ಅಮೆರಿಕ: ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್ ಬೈಡೆನ್ ಶ್ವೇತಭವನಕ್ಕೆ ಹೊಸ ಸದಸ್ಯರೊಬ್ಬರನ್ನು ಸೇರಿಸಿಕೊಂಡಿದ್ದಾರೆ. ಅವರೇ “ವಿಲ್ಲೋ’.
ಪೆನ್ಸಿಲ್ವೇನಿಯಾದ ವಿಲ್ಲೋ ಗ್ರೋವ್‌ನಿಂದ ಎರಡು ವರ್ಷದ ಹೆಣ್ಣು ಬೆಕ್ಕನ್ನು ಶ್ವೇತಭವನಕ್ಕೆ ಕರೆತರಲಾಗಿದೆ.
ಆ ಬೆಕ್ಕಿಗೆ ಅದರ ಊರಿನ ಹೆಸರನ್ನೇ ಇಡಲಾಗಿದ್ದು, ಅದರ ಚಂದದ ಫೋಟೋಗಳನ್ನು ಜಿಲ್ ಬೈಡೆನ್ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ತುಮಕೂರು:ಕುರಿ ಮೇಯಿಸಲು ಹೋದ ಒಂದೇ ಕುಟುಂಬದ ಮೂವರು ಮಕ್ಕಳು ಕೆರೆಯ ಗುಂಡಿಗೆ ಬಿದ್ದು ಸಾವು
ಕಳೆದ ವರ್ಷ ಶ್ವೇತಭವನಕ್ಕೆ ಕಮಾಂಡರ್ ಹೆಸರಿನ ಜರ್ಮನ್ ಶೆಫರ್ಡ್ ನಾಯಿ ಸೇರ್ಪಡೆಯಾಗಿತ್ತು. ಈ ಹಿಂದೆ ಜಾರ್ಜ್ ಡಬ್ಲ್ಯೂ ಬುಷ್ ಅವರು ಅಧ್ಯಕ್ಷರಾಗಿದ್ದಾಗಲೂ ಶ್ವೇತಭವನದಲ್ಲಿ ಬೆಕ್ಕನ್ನು ಸಾಕಲಾಗಿತ್ತು.