Advertisement
ಜೆಕ್ ಆಟಗಾರ್ತಿ ವೊಂಡ್ರೂಸೋವಾ ಅವರನ್ನು ಸ್ಪೇನ್‌ನ ಜೆಸ್ಸಿಕಾ ಬೌಝಾಸ್ ಮನೀರೊ 6-4, 6-2 ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿದರು.
Related Articles
Advertisement
ಪುರುಷರ ಸಿಂಗಲ್ಸ್‌ನಲ್ಲಿ ನೊವಾಕ್ ಜೊಕೋವಿಕ್, ಅಲೆಕ್ಸ್ ಡಿ ಮಿನೌರ್, ಅಲೆಕ್ಸಾಂಡರ್ ಜ್ವೆರೇವ್, ಹ್ಯೂಬರ್ಟ್ ಹರ್ಕಾಝ್, ಲೊರೆಂಜೊ ಮುಸೆಟ್ಟಿ ಗೆಲುವು ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.
ಡಬಲ್ಸ್ ನಲ್ಲಷ್ಟೇ ಮರ್ರೆ ಆಟ
ಕೊನೆಯ ಸಲ ವಿಂಬಲ್ಡನ್‌ನಲ್ಲಿ ಕಣಕ್ಕಿಳಿಯಲಿರುವ ತವರಿನ ಆ್ಯಂಡಿ ಮರ್ರೆ ಸಿಂಗಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಕೇವಲ ಡಬಲ್ಸ್‌ನಲ್ಲಿ ಆಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
37 ವರ್ಷದ ಆ್ಯಂಡಿ ಮರ್ರೆ 2 ಸಲ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದಾರೆ. 2013ರಲ್ಲಿ ಮೊದಲ ಸಲ ಗೆದ್ದಾಗ, ಬ್ರಿಟನ್‌ನ 77 ವರ್ಷಗಳ ಪ್ರಶಸ್ತಿ ಬರಗಾಲ ನೀಗಿಸಿದ್ದರು. ಅನಂತರ 2016ರಲ್ಲಿ ಚಾಂಪಿಯನ್ ಆದರು. ಒಲಿಂಪಿಕ್ಸ್‌ನಲ್ಲಿ 2 ಚಿನ್ನದ ಪದಕ ಗೆದ್ದ ಏಕೈಕ ಟೆನಿಸಿಗನೆಂಬುದು ಮರ್ರೆ ಪಾಲಿನ ಹಿರಿಮೆ. 2012ರ ಲಂಡನ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಈ ಸಾಧನೆಗೈದಿದ್ದರು. ಆ್ಯಂಡಿ ಮರ್ರೆ ಕಳೆದ ಫ್ರೆಂಚ್ ಓಪನ್ ಸಿಂಗಲ್ಸ್‌ನಲ್ಲಿ ಆಡಿದ್ದರು. ಆದರೆ ಅಲ್ಲಿ ಮೊದಲ ಸುತ್ತಿನ ಆಘಾತ ಎದುರಾಗಿತ್ತು. ತವರಿನ ವಿಂಬಲ್ಡನ್ ಟೂರ್ನಿ ತನ್ನ ವಿದಾಯಕ್ಕೆ ಅತ್ಯಂತ ಸೂಕ್ತ ಎಂಬುದಾಗಿ ಮರ್ರೆ ಹೇಳಿದ್ದಾರೆ.
ಒಸಾಕಾ: 6 ವರ್ಷಗಳಲ್ಲಿ ಮೊದಲ ಜಯ
ಜಪಾನ್‌ನ ನವೋಮಿ ಒಸಾಕಾ ಮೊದಲ ಸುತ್ತಿನ ಪಂದ್ಯ ದಲ್ಲಿ ಡಿಯಾನೆ ಪ್ಯಾರ್ರಿ ವಿರುದ್ಧ 6-1, 1-6, 6-4 ಅಂತರದ ಜಯ ಸಾಧಿಸಿದರು. ಇದು 6 ವರ್ಷಗಳಲ್ಲಿ ಒಸಾಕಾಗೆ ಒಲಿದ ಮೊದಲ ವಿಂಬಲ್ಡನ್ ಗೆಲುವು.
2019ರಲ್ಲಿ ಮೊದಲ ಸುತ್ತಿನ ಸೋಲನುಭವಿಸಿದ ಬಳಿಕ ಅವರು ವಿಂಬಲ್ಡನ್‌ನಲ್ಲಿ ಆಡಿದ್ದು ಇದೇ ಮೊದಲು. ಕಳೆದ ವರ್ಷ ಇದೇ ವೇಳೆ ತಾಯ್ತನದ ಸಂಭ್ರಮದಲ್ಲಿದ್ದರು. ಅವರ ಪುತ್ರಿ “ಶೈ’ಗೆ ಮಂಗಳವಾರ ಹುಟ್ಟುಹಬ್ಬದ ಖುಷಿ.
ಕೊಕೊ ಗಾಫ್ ಗೆಲುವು
ಕಳೆದ ವರ್ಷ ಸೋಫಿಯಾ ಕೆನಿನ್ ವಿರುದ್ಧ ಸೋತು ಮೊದಲ ಸುತ್ತಿನಲ್ಲೇ ವಿಂಬಲ್ಡನ್‌ನಿಂದ ಹೊರಬಿದ್ದ ಅಮೆರಿಕದ ಕೊಕೊ ಗಾಫ್, ಈ ಬಾರಿ ಕ್ಯಾರೋಲಿನ್ ಡೋಲ್‌ಹೈಡ್ ವಿರುದ್ಧ 6-1, 6-2 ಅಂತರದ ಜಯ ಸಾಧಿಸಿ ದ್ವಿತೀಯ ಸುತ್ತು ತಲುಪಿದರು.
ಎಮ್ಮಾ ರಾಡುಕಾನು 7-6 (0), 6-3 ಅಂತರದಿಂದ ರೆನಾಟಾ ಝರಾಜುವಾ ಅವರನ್ನು ಮಣಿಸಿದರು. ನಂ. 22 ಆಟಗಾರ್ತಿ ಎಕತೆರಿನಾ ಅಲೆಕ್ಸಾಂಡ್ರೋವಾ ಹಿಂದೆ ಸರಿದ ಕಾರಣ ಝರಾಜುವಾ ಆಯ್ಕೆ ಆಗಿದ್ದರು.
ಸುಮಿತ್‌ಗೆ ಮೊದಲ ಸುತ್ತಿನ ಸೋಲು
ಭಾರತದ ಟಾಪ್ ಸಿಂಗಲ್ಸ್ ಆಟಗಾರ ಸುಮಿತ್ ನಾಗಲ್ ವಿಂಬಲ್ಡನ್ ಸಿಂಗಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಹೊರಬಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 53ನೇ ಸ್ಥಾನದಲ್ಲಿರುವ ಸರ್ಬಿಯಾದ ಮಿಯೋಮಿರ್ ಕೆಮನೋವಿಕ್ ವಿರುದ್ಧದ ಪಂದ್ಯವನ್ನು ಸುಮಿತ್ 2-6, 6-3, 3-6, 4-6ರಿಂದ ಕಳೆದುಕೊಂಡರು. ಇದರೊಂದಿಗೆ ಕೆಮನೋವಿಕ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸುಮಿತ್ ಸೋಲನುಭವಿಸಿದಂತಾಯಿತು. 26 ವರ್ಷದ, 72ನೇ ರ್‍ಯಾಂಕ್ ಆಟಗಾರ ಸುಮಿತ್ ಇದೇ ಮೊದಲ ಬಾರಿಗೆ ವಿಂಬಲ್ಡನ್ ಪ್ರಧಾನ ಸುತ್ತಿನಲ್ಲಿ ಆಡಲಿಳಿದಿದ್ದರು.