Advertisement
ಎಡ್ ಮತ್ತು ಬ್ಲೆಂಚ್ ಎಂಬ ಅಮೆರಿಕದಲ್ಲಿ ವಾಸಿಸಿರುವ ಆಫ್ರಿಕಾದ ದಂಪತಿ. ಅವರಿಗೆ ಬಡತನೇ ಆಸ್ತಿ. ಇನ್ನು ಆಸ್ತಿಯೆಂಬಂತೆ ಈ ದಂಪತಿಗೆ 22 ಮಕ್ಕಳು. ಎಡ್ ರೈಲ್ವೇ ಗುಮಾಸ್ತನಾದರೆ, ಬ್ಲೆಂಚ್ ಮನೆಯ ಕೆಲಸ ಮಾಡಿ ಬದುಕುತ್ತಿದ್ದರು. ದುಡಿಯುವ ಕೈಗಳು ಎರಡಾದರೆ ತಿನ್ನುವ ಕೈಗಳು ಇಪ್ಪತ್ತೆರೆಡು. ಈ ಇಪ್ಪತ್ತೇರಡು ಮಕ್ಕಳ ಪೈಕಿ 20ನೇ ಮಗಳ ಸಾಧನೆಗೆ ಇಡೀ ಜಗತ್ತೇ ತಲೆದೂಗಿತ್ತು. 20ನೇಯವಳಿಗೆ ಹುಟ್ಟಿದವಳೇ ವಿಲ್ಮಾ ರುಡಾಲ್ಫ್.
Related Articles
Advertisement
ವೈದ್ಯರ ಸಲಹೆ ಮೀರಿ ತನ್ನ ಒಂಬತ್ತನೇ ವಯಸ್ಸಿನಲ್ಲಿ ತನ್ನ ಮೊದಲ ಹೆಜ್ಜೆಯನ್ನು ನೆಲದ ಮೇಲಿರಿಸಿದಳು. ಮನೆಯ ಗೋಡೆಯನ್ನು ಹಿಡಿದು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ನಡೆಯುವುದಕ್ಕೆ ಪ್ರಯತ್ನಿಸಿದಳು. ಬಿದ್ದರೂ ಮರು ಪ್ರಯತ್ನಿಸಿ ದಿನಕ್ಕೆ ಹತ್ತಾರು ಹೆಜ್ಜೆಗಳನ್ನಿಡಲಾರಂಭಿಸಿದಳು.
ಕಾಲುಗಳು ಸೋತವು. ಆದರೆ ಪ್ರಯತ್ನವೆಂಬ ಅಸ್ತ್ರವನ್ನು ಬಿಡದೆ ಎರಡು ವರ್ಷಗಳಲ್ಲಿ ಯಾರ ಸಹಾಯವಿಲ್ಲದೆ ನಡೆಯುವುದನ್ನು, ಓಡುವುದನ್ನು ಕಲಿತಳು. ತನ್ನ 13ನೇ ವಯಸ್ಸಿಗೆ ಮೊದಲ ಬಾರಿಗೆ ಓಟದ ಸ್ಪರ್ದೆಯಲ್ಲಿ ಭಾಗವಹಿಸಿ ಕಟ್ಟಕಡೆಯವಳಾಗಿ ಎಲ್ಲರ ಪರಿಹಾಸ್ಯಕ್ಕೆ ಗುರಿಯಾದಳು. ಹದಿನೈದನೇ ವಯಸ್ಸಿನಲ್ಲಿ ವಿಲ್ಮಾಗೆ ಒಬ್ಬ ಕೋಚ್ ಪರಿಚಯವಾದರು. ತಾನು ವಿಶ್ವದ ಅತೀ ವೇಗದ ಓಟಗಾರ್ತಿಯಾಗಬೇಕೆಂಬ ಆಸೆಯನ್ನು ಅವರ ಮುಂದೆ ವ್ಯಕ್ತಪಡಿಸಿದಳು. ಈಕೆಯ ಆತ್ಮವಿಶ್ವಾಸದ ನುಡಿಯನ್ನು ಮನಗಂಡ ಅವರು ಸಹಾಯ ಮಾಡಲು ಮುಂದಾದರು. ಅದರಂತೆ ಕೋಚ್‌ನ ಸಲಹೆಯಂತೆ ದಿನನಿತ್ಯ ಅಭ್ಯಸಿಸಿ, ಎರಡೇ ವರ್ಷಗಳಲ್ಲಿ ವೇಗದ ಓಟಗಾರ್ತಿಯಾದಳು.
1960ರ ರೋಮ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದಿಗೂ ಸೋಲು ಕಾಣದ ಜುಟ್ಟಾ ಹೈನ್ ಎಂಬ ಓಟಗಾರ್ತಿಯನ್ನು 100 ಮೀ. ಓಟದಲ್ಲಿ ಹಿಂದಿಕ್ಕಿ ಮೊದಲ ಬಂಗಾರದ ಪದಕಕ್ಕೆ ಮುತ್ತಿಟ್ಟಳು. ಅನಂತರ 200 ಮೀ. ಓಟದ ಸ್ಪರ್ಧೆಯಲ್ಲಿಯೂ ಸಹಹೈನ್‌ರನ್ನು ಹಿಂದಿಕ್ಕಿ ಬಂಗಾರದ ಪದಕ ಪಡೆದಳು. ಹಾಗೇ ಮರುದಿನ 400 ಮೀ. ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಾಮಾನ್ಯವಾಗಿ ಸ್ಪರ್ಧೆಯಲ್ಲಿ ಅತಿ ವೇಗವಾಗಿ ಓಡುವವರು ಕೊನೆಯಲ್ಲಿರುತ್ತಾರೆ. ಇಲ್ಲೂ ಸಹಾ ಜುಟ್ಟಾ ಪ್ರತಿಸ್ಪರ್ಧಿ. ಓಟ ಶುರುವಾಯಿತು ಮೊದಲ ಮೂವರು ಓಟಗಾರರು ಒಬ್ಬರಿಗೊಬ್ಬರು ಕೋಲನ್ನು ಬದಲಿಸುತ್ತಾ ಓಡ ತೊಡಗಿದರು. ಸ್ಪರ್ಧೆಯ ಕೊನೆಯ ಹಂತದಲ್ಲಿ ವಿಲ್ಮಾಗೆ ಬ್ಯಾಟನ್ ಹಸ್ತಾಂತರಿಸುವಾಗ ಕೆಳಕ್ಕೆ ಬಿದ್ದಿತು. ಜುಟ್ಟಾ ಒಡಲಾರಂಭಿಸಿದಳು. ಕೆಲವೇ ಸೆಕೆಂಡ್ ಗಳಲ್ಲಿ ಹಿಂದಿಕ್ಕಿ ಮೂರನೇ ಪದಕವನ್ನು ಮುಡಿಗೇರಿಸಿಕೊಂಡರು.
ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಮೂರು ಬಂಗಾರದ ಪದಕಗಳನ್ನು ಪಡೆದ ವಿಶ್ವದ ಮೊದಲ ಓಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದಳು.