Advertisement

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

09:41 AM Jul 04, 2024 | Team Udayavani |

ಲಂಡನ್‌: ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ ಜು. 4ರಂದು ನಡೆಯಲಿದೆ. ಕನ್ಸರ್ವೆಟಿವ್‌ ಪಕ್ಷದಿಂದ ಪ್ರಧಾನಮಂತ್ರಿ ರಿಷಿ ಸುನಕ್‌ ಹಾಗೂ ಲೇಬರ್‌ ಪಕ್ಷದಿಂದ ಕೀರ್‌ ಸ್ಟರ್ಮರ್‌ ಪ್ರಧಾನಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ.

Advertisement

ಹೌಸ್‌ ಆಫ್ ಕಾಮನ್ಸ್‌ (ಸಂಸತ್‌ ಕೆಳಮನೆ)ಒಟ್ಟು 650 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆದು ಸರಕಾರ ರಚಿಸಲು 326 ಸ್ಥಾನಗಳು ಆವಶ್ಯಕವಾಗಿದೆ. ಶುಕ್ರವಾರ ಫ‌ಲಿತಾಂಶ ಫ‌ಲಿತಾಂಶ ಪ್ರಕಟವಾಗಲಿದೆ. ಕಳೆದ ಚುನಾವಣೆಯಲ್ಲಿ ರಿಷಿ ಸುನಕ್‌ ನೇತೃತ್ವದ ಕನ್ಸರ್ವೆಟಿವ್‌ ಪಕ್ಷ 344 ಕ್ಷೇತ್ರಗಳಲ್ಲಿ ಗೆದ್ದು ಸರಕಾರ ರಚಿಸಿತ್ತು. ಮುಂದಿನ ವರ್ಷದ ಜನವರಿಯಲ್ಲಿ ನಿಗದಿಯಂತೆ ಸಂಸತ್‌ ಚುನಾವಣೆ ನಡೆಯಬೇಕಾಗಿತ್ತು. ಆದರೆ 6 ತಿಂಗಳು ಮೊದಲೇ ಸಂಸತ್‌ ವಿಸರ್ಜಿಸಿ ಚುನಾವಣೆಗೆ ಹೋಗುವ ನಿರ್ಧಾರ ವನ್ನು ರಿಷಿ ಸುನಕ್‌ ಕೈಗೊಂಡಿದ್ದಾರೆ.

ಕಣದಲ್ಲಿ 15 ಭಾರತೀಯ ಮೂಲದವರು: ಕನ್ಸರ್ವೆಟಿವ್‌, ಲೇಬರ್‌ ಪಕ್ಷದಿಂದ ಒಟ್ಟು 15 ಭಾರತೀಯ ಮೂಲದವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಪ್ರಧಾನಿ ರಿಷಿ ಸುನಕ್‌, ಅಲೋಕ್‌ ಶರ್ಮಾ, ಗಾಯತ್ರಿ ಸತ್ಯನಾಥ್‌, ಅನಿತಾ ಪ್ರಭಾಕರ್‌ ಇತರರು ಕಣದಲ್ಲಿದ್ದಾರೆ.

ಇದನ್ನೂ ಓದಿ: LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next