Advertisement

ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಲಿದೆಯೇ ಯುದ್ಧ?

12:46 AM Mar 07, 2022 | Team Udayavani |

ಮಾಸ್ಕೋ: ಉಕ್ರೇನ್‌ ಮೇಲೆ ರಷ್ಯಾ ಆರಂಭಿಸಿ ರುವ ಯುದ್ಧವು ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚತತೆಗೆ ಕಾರಣವಾಗಿದೆ. ಪುತಿನ್‌ ನಡೆಯನ್ನು ಖಂಡಿಸಿ ಹಲವು ರಾಷ್ಟ್ರಗಳು ಈಗಾ ಗಲೇ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ಹೇರಿವೆ. ಆದರೆ ಈ ಕ್ರಮಗಳು ಕೇವಲ ರಷ್ಯಾ ಮೇಲೆ ಮಾತ್ರ ವಲ್ಲದೆ ಜಗತ್ತಿನ ಇತರ ರಾಷ್ಟ್ರಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುವುದು ಖಚಿತ.

Advertisement

ವಿದೇಶಿ ಬ್ಯಾಂಕುಗಳಲ್ಲಿ ರಷ್ಯಾದ ಸುಮಾರು 100 ಶತಕೋಟಿ ಡಾಲರ್‌ ಸಾಲವಿದೆ. ಆರ್ಥಿಕ ದಿಗ್ಬಂಧನದಿಂದಾಗಿ ರಷ್ಯಾದ ಹೊರಗಿರುವ ಬ್ಯಾಂಕುಗಳೇನಾದರೂ ಸುಸ್ತಿದಾರರಾಗಿ ಬದ ಲಾದರೆ 2008ರ ಮಾದರಿಯ ಬಿಕ್ಕಟ್ಟು ಎದು ರಾಗುವ ಸಾಧ್ಯತೆಯಿದೆ. ಅಂದರೆ, ಬ್ಯಾಂಕುಗಳ ನಡುವೆಯೇ ದಿವಾಳಿಯ ಭೀತಿ ಮೂಡಿ, ಪರಸ್ಪರ ಹಣ ವಿನಿಮಯ ಮಾಡುವುದನ್ನೇ ಸ್ಥಗಿತಗೊಳಿಸಬಹುದು.

ಇದಲ್ಲದೇ ಸ್ವಿಜರ್ಲೆಂಡ್‌, ಸೈಪ್ರಸ್‌, ಯುಕೆಯಂಥ ರಾಷ್ಟ್ರಗಳಲ್ಲಿ ರಷ್ಯಾದ ಕೋಟ್ಯಧಿಪತಿಗಳು ತಮ್ಮ ಹಣವನ್ನು ಠೇವಣಿಯಿಟ್ಟಿದ್ದಾರೆ. ಆರ್ಥಿಕ ದಿಗ್ಬಂಧನ ದಿಂದಾಗಿ ಈ ದೇಶಗಳ ಹಣಕಾಸು ಸಂಸ್ಥೆಗಳ ವಹಿವಾಟು ತಗ್ಗಲಿದೆ. ಈಗಾಗಲೇ ಯುಕೆ ಬ್ಯಾಂಕ್‌ ಲಾಯ್ಡ್ಸ್ ಮತ್ತು ನ್ಯಾವೆಸ್ಟ್‌ ಷೇರುಗಳು ಶೇ.10ರಷ್ಟು ಕುಸಿದಿವೆ.

ಬ್ಯಾಂಕುಗಳು ಮಾತ್ರವಲ್ಲದೆ, ಇನ್ನೂ ಹಲವಾರು ಉದ್ಯಮಗಳ ಮೇಲೂ ಯುದ್ಧವು ವ್ಯತಿರಿಕ್ತ ಪರಿಣಾಮ ಬೀರಲಿವೆ. ರಷ್ಯಾದ ಉದ್ದಿಮೆಗಳೊಂದಿಗೆ ವಹಿವಾಟು ನಡೆಸುತ್ತಿ ರುವ ಕಂಪೆನಿಗಳು ಭಾರೀ ಸಂಕಷ್ಟ ಅನುಭವಿ ಸಲಿವೆ. ರಷ್ಯಾ ಕರೆನ್ಸಿ ರೂಬಲ್‌ ಶೇ.30ರಷ್ಟು ಪತನಗೊಂಡಿರುವುದು, ಸ್ವಿಫ್ಟ್ ಹಣಕಾಸು ಜಾಲದ ಮೇಲಿನ ನಿರ್ಬಂಧವು ಪಾವತಿ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲವಾಗಿಸ ಲಿದೆ. ಒಟ್ಟಿನಲ್ಲಿ ರಷ್ಯಾ-ಉಕ್ರೇನ್‌ ಯುದ್ಧವು ಹಲವು ಕ್ಷೇತ್ರಗಳನ್ನು ಕಂಗೆಡಿಸಲಿದ್ದು, ಮುಂಬರುವ ದಿನಗಳಲ್ಲಿ ಇದರ ಫ‌ಲಿತಾಂಶ ಕಂಡು ಬರಲಿದೆ ಎನ್ನುತ್ತಾರೆ ವಿಶ್ಲೇಷಕರು.

Advertisement

Udayavani is now on Telegram. Click here to join our channel and stay updated with the latest news.

Next