Advertisement

ವಿಲಿಯಮ್ಸನ್‌, ರವೀಂದ್ರ ಆಕರ್ಷಕ ಶತಕ ; ನ್ಯೂಜಿಲ್ಯಾಂಡ್‌ 2 ವಿಕೆಟಿಗೆ 258

11:10 PM Feb 04, 2024 | Team Udayavani |

ಮೌಂಟ್‌ ಮಾಂಗನುಯಿ: ಕೇನ್‌ ವಿಲಿಯಮ್ಸನ್‌ ಮತ್ತು ರಚಿನ್‌ ರವೀಂದ್ರ ಅವರ ಆಕರ್ಷಕ ಶತಕದಿಂದಾಗಿ ನ್ಯೂಜಿ ಲ್ಯಾಂಡ್‌ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನ ಎರಡು ವಿಕೆಟಿಗೆ 258 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ದಿನದಾಟದ ಅಂತ್ಯಕ್ಕೆ ವಿಲಿಯಮ್ಸನ್‌ 112 ಮತ್ತು ರವೀಂದ್ರ 118 ರನ್‌ ಗಳಿಸಿ ಆಡುತ್ತಿದ್ದರು. ಅವರಿಬ್ಬರು ಮುರಿಯದ ಮೂರನೇ ವಿಕೆಟಿಗೆ ಈಗಾಗಲೇ 219 ರನ್‌ ಪೇರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದ್ದಾರೆ. ಇದು ಟೆಸ್ಟ್‌ನಲ್ಲಿ ವಿಲಿಯಮ್ಸನ್‌ ಅವರ 30ನೇ ಹಾಗೂ ರವೀಂದ್ರ ಅವರ ಚೊಚ್ಚಲ ಶತಕವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next