ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ 72 ವರ್ಷ. ಮುಂದಿನ ಲೋಕಸಭೆ ಚುನಾವಣೆಯನ್ನೂ ಬಿಜೆಪಿಯು ಅವರ ನಾಯಕತ್ವದಲ್ಲೇ ಎದುರಿಸಲಿದೆ. ಆದರೆ ಬಿಜೆಪಿಯಲ್ಲಿ 75ರ ನಂತರ ಅಧಿಕಾರವಿಲ್ಲ ಎಂಬ ನಿಯಮವಿರುವ ಕಾರಣ, ಪ್ರಧಾನಿ ಮೋದಿ ಉತ್ತರಾಧಿಕಾರಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಮೋದಿ ನಂತರ ಯಾರು ಎಂಬ ಪ್ರಶ್ನೆಗೆ ಕೆಲವು ಹೆಸರುಗಳು ಕೇಳಿ ಬರುತ್ತದೆ. ಅವರಲ್ಲಿ ಪ್ರಮುಖ ಹೆಸರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರದ್ದು.
ಟಿ.ವಿ ಕಾರ್ಯಕ್ರಮವೊಂದರಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಇದೇ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ಅವರು, “ನನಗೆ ಯಾವುದೇ ಪದವಿಯ ಆಸೆಯಿಲ್ಲ. ನಾನು ರಾಜ್ಯದಲ್ಲೇ ಇರಬಯಸುತ್ತೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಫ್ರಿದಿ ಮಗಳನ್ನು ವರಿಸಿದ ಶಾಹೀನ್ ಅಫ್ರಿದಿ: ಅದ್ಧೂರಿ ವಿವಾಹಕ್ಕೆ ಸಾಕ್ಷಿಯಾದ ಸಹ ಆಟಗಾರರು
“ಪ್ರಧಾನಿ ಮೋದಿ ಅವರ ಕಳೆದ ಒಂಬತ್ತು ವರ್ಷದ ಅಧಿಕಾರದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯು ಸೌಲಭ್ಯಗಳನ್ನು ಪಡೆದಿದ್ದಾನೆ. ಜನರಿಗೆ ನೀಡಿದ ಭರವಸೆಗಳನ್ನು ಬಿಜೆಪಿಯು ಪೂರ್ಣಗೊಳಿಸಿದೆ. ಇಷ್ಟೆಲ್ಲಾ ಕೆಲಸ ಮಾಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುವ ಸಮಯ ಇದು” ಎಂದು ಯೋಗಿ ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ. ಬಿಜೆಪಿಯು 300ರಿಂದ 315 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದರು. 2019ರ ಚುನಾವಣೆಗೆ ಹೋಲಿಸಿದರೆ 2024ರಲ್ಲಿ ಉತ್ತರ ಪ್ರದೇಶದಿಂದ ಹೆಚ್ಚು ಬಿಜೆಪಿ ಸೀಟುಗಳು ಸಿಗಲಿದೆ ಎಂದರು.
ಸನಾತನ ಧರ್ಮದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಸನಾತನ ಧರ್ಮವು ಭಾರತದ ಆತ್ಮ ಮತ್ತು ಗುರುತಾಗಿದೆ ಎಂದರು. ಅಲ್ಲದೆ ತನ್ನ ಸನಾತನ ಧರ್ಮ ರಾಷ್ಟ್ರೀಯ ಧರ್ಮ ಹೇಳಿಕೆಯನ್ನು ಪುನರುಚ್ಛರಿಸಿದರು.