Advertisement

ವಿಂಬಲ್ಡನ್‌ ಟೆನಿಸ್‌: ಅಜರೆಂಕಾ, ಹಾಲೆಪ್‌ ಮುನ್ನಡೆ

12:54 AM Jul 04, 2019 | Team Udayavani |

ಲಂಡನ್‌: ಬೆಲರೂಸ್‌ ಆಟಗಾರ್ತಿ ವಿಕ್ಟೋರಿಯ ಅಜರೆಂಕಾ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್‌ ಪಂದ್ಯದ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಜತೆಗೆ ಸಿಮೋನಾ ಹಾಲೆಪ್‌, ಎಲಿನಾ ಸ್ವಿಟೋಲಿನಾ ಕೂಡ ಮುನ್ನಡೆ ಸಾಧಿಸಿದ್ದಾರೆ.

Advertisement

ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯದ ಅಜ್ಲಾ ಟಾಮ್‌ಜಾನೊವಿಕ್‌ ವಿರುದ್ಧ ಅಜರೆಂಕಾ 6-2, 6-0 ಸೆಟ್‌ಗಳ ಸುಲಭ ಗೆಲುವು ಸಾಧಿಸಿದರು. ಆರಂಭದಿಂದಲೇ ಅಜರೆಂಕಾ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿ ತನಗಿಂತ ಕೆಳ ಶ್ರೇಯಾಂಕದ ಆಟಗಾರ್ತಿಯನ್ನು ಸುಲಭದಲ್ಲಿ ಮಣಿಸಿದರು.

ಮಹಿಳಾ ವಿಭಾಗದ ಮತ್ತೂಂದು ಸಿಂಗಲ್ಸ್‌ ಪಂದ್ಯದಲ್ಲಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ರೊಮೇನಿಯಾದ ಸಿಮೋನಾ ಹಾಲೆಪ್‌ ಮುನ್ನಡೆದಿದ್ದಾರೆ. ಅವರು ಎರಡನೇ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ಆಟಗಾರ್ತಿ ಮಿಹೆಲಾ ಬುಜರ್ನೆಸ್ಕಾ ಅವರನ್ನು 6-3, 4-6, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.

ಉಕ್ರೇನಿನ ತಾರಾ ಆಟಗಾರ್ತಿ ಎಲಿನಾ ಸ್ವಿಟೋಲಿನಾಗೆ ಸುಲಭ ಮುನ್ನಡೆ ಲಭಿಸಿತು. ರಶ್ಯದ ಆಟಗಾರ್ತಿ ಮಾರ್ಗರಿಟಾ ಪಂದ್ಯದ ವೇಳೆ ಗಾಯದಿಂದ ಹಿಂದೆ ಸರಿದುದರಿಂದ ಸ್ವಿಟೋಲಿನಾ ಮುಂದಿನ ಸುತ್ತಿಗೆ ಏರಿದರು.

Advertisement

Udayavani is now on Telegram. Click here to join our channel and stay updated with the latest news.

Next