಹಾಗೂ ಡಿವೈಸ್ ಮತ್ತು ಕ್ಲೌಡ್ ನಡುವಿನ ಗೆರೆಯನ್ನು ಅಳಿಸಿ ಹಾಕುತ್ತದೆ”ಎಂದು ಮೈಕ್ರೋಸಾಫ್ಟ್ ಉಪಾಧ್ಯಕ್ಷ ಜರೆಡ್ ಸ್ಪಾಟಾರೋ ತಿಳಿಸಿದರು.

ಕೋವಿಡ್ ಸೋಂಕು ಹರಡುವ ಪೂರ್ವದಿಂದಲೇ ಉದ್ಯೋಗಿಗಳು ಎದುರಿಸುತ್ತಿದ್ದ ಸಮಸ್ಯೆಗಳ ಪರಿಹಾರಕ್ಕೆ ವಿಂಡೋಸ್ 365 ಸಹಾಯ ಮಾಡುತ್ತದೆ. ಸಂಸ್ಥೆಯ ಡೇಟಾದ ಸುರಕ್ಷತೆಯನ್ನು ಖಾತರಿಪಡಿಸುತ್ತಲೇ ಬೇರೆ ಬೇರೆ ಸ್ಥಳಗಳಿಂದ ಕೆಲಸ ಮಾಡಲು ಹೆಚ್ಚಿನ ನಮ್ಯತೆ ಮತ್ತು ಆಯ್ಕೆಗಳನ್ನು ಉದ್ಯೋಗಿಗಳು ನಿರೀಕ್ಷಿಸುತ್ತಾರೆ. ಋತುಮಾನದ ನೌಕರರು ಹೊಸ ಯಂತ್ರಾಂಶಗಳನ್ನು ನೀಡುವ ಅಥವಾ ವೈಯಕ್ತಿಕ ಸಾಧನಗಳನ್ನು ಭದ್ರಪಡಿಸುವ ವ್ಯವಸ್ಥಾಪಕ ಸವಾಲುಗಳಿಲ್ಲದೆ ತಂಡಗಳನ್ನು ಆನ್ ಮತ್ತು ಆಫ್ ಮಾಡಬಹುದು – ಕಾರ್ಯನಿರತ ಅವಧಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿ ಅಳೆಯಲು ಸಂಸ್ಥೆಗೆ ಇದು ಅನುವು ಮಾಡಿಕೊಡುತ್ತದೆ. ಸೃಜನಶೀಲ, ವಿಶ್ಲೇಷಣೆ, ಎಂಜಿನಿಯರಿಂಗ್ ಅಥವಾ ವೈಜ್ಞಾನಿಕ ಪಾತ್ರಗಳಲ್ಲಿ ಪರಿಣಿತರಾದ ನೌಕರರು ಹೆಚ್ಚಿನ ಕಂಪ್ಯೂಟ್ ಶಕ್ತಿಯನ್ನು ಹೊಂದಿದ್ದಾರೆ. ಅವರಿಗೆ ಅಗತ್ಯವಿರುವ ನಿರ್ಣಾಯಕ ಅಪ್ಲಿಕೇಶನ್‌ಗಳಿಗೆ ಸುರಕ್ಷಿತ ಲಭ್ಯತೆಯನ್ನು ಕಂಪನಿಗಳು ಸುಲಭವಾಗಿ ಖಚಿತಪಡಿಸಿಕೊಳ್ಳಬಹುದು.

Advertisement

ಶಕ್ತಿಯುತ: ತಮ್ಮ ವೈಯಕ್ತಿಕ ಕ್ಲೌಡ್ ಪಿಸಿಗೆ ಇನ್‌ಸ್ಟಂಟ್-ಆನ್ ಬೂಟ್‌ನೊಂದಿಗೆ, ಬಳಕೆದಾರರು ತಮ್ಮ ಎಲ್ಲ ಅಪ್ಲಿಕೇಶನ್‌ಗಳು, ಪರಿಕರಗಳು, ಡೇಟಾ ಮತ್ತು ಸೆಟ್ಟಿಂಗ್‌ಗಳನ್ನು ಕ್ಲೌಡ್‌ನಿಂದ ಯಾವುದೇ ಡಿವೈಸ್‌ನಲ್ಲಿ ಸ್ಟ್ರೀಮ್ ಮಾಡಬಹುದು. ವಿಂಡೋಸ್ 365 ಕ್ಲೌಡ್‌ನಲ್ಲಿ ಸಂಪೂರ್ಣ ಪಿಸಿ ಅನುಭವವನ್ನು ನೀಡುತ್ತದೆ.

ಸರಳ: ಕ್ಲೌಡ್ ಪಿಸಿಯೊಂದಿಗೆ, ಬಳಕೆದಾರರು ಲಾಗ್ ಇನ್ ಆಗಬಹುದು ಮತ್ತು ಯಾವುದೇ ಡಿವೈಸ್‌ಗಳಲ್ಲಿ ಎಲ್ಲಿ ಕೆಲಸವನ್ನು ನಿಲ್ಲಿಸಿದ್ದರೋ ಅಲ್ಲಿಂದ ಮುಂದುವರಿಸಬಹುದು. ಈ ಮೂಲಕ ಕ್ಲೌಡ್‌ನಿಂದ ತಲುಪಿಸಲಾದ ಸರಳ ಮತ್ತು ಪರಿಚಿತ ವಿಂಡೋಸ್ ಅನುಭವವನ್ನು ನೀಡುತ್ತದೆ. ಐಟಿಗಾಗಿ, ವಿಂಡೋಸ್ 365 ನಿಯೋಜನೆ, ನವೀಕರಣಗಳು ಮತ್ತು ನಿರ್ವಹಣೆಯನ್ನು ಸರಳಗೊಳಿಸುತ್ತದೆ. ಇತರ ಸಾಧನಗಳಂತಲ್ಲದೆ, ವಿಂಡೋಸ್ 365ಗೆ ಯಾವುದೇ ವರ್ಚುವಲೈಸೇಶನ್ ಅನುಭವದ ಅಗತ್ಯವಿರುವುದಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ವಿಂಡೋಸ್ 365 ಅನ್ನು ನೇರವಾಗಿ ಅಥವಾ ಕ್ಲೌಡ್ ಸೇವಾ ಪೂರೈಕೆದಾರರ ಮೂಲಕ ಖರೀದಿಸಬಹುದು ಮತ್ತು ಕೆಲವೇ ಕ್ಲಿಕ್‌ಗಳ ಮೂಲಕ ತಮ್ಮ ಸಂಸ್ಥೆಯನ್ನು ಕ್ಲೌಡ್ ಪಿಸಿಗಳೊಂದಿಗೆ ಹೊಂದಿಸಬಹುದು.

ಸುರಕ್ಷಿತ: ವಿಂಡೋಸ್ 365 ವಿನ್ಯಾಸದಿಂದ ಸುರಕ್ಷಿತವಾಗಿದೆ, ಕ್ಲೌಡ್ ಶಕ್ತಿ ಮತ್ತು ಝೀರೋ ಟ್ರಸ್ಟ್‌ ತತ್ವಗಳನ್ನು ನಿಯಂತ್ರಿಸುತ್ತದೆ. ಮಾಹಿತಿಯನ್ನು ಸಾಧನದಲ್ಲಿ ಅಲ್ಲ, ಕ್ಲೌಡ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಸದಾ ಅಪ್-ಟು-ಡೇಟ್ ಆಗಿರುವ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಯ ಶ್ರೀಮಂತ ಭದ್ರತಾ ಸಾಮರ್ಥ್ಯಗಳು ಮತ್ತು ಬೇಸ್‌ಲೈನ್‌ಗಳ ಬಲವನ್ನು ಆಧರಿಸಿ ನಿರ್ಮಿಸಿರುವ ವಿಂಡೋಸ್ 365 ಸುರಕ್ಷತೆಯನ್ನು ಸರಳಗೊಳಿಸುತ್ತದೆ ಮತ್ತು ಲಭ್ಯ ಪರಿಸರಕ್ಕೆ ಉತ್ತಮ ಭದ್ರತಾ ಸೆಟ್ಟಿಂಗ್‌ಗಳನ್ನು ಶಿಫಾರಸು ಮಾಡುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next