Advertisement

Chitradurga ಕ್ಷೇತ್ರದಿಂದ ಸಹೋದರನ ನಾಮಪತ್ರ ವಾಪಸ್ ತೆಗೆಸುತ್ತೇನೆ: ರೇಣುಕಾಚಾರ್ಯ

07:07 PM Apr 06, 2024 | Team Udayavani |

ದಾವಣಗೆರೆ: ಚಿತ್ರದುರ್ಗ ಎಸ್ ಸಿ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಸಹೋದರ ಎಂ.ಪಿ. ದಾರಕೇಶ್ವರಯ್ಯ ಆವರಿಂದ ನಾಮಪತ್ರ ವಾಪಸ್ ತೆಗೆಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

Advertisement

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ’ಈ ವಿಚಾರವಾಗಿ ಗೋವಿಂದ ಕಾರಜೋಳ ಅವರು ಮಾತನಾಡಿದ್ದು ಸಹೋದರ ನಾಮಪತ್ರ ಸಲ್ಲಿಸಿರುವುದನ್ನು ಕ್ಲಿಯರ್ ಮಾಡಿಸುತ್ತೇನೆ. ಸಾಮಾಜಿಕವಾಗಿ ಅವರಿಗೆ ನ್ಯಾಯ ಕೊಡಿಸಬೇಕು. ವಾಪಸ್ ಪಡೆಯಲು ಸಹೋದರನಿಗೆ ಹೇಳುತ್ತೇನೆ. ನಮಗೆ ಸಮಾಜದಲ್ಲಿ ನಮ್ಮದೇ ಆದ ಗೌರವವಿದೆ. ಅದನ್ನು ನಾವು ಉಳಿಸಿಕೊಂಡು ಹೋಗಬೇಕೇ ವಿನಃ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಬಾರದು. ನಮಗೆ ಎಸ್ ಸಿ ಸರ್ಟಿಫಿಕೇಟ್ ಬೇಡ. ಅದರಿಂದ ರಾಜಕಾರಣ ಮಾಡುವ ಅವಶ್ಯಕತೆಯೂ ನಮಗಿಲ್ಲ. ಹಿಂದೆ ನನ್ನ ಮಗಳ ಮೇಲೆಯೂ ಆರೋಪ ಬಂದಿತ್ತು’ ಎಂದರು.

ದಾವಣಗೆರೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಹೆಸರು ಹೇಳುತ್ತಿಲ್ಲ. ಅಭ್ಯರ್ಥಿಯೊಂದಿಗೆ ಪ್ರಚಾರ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ,”ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ನಮ್ಮಲ್ಲಿ ಯಾವುದೇ ಕಲ್ಮಷವೂ ಇಲ್ಲ. ಕ್ಷೇತ್ರದಲ್ಲಿ ನಿತ್ಯ ಶವ ಸಂಸ್ಕಾರ, ಮದುವೆ ಹೀಗೆ ಎಲ್ಲೆಡೆ ಪ್ರಚಾರ ಮಾಡುತ್ತಿದ್ದೇನೆ. ಮೋದಿ ನಾಮಬಲದಿಂದ ಗೆದ್ದು ಅವರ ಕೈಬಲ ಪಡಿಸಬೇಕಾಗಿರುವುದರಿಂದ ಮೋದಿ ಹೆಸರು ಹೇಳುತ್ತಿದ್ದೇನೆ. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಹೆಸರು ಹೇಳಲು ನಮಗೆ ಯಾವ ಹಿಂಜರಿಕೆಯೂ ಇಲ್ಲ.ಅಭ್ಯರ್ಥಿಯೊಂದಿಗೆ ಪ್ರಚಾರಕ್ಕೆ ಶೀಘ್ರ ದಿನಾಂಕ ನಿಗದಿ ಮಾಡುತ್ತೇವೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next