Advertisement

ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ‘ವಿಂಡೋಸೀಟ್; ವೀಡಿಯೋ ಹಂಚಿಕೊಂಡ ನಿರ್ದೇಶಕಿ ಶೀತಲ್

06:22 PM Aug 29, 2020 | Nagendra Trasi |

ಬೆಂಗಳೂರು: ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋಸೀಟ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡಿದ್ದಾರೆ ಶೀತಲ್ ಶೆಟ್ಟಿ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿರೋ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

Advertisement

ಅರ್ಜುನ್ ಜನ್ಯ ವಿಂಡೋ ಸೀಟ್ ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡ್ತಿರೋ ವಿಡೀಯೋ ಒಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ ಶೀತಲ್ ಶೆಟ್ಟಿ. ಪ್ರತಿಭಾವಂತ ಹಾಗೂ ವಿನಮ್ರ ವ್ಯಕ್ತಿಯ ಜೊತೆ ಕೆಲಸ ಮಾಡುವುದು ಯಾವಾಗಲೂ ಖುಷಿಯನ್ನು ಕೊಡುತ್ತದೆ ಎಂದಿದ್ದಾರೆ. ಜೊತೆಗೆ ಹಲವು ದಿನದ ತಮ್ಮ ಶ್ರಮ ಒಂದು ಸುಂದರ ಆಕಾರ ಪಡೆಯೋದನ್ನು ನೋಡಿದ್ರೆ ಮನಸ್ಸು ತುಂಬಿ ಬರುತ್ತೆ ಎಂದು ಹೇಳಿಕೊಂಡಿದ್ದಾರೆ.

ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಾಯಕ ನಟನಾಗಿ ನಟಿಸುತ್ತಿದ್ದು, ಅಮೃತಾ ಐಯ್ಯಂಗರ್, ಸಂಜನಾ ಆನಂದ್ ಚಿತ್ರದಲ್ಲಿ ನಾಯಕಿಯರಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದು ರೋಮ್ಯಾಟಿಂಕ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿರೋ ಈ ಚಿತ್ರ ಸ್ಯಾಂಡಲ್ವುಡ್ ನಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ.

ನಿರೂಪಕಿ, ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ಶೀತಲ್ ಶೆಟ್ಟಿ ನಟಿಯಾಗಿ ಕೂಡ ಸ್ಯಾಂಡಲ್ ವುಡ್ ನಲ್ಲಿ ಚಿರಪರಿಚಿತರು. ‘ವಿಂಡೋ ಸೀಟ್’ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರೋ ಈ ಬಹುಮುಖ ಪ್ರತಿಭೆ ಈಗ ತಮ್ಮ ಫಸ್ಟ್ ವೆಂಚರ್ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.  ವಿಘ್ನೇಶ್ ರಾಜ್ ಸಿನಿಮಾಟೋಗ್ರಫಿ ಚಿತ್ರಕ್ಕಿದ್ದು ಸದ್ಯದಲ್ಲೇ ಇನ್ನಷ್ಟು ಅಪ್ಡೇಟ್ ನೀಡಲಿದೆ ಚಿತ್ರತಂಡ.

Advertisement
Advertisement

Udayavani is now on Telegram. Click here to join our channel and stay updated with the latest news.

Next