Advertisement
ಸೋಮವಾರದ ಪಂದ್ಯದಲ್ಲಿ ಎಲೆನಾ ರಿಬಾಕಿನಾ ಸುಲಭದಲ್ಲಿ ಮುನ್ನಡೆ ಸಾಧಿಸಿದರು. ಪಂದ್ಯದ ವೇಳೆ ಇವರ ಎದುರಾಳಿ ರಷ್ಯಾದ ಅನ್ನಾ ಕಲಿನ್‌ಸ್ಕಾಯಾ ಗಾಯಾಳಾಗಿ ಹಿಂದೆ ಸರಿದರು. ಆಗ ರಿಬಾಕಿನಾ 6-3, 3-0 ಮುನ್ನಡೆಯಲ್ಲಿದ್ದರು. ಇನ್ನೊಂದು ಪಂದ್ಯದಲ್ಲಿ ಎಲಿನಾ ಸ್ವಿಟೋಲಿನಾ 6-2, 6-1ರಿಂದ ಚೀನದ ಕ್ಸಿನ್ಯು ವಾಂಗ್ ಅವರಿಗೆ ಸೋಲುಣಿಸಿದರು.
ಪುರುಷರ ಸಿಂಗಲ್ಸ್‌ನಲ್ಲಿ ಅಮೆರಿಕದ ಟಾಮಿ ಪೌಲ್, ಇಟಲಿಯ ಜಾನಿಕ್ ಸಿನ್ನರ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. 12ನೇ ಶ್ರೇಯಾಂಕದ ಟಾಮಿ ಪೌಲ್ ಸ್ಪೇನ್‌ನ ಹಿರಿಯ ಆಟಗಾರ ರಾಬರ್ಟೊ ಬೌಟಿಸ್ಟ ಅಗುಟ್ ಅವರನ್ನು 6-2, 7-6 (3) ಅಂತರದಿಂದ ಪರಾಭವಗೊಳಿಸಿದರು. ಇವರಿನ್ನು ಕಾರ್ಲೋಸ್ ಅಲ್ಕರಾಜ್ ಸವಾಲಿಗೆ ಅಣಿಯಾಗಬೇಕಿದೆ.
ವಿಶ್ವದ ನಂ.1 ಖ್ಯಾತಿಯ ಜಾನಿಕ್ ಸಿನ್ನರ್ 14ನೇ ಶ್ರೇಯಾಂಕದ ಬೆನ್ ಶೆಲ್ಟನ್ ಆಟಕ್ಕೆ 6-2, 6-4, 7-6 (9)ರಿಂದ ಶಟರ್ ಎಳೆದರು. ಇವರ ಕ್ವಾರ್ಟರ್ ಫೈನಲ್ ಎದುರಾಳಿ ಡ್ಯಾನಿಲ್ ಮೆಡ್ವೆಡೇವ್. ಬಲ್ಗೇರಿಯಾದ ಗ್ರೆಗರ್ ಡಿಮಿಟ್ರೋವ್ ಗಾಯಾಳಾದ ಕಾರಣ ಮೆಡ್ವೆಡೇವ್‌ಗೆ ಮುನ್ನಡೆ ಲಭಿಸಿತು. ಲುಲು ಸುನ್ ಗೆಲುವಿನ ಅಚ್ಚರಿ
ನ್ಯೂಜಿಲ್ಯಾಂಡ್‌ನ ಲುಲು ಸುನ್ ಅಚ್ಚರಿಯ ಗೆಲುವಿನೊಂದಿಗೆ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 123ನೇ ರ್‍ಯಾಂಕ್‌ನ ಲುಲು ಸುನ್ ಆತಿಥೇಯ ಬ್ರಿಟನ್‌ನ ಕೊನೆಯ ಆಟಗಾರ್ತಿ ಎಮ್ಮಾ ರಾಡುಕಾನು ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 6-2, 5-7, 6-2 ಅಂತರದ ಗೆಲುವು ಸಾಧಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊವೇಶಿಯಾದ ಡೋನಾ ವೆಕಿಕ್ ಅವರನ್ನು ಎದುರಿಸಲಿದ್ದಾರೆ. ವೆಕಿಕ್ ಸ್ಪೇನ್‌ನ ಪೌಲಾ ಬಡೋಸಾ ವಿರುದ್ಧ 6-2, 1-6, 6-4 ಅಂತರದಿಂದ ಗೆದ್ದು ಬಂದರು.
Related Articles
Advertisement