Advertisement

ಮತ್ತೊಮ್ಮೆ ಗೆದ್ದು ತೋರಿಸಿ; ಕುಮಟಳ್ಳಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

08:51 AM Jul 25, 2019 | Nagendra Trasi |

ಬೆಳಗಾವಿ: ಮೈತ್ರಿ ಸರಕಾರದ ಪತನಕ್ಕೆ ಕಾರಣರಾದ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಕ್ಷೇತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ಅಥಣಿ ವಿಧಾನಸಭಾ ಕ್ಷೇತ್ರದ ಮತದಾರರು ಕುಮಟಳ್ಳಿಗೆ ಮತ್ತೊಮ್ಮೆ ಗೆದ್ದು ಶಾಸಕರಾಗಿ ತೋರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದರ ಮೂಲಕ ಶಾಸಕರಿಗೆ ನೇರ ಸವಾಲು ಹಾಕಿದ್ದಾರೆ.

ಅತೃಪ್ತ ಶಾಸಕರ ಗುಂಪಿನಲ್ಲಿ ಆರಂಭದಿಂದಲೂ ಗುರುತಿಸಿಕೊಳ್ಳುತ್ತಾ, ರಮೇಶ ಜಾರಕಿಹೊಳಿ ಅವರಿಗೆ ಬೆಂಬಲ ನೀಡುತ್ತಲೇ ಬಂದಿದ್ದ ಕುಮಟಳ್ಳಿ ಇದೀಗ ಅಥಣಿ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಶ್ವಾಸಮತ ಯಾಚನೆಯಲ್ಲಿ ಸೋತು ಸರಕಾರ ಪತನಕ್ಕೆ ಕಾರಣವಾದ ಮಹೇಶ್ ವಿರುದ್ಧ ಮತದಾರರು ಸಾಮಾಜಿಕ ಜಾಲತಾಣಗಳಲ್ಲಿ ನೀನು ಇನ್ನೊಮ್ಮೆ ಗೆದ್ದು ತೋರಿಸು ಎಂದು ಶಾಸಕ ಕುಮಟಳ್ಳಿಗೆ ಸವಾಲು ಹಾಕುವುದರ ಮೂಲಕ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next