ನವದೆಹಲಿ: ಪೆನ್ನುಗಳ ಮಾರುಕಟ್ಟೆಯಲ್ಲಿ ದೊಡ್ಡ ಹೆಸರಾಗಿರುವ ಅಮೆರಿಕದ 110 ವರ್ಷಗಳಷ್ಟು ಹಳೆಯ ಶೀಫರ್ ಸಂಸ್ಥೆಯನ್ನು ಬೆಂಗಳೂರಿನ ವಿಲಿಯಮ್ ಪೆನ್ ಸಂಸ್ಥೆ ತನ್ನದಾಗಿಸಿಕೊಂಡಿದೆ.
ವಿವಿಧ ದೇಶಗಳ ಪ್ರಸಿದ್ಧ ಬ್ರ್ಯಾಂಡ್‌ನ ಪೆನ್ನುಗಳಿಗೆ ಮಾರುಕಟ್ಟೆ ನಿರ್ಮಿಸಿಕೊಟ್ಟಿರುವ ವಿಲಿಯಮ್ ಪೆನ್ ಸಂಸ್ಥೆಯು ಶೀಫರ್‌ನ ಪೆನ್ನುಗಳಿಗೆ ಭಾರತವನ್ನು ನಂ.1 ಮಾರುಕಟ್ಟೆಯಾಗಿ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ.
ಫೌಂಟೆನ್ ಪೆನ್ನುಗಳ ಮಾಲೀಕತ್ವ ಹೊಂದಿರುವ ಶೀಫರ್ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಇನ್ನು ಮುಂದೆ ವಿಲಿಯಮ್ ಪೆನ್ ಸಂಸ್ಥೆಯದ್ದಾಗಿರಲಿದೆ. ಅಮೆರಿಕ, ಬ್ರಿಟನ್, ಮೆಕ್ಸಿಕೋ ಸೇರಿ ಒಟ್ಟು 75 ರಾಷ್ಟ್ರಗಳಲ್ಲಿ ಈ ಪೆನ್ನುಗಳ ಉತ್ಪಾದನೆ, ಮಾರಾಟದ ಜವಾಬ್ದಾರಿಯನ್ನು ಸಂಸ್ಥೆ ಹೊತ್ತಿದೆ.
ಇದನ್ನೂ ಓದಿ:ಬಂದಿದೆ ಹೊಸ ಫೀಚರ್ಸ್;ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಲೆಫ್ಟ್ ಆಗಬಹುದು!
ಸದ್ಯ 790 ರೂ.ಗಿಂತ ಹೆಚ್ಚು ಬೆಲೆಯ ಪೆನ್ನುಗಳ ಮಾರುಕಟ್ಟೆಯಲ್ಲಿ ಶೇ.15 ಪಾಲನ್ನು ಶೀಫರ್ ಹೊಂದಿದೆ. ಮುಂದಿನ 3 ವರ್ಷಗಳೊಳಗಾಗಿ ಇದನ್ನು ಶೇ.30ಕ್ಕೆ ಏರಿಸುವುದಾಗಿ ವಿಲಿಯಮ್ ಪೆನ್ ಸಂಸ್ಥೆಯ ಸಂಸ್ಥಾಪಕರಾಗಿರುವ ವಿಲಿಯಮ್ ಪೆನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ನಿಕಿಲ್ ರಂಜನ್ ತಿಳಿಸಿದ್ದಾರೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ವಿಲಿಯಮ್ ಪೆನ್ ಸಂಸ್ಥೆಯು ಲ್ಯಾಪಿಸ್ ಬಾರ್ಡ್, ಮೌಂಟ್‌ಬ್ಲಾಂಕ್, ಕ್ರಾಸ್, ಪೆಲಿಕನ್, ಸೈಲರ್ ಸೇರಿ ಅನೇಕ ಬ್ರ್ಯಾಂಡ್‌ಗಳ ಪೆನ್ನುಗಳು ಹಾಗೂ ಬರವಣಿಗೆಯ ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ನಿರ್ಮಿಸಿಕೊಟ್ಟಿದೆ.