Advertisement
ಲೇಹ್‌ನಿಂದ ಪುತ್ರಿ ಚೆರಿಶ್ ಕರ್ವಾಲೊ ಜತೆ ಬೈಕ್‌ನಲ್ಲಿ ಹೊರಟ ಅವರು ಒಟ್ಟು 900 ಕಿ.ಮೀ. ಪ್ರಯಾಣಿಸಿದ್ದು, ಈ ಪೈಕಿ ಸುಮಾರು 500 ಕಿ.ಮೀ. ವರೆಗೆ ವಿಲ್ಮಾ ಅವರೇ ಬೈಕ್ ಚಲಾಯಿಸಿದ್ದರು. ಕಳೆದ ವರ್ಷವೂ ಖರ್ದುಂಗ್ಲಾ ಪಾಸ್ ರಸ್ತೆಯ ತುತ್ತ ತುದಿಗೆ ತಲುಪಬೇಕೆಂದು ಹೊರಟಿದ್ದು, ಆದರೆ ಆಗ ಇವರ ಬೈಕ್ ಕೈ ಕೊಟ್ಟಿದ್ದರಿಂದ ಸಾಧ್ಯವಾಗಿರಲಿಲ್ಲ.ವಿಲ್ಮಾ ಕುಂದಾಪುರದ ರಾಜಕೀಯ ಮುತ್ಸದ್ಧಿ ದಿ| ಎಡ್ವಿನ್ ಕ್ರಾಸ್ಟೊ ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷೆ ಲಿಯೋನೆಲ್ಲಾ ಕ್ರಾಸ್ಟೊ ಅವರ ಪುತ್ರಿಯಾಗಿದ್ದು, ಲೆಸ್ಲಿ ಕರ್ವಾಲೊ ಅವರ ಪತ್ನಿಯಾಗಿದ್ದಾರೆ. ಭಂಡಾರ್‌ಕಾರ್ಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಪೊರೇಟ್ ತರಬೇತುದಾರಾಗಿದ್ದಾರೆ.
ಖರ್ದುಂಗ್ಲಾ ಪಾಸ್ ಹಾದಿಯ ಪಯಣವು ತುಂಬಾ ಕಠಿನವಾಗಿದ್ದು, ಇಲ್ಲಿನ ಉಷ್ಣತೆ – 40 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಎತ್ತರವಾಗಿರುವುದರಿಂದ ಆಮ್ಲ ಜನಕ ಮಟ್ಟವು ತೀರಾ ಕಡಿಮೆ ಇರುತ್ತದೆ. ಇದರಿಂದ ದೀರ್ಘ ಕಾಲ ಇಲ್ಲಿ ಇರಲು ಸಾಧ್ಯವಿಲ್ಲ. ಇಲ್ಲಿಗೆ ಬರುವವರು ಬಹುತೇಕ ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಆಗಿದ್ದು, ಆ ದೃಷ್ಟಿಯಿಂದ ವಿಲ್ಮಾ ಅವರು ಈ ವಯಸ್ಸಿನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ : 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 50 ಸೀಟು ಮಾತ್ರ: ನಿತೀಶ್ ಕುಮಾರ್