Advertisement

X: ಡೇಟಿಂಗ್‌ ಆ್ಯಪ್‌ ಆಗಲಿದೆಯಾ ಎಕ್ಸ್‌ ?

09:05 PM Nov 01, 2023 | Team Udayavani |

ವಾಷಿಂಗ್ಟನ್‌: ಉದ್ಯಮಿ ಎಲಾನ್‌ ಮಸ್ಕ್ ಒಡೆತನದ ಎಕ್ಸ್‌ ಪ್ಲಾಟ್‌ಫಾರ್ಮ್ ಈಗಾಗಲೇ ಈ ಹಿಂದಿದ್ದ ಟ್ವಿಟರ್‌ ಎನ್ನುವ ಹೆಸರು, ಲೋಗೋದಿಂದ ಹಿಡಿದು ಫೀಚರ್‌ಗಳ ವರೆಗೆ ಹಲವು ಬದಲಾವಣೆಗಳನ್ನು ಕಂಡಿದೆ. ಈಗ ಮತ್ತೂಂದು ಬದಲಾವಣೆಗೂ ಎಕ್ಸ್‌ ತೆರೆದುಕೊಳ್ಳುವ ಸಾಧ್ಯತೆ ಇದ್ದು, ಬಳಕೆದಾರರಿಗೆ ಡೇಟಿಂಗ್‌ ಫೀಚರ್‌ ಅನ್ನೂ ಪರಿಚಯಿಸಲಿದೆ ಎಂದು ತಿಳಿದುಬಂದಿದೆ.

Advertisement

ಇತ್ತೀಚೆಗಷ್ಟೇ ಮಸ್ಕ್, ತಮ್ಮ ಪ್ಲಾಟ್‌ಫಾರ್ಮ್ ಎಕ್ಸ್‌ನ ಅಭಿವೃದ್ಧಿಗಾಗಿ ಉದ್ಯೋಗಿಗಳೊಂದಿಗೆ ಮಾತುಕತೆ ನಡೆಸಿದ್ದಾರಂತೆ. ಆ ಪ್ರಕಾರ, ಬೇರೆ ಡೇಟಿಂಗ್‌ ಆ್ಯಪ್‌ಗ್ಳಿಗೆ ಸ್ಪರ್ಧಿಯಾಗುವಂತೆ ಎಕ್ಸ್‌ನಲ್ಲಿಯೇ ಬಳಕೆದಾರರಿಗೆ ಡೇಟಿಂಗ್‌ ಫೀಚರ್‌ ಪರಿಚಯಿಸಲು ಯೋಜಿಸಲಾಗಿದೆ. ಹಾಗೇನಾದರೂ ಆ ಫೀಚರ್‌ ಪರಿಚಯಿಸಿದರೆ, ಬಳಕೆದಾರರು ತಮ್ಮ ಜೀವಸಂಗಾತಿಗಳನ್ನು ಹುಡುಕಿಕೊಳ್ಳುವುದಕ್ಕೂ ಎಕ್ಸ್‌ ಸಂಪರ್ಕ-ಸಂವಹನ ಮಾಧ್ಯಮವಾಗಲಿದೆ ಎನ್ನಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next