Advertisement

ಮೋದಿ, ಶಾ ಬಂದರೂ ಗೆಲುವು ನಮ್ಮದೇ

07:30 AM Mar 21, 2018 | Team Udayavani |

ಮಂಗಳೂರು: ನರೇಂದ್ರ ಮೋದಿ ನೂರು ಬಾರಿ ಕರ್ನಾಟಕಕ್ಕೆ ಬಂದರೂ ಅಮಿತ್‌ ಶಾ ಯಾವುದೇ ಕಾರ್ಯತಂತ್ರ ಮಾಡಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಶಾಸಕ ಬಿ.ಎ. ಮೊದಿನ್‌ ಬಾವಾ ಅವರ ಕ್ಷೇತ್ರವಾದ ಮಂಗಳೂರು ಉತ್ತರ ಕ್ಷೇತ್ರದ ಸುರತ್ಕಲ್‌ನಲ್ಲಿ ಮಂಗಳವಾರ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಆಯೋ ಜಿಸ ಲಾದ ಜನಾಶೀರ್ವಾದ ಯಾತ್ರೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ, 2019ರ ಲೋಕಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ರಾಹುಲ್‌ ಗಾಂಧಿ ಪ್ರಧಾನಿ ಯಾಗಲಿದ್ದಾರೆ ಎಂದರು.

ಜಾತ್ಯತೀತ ಆಡಳಿತ ನೀಡುವುದು ಹಾಗೂ ಸರ್ವರಿಗೂ ರಕ್ಷಣೆ ನೀಡುವುದು ಕಾಂಗ್ರೆಸ್‌ ಸರಕಾರದ ಉದ್ದೇಶ. ನಾವು ಬಿಜೆಪಿಯಂತೆ ಢೋಂಗಿಗಳಲ್ಲ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳು ವವರು ನಾವಲ್ಲ, ಆ ಮಾತಿಗೆ ಅನ್ವರ್ಥ ವಾಗು ವಂತೆ ನಡೆದಿದ್ದೇವೆ. ಧರ್ಮ, ಜಾತಿಯ ಹೆಸರಿನಲ್ಲಿ ಸಮಾಜ ದಲ್ಲಿ ಬೆಂಕಿ ಸೃಷ್ಟಿಸಿ ಹಿಂದುತ್ವದ ಮೂಲಕ ದೇಶ ಒಡೆಯು ವವ ರಿಗೆ ಪಾಠ ಕಲಿಸ ಬೇಕಿದೆ ಎಂದವರು ಹೇಳಿದರು.

ಮೊದಿನ್‌ ಬಾವಾ ಕ್ರಿಯಾಶೀಲ, ಜನಪರ ಕಾಳಜಿಯ ಶಾಸಕರಾಗಿ ಮೂಡಿಬಂದಿದ್ದಾರೆ. ಸುರತ್ಕಲ್‌ನಲ್ಲಿದ್ದ ಹಳೆಯ ಮಾರುಕಟ್ಟೆಯನ್ನು ಬದಲಾಯಿಸಿ ಹೊಸ ಮಾರುಕಟ್ಟೆ ನಿರ್ಮಾಣ ಕ್ಕಾಗಿ ರಾಜ್ಯದ ಯಾವ ಕ್ಷೇತ್ರಕ್ಕೂ ನೀಡದಷ್ಟು ಅನುದಾನವನ್ನು ನೀಡಲಾಗಿದೆ. ರಸ್ತೆ, ಕುಡಿಯುವ ನೀರು, ಚರಂಡಿ, ಮನೆ ನಿರ್ಮಾಣ ಸೇರಿದಂತೆ ಸುರತ್ಕಲ್‌ ಭಾಗಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗಿದೆ ಎಂದರು. 

ಮೀನುಗಾರಿಕೆಗೆ ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ
ತುಳುವಿನಲ್ಲಿ ಮಾತು ಆರಂಭಿಸಿದ ರಾಹುಲ್‌ ಗಾಂಧಿ “ನಿಕ್ಲೆಗ್‌ ಎನ್ನ ನಮಸ್ಕಾರ’ ಎಂದರು. ಆ ಬಳಿಕ ನರೇಂದ್ರ ಮೋದಿ ಅವರನ್ನು ಟೀಕಿ ಸುವು ದಕ್ಕೆ ತಮ್ಮ ಭಾಷಣದ ಬಹ್ವಂಶ ವನ್ನು ಮೀಸಲಿರಿಸಿದರು. ಪ್ರತಿ ಯೊಬ್ಬನ ಖಾತೆಗೂ 15 ಲಕ್ಷ ರೂ. ನೀಡು ತ್ತೇನೆ ಎಂದ ಪ್ರಧಾನಿ ಇದು ತನಕ ಯಾರೊಬ್ಬರ ಖಾತೆಗೂ 10 ರೂ. ಕೂಡ ನೀಡಿಲ್ಲ. ಅಮೆರಿಕಕ್ಕೆ ತೆರಳಿ ಭಾರತದ ಮಾತೆಯರಿಗೆ, ಕೃಷಿಕರಿಗೆ ಮೋದಿ ಅವಮಾನಿಸಿದ್ದಾರೆ ಎಂದು ಆರೋಪಿಸಿದರು. 

Advertisement

ರಾಜ್ಯ ಕಂಡ ಅತ್ಯದ್ಭುತ ಮಾರ್ಗ ದರ್ಶಕ ರಾದ ಶ್ರೀ ನಾರಾಯಣಗುರು ಹಾಗೂ ಬಸವಣ್ಣ ಅವರು ನುಡಿದಂತೆ ನಾವು ಸಮಾಜಮುಖೀಯಾಗಿ ನಡೆದಿ ದ್ದೇವೆ. ರೈತರು, ಮೀನುಗಾರರು ಸೇರಿದಂತೆ ಸರ್ವರ ಅಭಿವೃದ್ಧಿಗೆ ರಾಜ್ಯ ಸರಕಾರ ವಿಶೇಷ ಒತ್ತು ನೀಡುತ್ತಾ ಬಂದಿದೆ. ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೀನು ಗಾರರ ಸಮಸ್ಯೆ ಪರಿಹರಿಸುವ ನಿಟ್ಟಿ ನಲ್ಲಿ ಪ್ರತ್ಯೇಕ ಸಚಿವಾಲಯ ರಚಿಸಲಾಗುವುದು ಎಂದು ಭರವಸೆ ನೀಡಿದರು. 

ಭಾರತದ ಶ್ರೀಮಂತರಿಗೆ ಹಣ ನೀಡಲಾಗುತ್ತಿದೆ, ಆದರೆ ರೈತರಿಗೆ ಹಣ ನೀಡುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಪ್ರಧಾನಿ ಹೇಳುತ್ತಾರೆ. ರಫೇಲ್‌, ಗುಜರಾತ್‌ ಪೆಟ್ರೋಲಿಯಂ, ಅಮಿತ್‌ ಶಾ ಪುತ್ರ, ನೀರವ್‌ ಮೋದಿ, ವಿಜಯ ಮಲ್ಯ ಹೀಗೆ ಹಲವರನ್ನು ಎನ್‌ಡಿಎ ಸರಕಾರ ಪೋಷಿಸಿದೆ. ನೀರವ್‌ ಮೋದಿ ದೇಶದ ಜನತೆಯ ಹಣ ಲೂಟಿ ಮಾಡಿ ಪರಾರಿ ಯಾಗಿದ್ದಾರೆ. “ಚೌಕೀದಾರ್‌’ ಇದನ್ನು ಗಮನಿಸಿಲ್ಲವೇ ಅಥವಾ ತಾವೇ ಬಾಗಿಲು ತೆರೆದು ಬಿಟ್ಟರೇ ಎಂದು ರಾಹುಲ್‌ ಪ್ರಶ್ನಿಸಿದರು.

ನಾವೆಲ್ಲರೂ ಒಂದೇ ಎಂದು ಸಾರಿದ ನಾರಾಯಣಗುರುಗಳ ಕರ್ಮ ಭೂಮಿ ಕರ್ನಾಟಕ. ಬಸವಣ್ಣ ಹಾಗೂ ನಾರಾಯಣಗುರುಗಳು ಕರ್ನಾಟಕಕ್ಕೆ ಮಾತ್ರವಲ್ಲ, ಜಗತ್ತಿಗೆ ದಾರಿದೀಪ ವಾಗಿದ್ದಾರೆ. ನುಡಿದಂತೆ ನಡೆ ವಚನ ಎಲ್ಲರಿಗೂ ಮಾರ್ಗದರ್ಶಕ. ಸಿಎಂ ಸಿದ್ದ ರಾಮಯ್ಯ ಈ ವಚನವನ್ನು ಅತ್ಯಂತ ಪ್ರಾಮಾಣಿಕವಾಗಿ ಪಾಲಿಸಿದ್ದಾರೆ. ಆದರೆ ಮೋದಿ ಮಾತು ತಪ್ಪಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಲೋಕಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ  ಮೊಲಿ, ಸಚಿವರಾದ ಡಿ.ಕೆ. ಶಿವಕುಮಾರ್‌, ಬಿ. ರಮಾನಾಥ ರೈ, ಪ್ರಮೋದ್‌ ಮಧ್ವರಾಜ್‌, ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ, ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ ಸಹಿತ ಮುಖಂಡರು ಉಪಸ್ಥಿತರಿದ್ದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊದಿನ್‌ ಬಾವಾ ಅವರು ಸ್ವಾಗತಿಸಿದರು.

ಮೋದಿ ನುಡಿದಂತೆ ನಡೆಯಲಿಲ್ಲ : ರಾಹುಲ್‌
ಕೇಂದ್ರದ ಬಿಜೆಪಿ ಸರಕಾರ ಕೇವಲ 15 ಮಂದಿ ಶ್ರೀಮಂತರಿಗೆ 2.5 ಲಕ್ಷ ಕೋ.ರೂ. ವ್ಯಯಿಸಿದೆ. ಆದರೆ ರೈತರ ಸಾಲ ಮನ್ನಾಕ್ಕೆ ಹಣವಿಲ್ಲ ಎಂದು ಮೋದಿ ಉತ್ತರಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕದ ಕಾಂಗ್ರೆಸ್‌ ಸರಕಾರ ರೈತರ ಹಿತರಕ್ಷಣೆಗೆ ಕ್ಷಿಪ್ರ ಕ್ರಮ ತೆಗೆದುಕೊಂಡಿದೆ. ಪ್ರಧಾನಿ ಮೋದಿ  ಅವರು ಬಸವಣ್ಣ, ಬ್ರಹ್ಮಶ್ರೀ ನಾರಾಯಣಗುರುಗಳು ಮೊದಲಾದ ವರ ಹೆಸರು ಪಠಿಸಿದರೇ ವಿನಾ ನುಡಿದಂತೆ ನಡೆದಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವು ದಾಗಿ ಸುಳ್ಳು ಭರವಸೆ ನೀಡಲಾಗಿದೆ. ಕಳೆದ ವರ್ಷ ಒಂದು ಲಕ್ಷ ಉದ್ಯೋಗವೂ ಸೃಷ್ಟಿಯಾಗಿಲ್ಲ. ದೇಶದ ಬಡವರಿಗೆ ಶೇ. 28 ಜಿಎಸ್‌ಟಿ ನೀಡಲು ಸಾಮರ್ಥ್ಯವಿಲ್ಲ  ಎಂದು ರಾಹುಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next