Advertisement

Vijayapura; ನಾಮಪತ್ರ ಹಿಂಪಡೆದ ಬಿಜೆಪಿ ಬಂಡುಕೋರ ಡಾ.ನಾಯಿಕ್

03:20 PM Apr 22, 2024 | keerthan |

ವಿಜಯಪುರ: ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಡಾ.ಬಾಬುರಾಜೇಂದ್ರ ನಾಯಿಕ ಪಕ್ಷೇತರರಾಗಿ ತಾವು ಸಲ್ಲಿಸಿದ್ದ ನಾಮಪತ್ರ ಹಿಂಪಡೆದಿದ್ದಾರೆ.

Advertisement

ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದ ಸೋಮವಾರ ಬಂಜಾರಾ ಸಮುದಾಯದ ಕಾಂಗ್ರೆಸ್ ಮುಖಂಡ ಅರ್ಜುನ ರಾಠೋಡ ಜೊತೆ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿ, ಜಿಲ್ಲಾ ಚುನಾವಣಾ ಅಧಿಕಾರಿ ಭೂಬಾಲನ್ ಅವರಿಗೆ ಅರ್ಜಿ ಸಲ್ಲಿಸಿ ನಾಮಪತ್ರ ಹಿಂಪಡೆದರು.

ಬಳಿಕ ಮಾತನಾಡಿದ ಅವರು, ಬಂಜಾರಾ ಸಮುದಾಯಕ್ಕೆ ಬಿಜೆಪಿ ಅಭ್ಯರ್ಥಿ- ಸಂಸದ ರಮೇಶ ಜಿಗಜಿಣಗಿ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಸ್ವಾಭಿಮಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದೆ. ಆದರೆ ಸಮಾಜದ ಮುಖಂಡರ ಸಲಹೆ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಸಮುದಾಯದ ಜನರೊಂದಿಗೆ ಹೆಜ್ಜೆ ಹಾಕಲಿದ್ದು, ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ವ್ಯಕ್ತಿ ಆಧಾತಿಯ ಹಿಡಿತದ ರಾಜಕೀಯದ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next