Advertisement

ಅಭಿವೃದ್ಧಿಗೆ ಎಡರಂಗ ಅಭ್ಯರ್ಥಿಯನ್ನು ಗೆಲ್ಲಿಸಿ: ಸಿಎಂ

11:06 AM Oct 15, 2019 | sudhir |

ಕುಂಬಳೆ : ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಮತ್ತು ರಾಜ್ಯದಲ್ಲಿ ಶಾಂತಿ ನೆಲೆಸಲು ಎಡರಂಗ ಅಭ್ಯರ್ಥಿ ಎಂ.ಶಂಕರ ರೈ ಮಾಸ್ಟರ್‌ ಅವರನ್ನು ಗೆಲ್ಲಿಸಿರೆಂಬುದಾಗಿ ಕೇರಳ ರಾಜ್ಯ ಮುಖ್ಯಮಂತ್ರಿ, ಸಿ.ಪಿ.ಐ.ಎಂ ಪೋಲಿಟ್‌ ಬ್ಯೂರೋ ಸದಸ್ಯ ಪಿ.ಪಿಣರಾಯಿ ವಿಜಯನ್‌ ಮತದಾರರಲ್ಲಿ ವಿನಂತಿಸಿದರು.

Advertisement

ಪುತ್ತಿಗೆ ಖತೀಬ್‌ ನಗರದಲ್ಲಿ ಜರಗಿದ ಎಡರಂಗ ಚುನಾವಣಾ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ರವರು ಮಂಜೇಶ್ವರ ವಿಧಾನ ಸಭಾ ಚುನಾವಣೆಯಲ್ಲಿ ಐಕ್ಯರಂಗ ಮತ್ತು ಬಿಜೆಪಿ ಎಡರಂಗವನ್ನು ಸೋಲಿಸಲು ಮೈತ್ರಿ ಮೂಲಕ ಅಪಪ್ರಚಾರವನ್ನು ನಡೆಸಿದರೂ ಎಡರಂಗದ ಅಭ್ಯರ್ಥಿಈ ಬಾರಿ ಗೆಲ್ಲಲಿರುವರು.ಪಾಲಾಯಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಎಡರಂಗದ ಅಭ್ಯರ್ಥಿ ಅಭೂತಪೂರ್ವವಾಗಿ ಗೆದ್ದಂತೆ ಮಂಜೇಶ್ವರದಲ್ಲೂ ಗೆದ್ದು ಅದ್ಭುತ ಸೃಷ್ಟಿಯಾಗಿಲಿದೆ ಎಂದರು.ರಾಜ್ಯದಲ್ಲಿ ಕಳೆದ ಐಕ್ಯರಂಗದ ಕಾಲದಲ್ಲಿ ಭ್ರಷ್ಟಾಚಾರದಿಂದ ಕೂಡಿದ್ದ ಆಡಳಿತವಾಗಿದ್ದು ಬಳಿಕ ಆಡಳಿತ ನಡೆಸಿದ ಎಡರಂಗ ಸರಕಾರ ಭ್ರಷ್ಟಾಚಾರ ರಹಿತ ಜನಪರ ಆಡಳಿತ ನಡೆಸಿ ಜನಪ್ರಿಯವಾಗಿದೆ ಎಂದರು.

ರಾಜ್ಯ ಸರಕಾರದ ಬಂದರು ಖಾತೆ ಸಚಿವ ರಾಮಚಂದ್ರನ್‌ ಕಡನ್ನಪಳ್ಳಿ, ಕೈಗಾರಿಕಾ ಸಚಿವ ಇ.ಪಿ ಜಯರಾಜನ್‌, ಕಂದಾಯ ಸಚಿವ ಇ.ಚಂದ್ರಶೇಖರನ್‌,ಮಾಜಿ ಲೋಕಸಭಾ ಸದಸ್ಯೆ,ಸಿಪಿಎಂ ಕೇಂದ್ರ ಸಮಿತಿ ಸದಸ್ಯರಾದ ಪಿ.ಕೆ ಶ್ರೀಮತಿ ಟೀಚರ್‌, ಮಾಜಿ ಲೋಕಸಭಾ ಸದಸ್ಯ ಪಿ.ಕರುಣಾಕರನ್‌ ಸಿಪಿಐ ನೇತಾರ ಮಾಜಿ ಸಚಿವ ಕೆ.ಇ ಇಸ್ಮಾಯಿಲ್‌, ಐ.ಎನ್‌.ಎಲ್‌ ರಾಜ್ಯ ಕಾರ್ಯದರ್ಶಿ ಖಾಸಿಂ ಇರಿಕ್ಕೂರ್‌, ಶಾಸಕರಾದ ಟಿ.ವಿ ರಾಜೇಶ್‌ ಮತ್ತು ಎಂ.ರಾಜಗೋಪಾಲನ್‌, ಮೊದಲಾದವರು ಮಾತನಾಡಿದರು.ಸಭೆಯಲ್ಲಿ ಎಡರಂಗದ ಪ್ರಮುಖ ನಾಯಕರು ಭಾಗವಹಿಸಿದರು. ಸಿಪಿಐ ನೇತಾರ ಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.ಸಿಪಿಎಂ ಲೋಕಲ್‌ ಕಾರ್ಯದರ್ಶಿ ಶಿವಪ್ಪ ರೈ ಸ್ವಾಗತಿಸಿದರು.ಮುಖ್ಯಮಂತ್ರಿಯವರು ಪೈವಳಿಕೆನಗರ ಮತ್ತು ಉಪ್ಪಳದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next