Advertisement

ಹೈದರಾಬಾದ್‌ಗೆ ರೋಚಕ ಗೆಲುವು

10:25 AM Apr 18, 2017 | |

ಹೈದರಾಬಾದ್‌: ನಾಯಕ ಡೇವಿಡ್‌ ವಾರ್ನರ್‌ ಅವರ ಅಮೋಘ ಬ್ಯಾಟಿಂಗ್‌ ಮತ್ತು ಭುವನೇಶ್ವರ್‌ ಕುಮಾರ್‌ ಅವರ ಅದ್ಭುತ ಬೌಲಿಂಗ್‌ ದಾಳಿಯಿಂದಾಗಿ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾಬಾದ್‌ ತಂಡವು ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು 5 ರನ್ನುಗಳಿಂದ ರೋಮಾಂಚಕವಾಗಿ ಸೋಲಿ ಸಿತು.

Advertisement

ಹೈದರಾಬಾದ್‌ ಮೊತ್ತವನ್ನು 159 ರನ್ನಿಗೆ ನಿಯಂತ್ರಿಸಲು ಯಶಸ್ವಿಯಾಗಿದ್ದ ಪಂಜಾಬ್‌ ತಂಡವು ಆಬಳಿಕ ಬ್ಯಾಟಿಂಗ್‌
ಕುಸಿತಕ್ಕೆ ಒಳಗಾಯಿತು. ಮನನ್‌ ವೋಹ್ರ ಏಕಾಂಗಿ ಯಾಗಿ ಹೋರಾಡಿ ಗೆಲುವಿನ ಸೂಚನೆ ನೀಡಿದ್ದರೂ 19ನೇ ಓವರಿನಲ್ಲಿ 95 ರನ್‌ ಗಳಿಸಿದ ಅವರು ಔಟಾಗುತ್ತಲೇ ತಂಡದ ಸೋಲು ಖಚಿತವಾಯಿತು. ಅಂತಿಮವಾಗಿ ತಂಡ 19.4 ಓವರ್‌ಗಳಲ್ಲಿ 154 ರನ್ನಿಗೆ ಆಲೌಟಾಯಿತು. 

ತಾಳ್ಮೆಯ ಆಟದ ಪ್ರದರ್ಶನ ನೀಡಿದ ವೋಹ್ರ 50 ಎಸೆತಗಳಿಂದ 9 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 95 ರನ್‌ ಹೊಡೆದು 5 ರನ್ನಿನಿಂದ ಶತಕ ದಾಖಲಿಸಲು ವಿಫ‌ಲರಾದರು.

ಸ್ಕೋರ್‌ ಪಟ್ಟಿ
ಸನ್‌ರೈಸರ್ ಹೈದರಾಬಾದ್‌

ಡೇವಿಡ್‌ ವಾರ್ನರ್‌    ಔಟಾಗದೆ    70
ಶಿಖರ್‌ ಧವನ್‌    ಸಿ ಸಾಹ ಬಿ ಮೋಹಿತ್‌    15
ಎಂ. ಹೆನ್ರಿಕ್ಸ್‌    ಸ್ಟಂಪ್ಡ್ ಸಾಹ ಬಿ ಪಟೇಲ್‌    9
ಯುವರಾಜ್‌ ಸಿಂಗ್‌    ಸಿ ಸಾಹ ಬಿ ಪಟೇಲ್‌    0
ನಮನ್‌ ಓಜಾ    ಸ್ಟಂಪ್ಡ್ ಸಾಹ ಬಿ ಕಾರಿಯಪ್ಪ    34
ದೀಪಕ್‌ ಹೂಡ    ಸಿ ಸಂದೀಪ್‌ ಬಿ ಮೋಹಿತ್‌    12
ಮೊಹಮ್ಮದ್‌ ನಬಿ    ಸಿ ಮಿಲ್ಲರ್‌ ಬಿ ಸಂದೀಪ್‌    2
ರಶೀದ್‌ ಖಾನ್‌    ಔಟಾಗದೆ    6

Advertisement

ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ)    159

ವಿಕೆಟ್‌ ಪತನ: 1-25, 2-50, 3-50, 4-110, 5-140, 6-146

ಬೌಲಿಂಗ್‌: ಸಂದೀಪ್‌ ಶರ್ಮ     4-0-35-1, ಇಶಾಂತ್‌ ಶರ್ಮ    4-0-23-0, ಮೋಹಿತ್‌ ಶರ್ಮ 4-0-25-2, ಕೆಸಿ ಕಾರಿಯಪ್ಪ    4-0-38-1, ಅಕ್ಷರ್‌ ಪಟೇಲ್‌ 4-0-33-2

ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಹಾಶಿಮ್‌ ಆಮ್ಲ    ಎಲ್‌ಬಿಡಬ್ಲ್ಯು ಬಿ ಕುಮಾರ್‌    0
ಮನನ್‌ ವೋಹ್ರ    ಎಲ್‌ಬಿಡಬ್ಲ್ಯು ಬಿ ಕುಮಾರ್‌    95
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ವಾರ್ನರ್‌ ಬಿ ಕುಮಾರ್‌    10
ಇವೋನ್‌ ಮಾರ್ಗನ್‌    ಬಿ ಮೊಹಮ್ಮದ್‌ ನಬಿ    13
ಡೇವಿಡ್‌ ಮಿಲ್ಲರ್‌    ಬಿ ರಶೀದ್‌ ಖಾನ್‌    1
ವೃದ್ಧಿಮಾನ್‌ ಸಾಹ    ಬಿ ರಶೀದ್‌ ಖಾನ್‌    0
ಅಕ್ಷರ್‌ ಪಟೇಲ್‌    ಸಿ ಧವನ್‌ ಬಿ ಹೆನ್ರಿಕ್ಸ್‌    7
ಮೋಹಿತ್‌ ಶರ್ಮ    ಸಿ ಧವನ್‌ ಬಿ ಕುಮಾರ್‌    10
ಕೆಸಿ ಕಾರಿಯಪ್ಪ    ಬಿ ಕುಮಾರ್‌    1
ಇಶಾಂತ್‌ ಶರ್ಮ    ಬಿ ಕೌಲ್‌    2
ಸಂದೀಪ್‌ ಶರ್ಮ    ಔಟಾಗದೆ    5

ಇತರ:        10
ಒಟ್ಟು  (19.4 ಓವರ್‌ಗಳಲ್ಲಿ ಆಲೌಟ್‌)    154
ವಿಕೆಟ್‌ ಪತನ: 1-0, 2-16, 3-57, 4-62, 5-62, 6-82, 7-127, 8-144, 9-145

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌ 4-0-19-5, ಬರೀಂದರ್‌ ಸ್ರಾನ್‌        2-0-29-0, ಸಿದ್ಧಾರ್ಥ್ ಕೌಲ್‌ 3.4-0-26-1, ಮೊಹಮ್ಮದ್‌ ನಬಿ 4-0-28-1, ರಶೀದ್‌ ಖಾನ್‌ 4-0-42-2, ಮೊಸಸ್‌ ಹೆನ್ರಿಕ್ಸ್‌ 2-0-6-1

ಪಂದ್ಯಶ್ರೇಷ್ಠ: ಭುವನೇಶ್ವರ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next