Advertisement
ನೊವಾಕ್ ಜೊಕೋವಿಕ್‌ಗೆ ಸೆಮಿಫೈನಲ್‌ನಲ್ಲಿ ಕಠಿನ ಎದುರಾಳಿಯೇನೂ ಸಿಕ್ಕಿರಲಿಲ್ಲ. ಕ್ಯಾಮರಾನ್ ನೂರಿ ಆತಿಥೇಯ ನಾಡಿನ ವರು ಎಂಬ ಕಾರಣಕ್ಕಾಗಿ ಕುತೂಹಲ ಹುಟ್ಟಿಸಿದ್ದರು. ಜತೆಗೆ ಮೊದಲ ಸೆಟ್ ಗೆದ್ದಾಗಲೂ ಎಲ್ಲರನ್ನೂ ಸೆಳೆದರು. ಆದರೆ ಜೊಕೋ ಅನುಭವಕ್ಕೆ ನೂರಿ ಸಾಟಿಯಾಗಲಿಲ್ಲ.
ಈ ಋತುವಿನ 27 ಪಂದ್ಯಗಳಲ್ಲಿ 22ರಲ್ಲಿ ಜಯ ಸಾಧಿಸಿ ರುವ ನೊವಾಕ್ ಜೊಕೋವಿಕ್ 2022ರಲ್ಲಿನ್ನೂ ಗ್ರ್ಯಾನ್‌ಸ್ಲಾಮ್ ಖಾತೆ ತೆರೆಯಬೇಕಿದೆ. ಅವರಿಗೆ ಇದು 8ನೇ ವಿಂಬಲ್ಡನ್ ಫೈನಲ್. ಈಗಾಗಲೇ 6 ಸಲ ಪ್ರಶಸ್ತಿ ಎತ್ತಿದ್ದಾರೆ. ಸೋತದ್ದು ಒಂದು ಫೈನಲ್‌ನಲ್ಲಿ ಮಾತ್ರ.
Related Articles
Advertisement
ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ನಿಕ್ ಕಿರ್ಗಿಯೋಸ್ ಕೂಡ ಈ ವರ್ಷ 27 ಪಂದ್ಯ ಆಡಿದ್ದಾರೆ. 21ರಲ್ಲಿ ಜಯಿಸಿದ್ದಾರೆ. ಅಂದರೆ ಜೊಕೋ ಆಡಿದಷ್ಟೇ ಪಂದ್ಯ, ಅವರಿಗಿಂತ ಒಂದು ಗೆಲುವು ಕಡಿಮೆ. 6 ಎಟಿಪಿ ಟೂರ್ ಸಿಂಗಲ್ಸ್ ಪ್ರಶಸ್ತಿ, ಇದೇ ವರ್ಷ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಇದಕ್ಕೂ ಮಿಗಿಲಾಗಿ ಜೊಕೋವಿಕ್ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಹಿರಿಮೆ ಇವರದು! ಈ ಗೆಲುವು ಒಲಿದದ್ದು 2017ರಲ್ಲಿ.ಮೊದಲನೆಯದು ಮೆಕ್ಸಿಕನ್ ಓಪನ್ ಕ್ವಾರ್ಟರ್ ಫೈನಲ್. ಬಳಿಕ ಅದೇ ವರ್ಷ ಇಂಡಿಯನ್ ವೆಲ್ಸ್ ಮಾಸ್ಟರ್ ಟೂರ್ನಿಯ 4ನೇ ಸುತ್ತಿನಲ್ಲೂ ಜೊಕೋಗೆ ಆಘಾತವಿಕ್ಕಿದರು. ಅಂದಹಾಗೆ ಗ್ರ್ಯಾನ್‌ಸ್ಲಾಮ್ ಫೈನಲ್ ಎಂಬುದು “ಡಿಫರೆಂಟ್ ಬಾಲ್ ಗೇಮ್’. ಆದರೆ ಇಲ್ಲಿ ಕಾಂಗರೂ ನಾಡಿನ ಟೆನಿಸಿಗ ಗೆದ್ದರೆ ಭಾರೀ ಅಚ್ಚರಿಪಡಬೇಕೆಂದಿಲ್ಲ.