ಲಂಡನ್: ತೀವ್ರ ಸ್ಪರ್ಧೆಯಿಂದ ಕೂಡಿದ ಪಂದ್ಯದಲ್ಲಿ ವಿಶ್ವ ನಂ.1 ಆ್ಯಂಡಿ ಮರ್ರೆ ವಿಂಬಲ್ಡನ್ ಓಪನ್‌ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್, ಇಂಗ್ಲೆಂಡ್‌ನ ಮರ್ರೆ 6-2, 4-6, 6-1, 7-5ರಿಂದ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ ಜಯ ಸಾಧಿಸಿದರು.
ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದ ಮರ್ರೆಗೆ 2ನೇ ಸೆಟ್‌ನಲ್ಲಿ ಇಟಲಿ ಆಟಗಾರ ತಿರುಗೇಟು ನೀಡಿದರು. ಹೀಗಾಗಿ ಈ ಹಂತದಲ್ಲಿ 1-1ರಿಂದ ಸಮಬಲ ಸಾಧಿಸಿದರು. ಆದರೆ ನಂತರದ 2 ಸೆಟ್‌ಗಳಲ್ಲಿ ಭರ್ಜರಿ ಹೋರಾಟ ಪ್ರದರ್ಶಿಸಿದ ಮರ್ರೆ ಎರಡೂ ಸೆಟ್ ವಶಪಡಿಸಿಕೊಂಡು ಪ್ರೀ ಕ್ವಾರ್ಟರ್‌ಗೆ ಲಗ್ಗೆ ಹಾಕಿದರು. ಉಳಿದಂತೆ ಪುರುಷರ ಸಿಂಗಲ್ಸ್‌ನಲ್ಲಿ ಕೆನಡಾದ ಮಿಲೊಸ್ ರಾನಿಕ್, ಬಲ್ಗೇರಿಯಾದ ಗ್ರೆಗರ್ ಡಿಮಿಟ್ರೊವ್ ಪ್ರೀ ಕ್ವಾರ್ಟರ್‌ಗೆ ಪ್ರವೇಶಿಸಿದ್ದಾರೆ.
ಏಂಜಲಿಕ್, ಕುಜ್ನೆತೊವಾಗೆ ಗೆಲುವು: ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಶ್ರೇಯಾಂಕಿತ ಆಟಗಾರ್ತಿ ಏಂಜಲಿಕ್ ಕೆರ್ಬರ್, ರಷ್ಯಾದ ಸ್ವೆಟ್ಲಾನಾ ಕುಜ್ನೆತೊÕವಾ, ಗಾರ್ಬಿನ್ ಮುಗುರುಜಾ ಪ್ರೀ ಕ್ವಾರ್ಟರ್ ಪ್ರವೇಶಿಸಿದ್ದಾರೆ. 3ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಏಂಜಲಿಕ್ ಕೆರ್ಬರ್ 4-6, 7-6(7-2), 6-4 ರಿಂದ ಅಮೆರಿಕದ ಸೆಲ್ಬಿ ರೋಜರ್ಸ್ ವಿರುದ್ಧ ಜಯ ಸಾಧಿಸಿದರು. ಮತ್ತೂಂದು ಪಂದ್ಯದಲ್ಲಿ ರಷ್ಯಾದ ಸ್ವೆಟ್ಲಾನಾ ಕುಜ್ನೆತೊÕವಾ 6-4, 6-0ದಿಂದ ಸ್ಲೊವೇನಿಯಾದ ಪೊಲೊನಾ ಹರ್ಕಾಗ್ ವಿರುದ್ಧ ಗೆದ್ದರು. ಸ್ಪೇನಿನ ಗಾರ್ಬಿನ್ ಮುಗುರುಜಾ 6-2, 6-2 ರಿಂದ ರೊಮೇನಿಯಾದ ಸುರಾನಾ ಕ್ರಿಸ್ಟಿನಾ ವಿರುದ್ಧ ಗೆಲುವು ಪಡೆದರು.
ಮಹಿಳಾ ಡಬಲ್ಸ್: ಸಾನಿಯಾ ಜೋಡಿ ಪ್ರೀ ಕ್ವಾರ್ಟರ್‌ಗೆ
ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಬೆಲ್ಜಿಯನ್ ಕರ್ಸ್ಟನ್ ಫ್ಲಿಪೆRನ್ಸ್ ಜೋಡಿ ಪ್ರೀಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತ ಮತ್ತು ಬೆಲ್ಜಿಯನ್ ಜೋಡಿ 6-3, 3-6, 6-4ರಿಂದ ಇಂಗ್ಲೆಂಡ್ ಜೋಡಿ ನವೋಮಿ ಬ್ರಾಡಿ ಮತ್ತು ಹೆದರ್ ವಾಟ್ಸನ್ ವಿರುದ್ಧ ಜಯ ಸಾಧಿಸಿದರು.
ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಾನಿಯಾ ಜೋಡಿ ಸುಲಭವಾಗಿ ಮೊದಲ ಸೆಟ್ ವಶಪಡಿಸಿಕೊಂಡಿತು. ಆದರೆ 2ನೇ ಸೆಟ್‌ನಲ್ಲಿ ಕೆಲವೊಂದು ಅನಗತ್ಯ ತಪ್ಪುಗಳನ್ನು ಮಾಡುವ ಮೂಲಕ ಭಾರತ, ಬೆಲ್ಜಿಯನ್ ಜೋಡಿ ಕಳೆದುಕೊಂಡಿತು. ಹೀಗಾಗಿ ಮೂರನೇ ಸೆಟ್ ನಿರ್ಣಾಯಕವಾಗಿತ್ತು. ಈ ಹಂತದಲ್ಲಿ ಎಚ್ಚರಿಕೆಯ ಆಟವನ್ನು ಪ್ರದರ್ಶಿಸಿದ ಸಾನಿಯಾ ಜೋಡಿ ಭರ್ಜರಿ ಸರ್ವ್, ಎದುರಾಳಿಗಳ ಸರ್ವ್‌ಗೆ ತಕ್ಕ ತಿರುಗೇಟು ನೀಡುವ ಮೂಲಕ ಅಂಕವನ್ನು ಹೆಚ್ಚಿಸಿಕೊಂಡರು. ಅಂತಿಮವಾಗಿ ಸಾನಿಯಾ ಜೋಡಿ 3ನೇ ಸೆಟ್ ಅನ್ನು 6-4ರಿಂದ ವಶಪಡಿಸಿಕೊಂಡು ಮೇಲುಗೈ ಸಾಧಿಸಿದರು. ಇಂಗ್ಲೆಂಡ್ ಜೋಡಿ ಅಂತಿಮ ಸೆಟ್‌ನಲ್ಲಿ ಹೋರಾಟ ನೀಡಿದರೂ ಕೆಲವೊಂದು ತಪ್ಪುಗಳಿಂದ ಸೆಟ್ ಕಳೆದುಕೊಂಡಿತು.