Advertisement

ರಸ್ತೆ ಬದಿಯ ತ್ಯಾಜ್ಯ ರಾಶಿಗೆ ಮುಕ್ತಿ ಸಿಗಲಿದೆಯೆ?

11:04 PM Jun 13, 2019 | Team Udayavani |

ಕುಂಬಳೆ: ಕೇಂದ್ರ ಸರಕಾರದ ಸ್ವತ್ಛಭಾರತ್‌ ಅಭಿಯಾನದಂಗವಾಗಿ ದೇಶಾದ್ಯಂತ ಶುಚೀಕರಣ ಕಾರ್ಯಕ್ರಮ ನಡೆಯುತ್ತಿದೆ.ಆದರೂ ಮಾಲಿನ್ಯ ರಾಶಿ ಸಂಪೂರ್ಣ ಮುಕ್ತವಾಗಲು ಇನ್ನಷ್ಟುಕಾಲ ಬೇಕಾಗಿದೆ. ನಿರುಪಯುಕ್ತ ಪ್ಲಾಸ್ಟಿಕ್‌ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಮರು ಬಳಕೆಯ ಮೂಲಕ ರಸ್ತೆ ಡಾಮರೀಕರಣಕ್ಕೆ ವಿನಿಯೋಗಿಸುವ ಕ್ರಮವನ್ನು ಕೇರಳ ಸರಕಾರ ಆರಂಭಿಸಿದೆ. ಶುಚಿತ್ವ ಮಿಷನ್‌ ಮೂಲಕ ಕೇರಳವನ್ನು ಕೇರಳ ಕ್ಲೀನ್‌ ಮತ್ತು ಗ್ರೀನ್‌ ಸ್ಟೇಟ್‌ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಂಗವಾಗಿ ತ್ಯಾಜ್ಯ ಪ್ಲಾಸ್ಟಿಕ್‌ ಮರು ಬಳಕೆ ಮಾಡುವ ಮೂಲಕ ಒಂದು ಹಂತದವರೆಗೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಇಲ್ಲವಾಗಿಸಲು ಈ ಯೋಜನೆಯಿಂದ ಸಾಧ್ಯವಾಗಲಿದೆ.

Advertisement

ಈಗಾಗಲೇ ಎರ್ನಾಕುಳಂ ಜಿಲ್ಲೆ ಯಲ್ಲಿ ಆರಂಭಿಸಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರುಬಳಕೆಯಾಗದ ತ್ಯಾಜ್ಯ ಪ್ಲಾಸ್ಟಿಕ್‌ಗಳನ್ನು ಮರುಬಳಸಿ ಡಾಮರೀಕರಣ ನಡೆಸಲಾಗಿದೆ. ರಸ್ತೆ ಪಕ್ಕ ಸಹಿತ ವಿವಿಧ ಕಡೆ ಪ್ಲಾಸ್ಟಿಕ್‌ಗಳಲ್ಲಿ ತುಂಬಿಸಿದ ತ್ಯಾಜ್ಯ ಎಸೆಯುವುದರ ಬದಲು, ನಿರುಪಯುಕ್ತ ಪ್ಲಾಸ್ಟಿಕ್‌ಗಳನ್ನು ಮನೆಗಳಲ್ಲಿ ಸಂಗ್ರಹಿಸಿ ಅವುಗಳನ್ನು ಸಂಗ್ರಹ ಕೇಂದ್ರಗಳ ಮೂಲಕ ನೀಡಿ ಮರು ಬಳಕೆಗೆ ಸಾಧ್ಯವಾಗುವುದು.
ಆಹಾರ ಒಯ್ಯಲು ಉಪಯೋಗಿಸುವ ಪ್ಲಾಸ್ಟಿಕ್‌ ಚೀಲಗಳು, ಬಾಟಿÉ ಮುಚ್ಚಳ, ಪಿವಿಸಿ ಪೈಪ್‌ ಸಹಿತ ಮರುಬಳಕೆಯಾಗದ ತ್ಯಾಜ್ಯ ಪ್ಲಾಸ್ಟಿಕ್‌ಗಳನ್ನು ಬಳಸಿಕೊಂಡು ಈಗಾಗಲೇ 240 ಕಿ. ಮೀ. ರಸ್ತೆಯನ್ನು ಪ್ರಥಮ ಹಂತದಲ್ಲಿ ಡಾಮರೀಕರಣ ಮಾಡಲಾಗಿದೆ.

ನವೆಂಬರ್‌ 1ರಂದು ಕೇರಳ ಸರಕಾರವು ಭಾರತದ ಮೊದಲ ತ್ಯಾಜ್ಯ ಮುಕ್ತ ರಾಜ್ಯವನ್ನಾಗಿಸುವ ಗುರಿಯೊಂದಿಗೆ ಹಲವು ಉಪಕ್ರಮಗಳನ್ನು ಹಮ್ಮಿಕೊಂಡಿದೆ.

ರಾಜ್ಯದಲ್ಲಿ ಮರುಬಳಕೆಯಾಗದ ಪ್ಲಾಸ್ಟಿಕ್‌ ತ್ಯಾಜ್ಯಗಳ ಸಮಸ್ಯೆಯಾಗಿದ್ದು ಇದಕ್ಕಾಗಿ ರಾಜ್ಯ ಸರಕಾರವು ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಮರುಬಳಕೆಯ ಮೂಲಕ ರಸ್ತೆ ಡಾಮರೀಕರಣಕ್ಕಾಗಿ ತಂತ್ರಜ್ಞಾನ ವನ್ನು ಬಳಸಲಾಗಿದೆ. ರಾಜ್ಯ ಕುಟುಂಬಶ್ರೀ ಘಟಕಗಳ ಸದಸ್ಯೆಯರ ನೇತೃತ್ವದಲ್ಲಿ ಮನೆ ಮನೆಗಳಿಂದ ಬಳಸಿದ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಲಾಗುವುದು.ಅಲ್ಲದೆ ವಿದ್ಯಾಲಯಗಳಿಂದ ವಿದ್ಯಾರ್ಥಿಗಳ ಮೂಲಕ, ಇತರ 418 ತ್ಯಾಜ್ಯಪ್ಲಾಸ್ಟಿಕ್‌ ಸಂಗ್ರಹ ಕೇಂದ್ರಗಳನ್ನು ತೆರೆದು ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಪ್ಲಾಸ್ಟಿಕ್‌ಗಳನ್ನು ಡಾಮರೀಕರಣ ಕಾಮಗಾರಿಗೆ ಬಳಸಲಾಗುವುದು. ಪುಡಿಮಾಡಿದ ಪ್ಲಾಸ್ಟಿಕ್‌ ಮತ್ತು ಡಾಮರನ್ನು ಸುಮಾರು 165 ಡಿಗ್ರಿ ಸೆ.ನಲ್ಲಿ ಮಿಶ್ರಣ ಮಾಡಲಾಗುವುದು. ಬಿಸಿಯಾಗಿರುವಾಗಲೇ ಇವುಗಳನ್ನು ಡಾಮರೀಕರಣಕ್ಕೆ ಬಳಸಲಾಗುವುದು. ಇದರಿಂದ ಇದು ದೀರ್ಘ‌ಕಾಲ ಬಾಳಿಕೆ ಬರುವುದು.

ಇಂತಹ ಪ್ಲಾಸ್ಟಿಕ್‌ ಬಳಸಿ ನಿರ್ಮಿಸುವ ರಸ್ತೆಯು ಹೆಚ್ಚು ಬಾಳ್ವಿಕೆ ಬರುವುದಲ್ಲದೇ ನೀರಿನಿಂದ ರಸ್ತೆ ಹಾನಿಯಾಗುವ ಸಾಧ್ಯತೆಯು ಕಡಿಮೆಯಾಗಿದೆ. ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗಲು ಮತ್ತು ವಾಹನಗಳ ಟಯರ್‌ಗಳು ಹೆಚ್ಚು ಬಾಳ್ವಿಕೆ ಬರುವುದಲ್ಲದೇ ಪ್ಲಾಸ್ಟಿಕ್‌ ಬಳಕೆಯಿಂದಾಗಿ ಡಾಮರೀಕರಣದ ಒಟ್ಟಾರೆ ವೆಚ್ಚ ಹಾಗೂ ಕಚ್ಚಾ ವಸ್ತುಗಳು ಕಡಿಮೆಯಾಗುವುದು.

Advertisement

ತ್ಯಾಜ್ಯ ಪ್ಲಾಸ್ಟಿಕ್‌ಗಳನ್ನು ಡಾಮರೀ ಕರಣಕ್ಕಾಗಿ ಬಳಸುವುದರಿಂದ ಭಾರತದ ಗ್ರೀನ್‌ ಸ್ಟೇಟ್‌ ಆಗಿ ಕೇರಳ ರಾಜ್ಯಆಯ್ಕೆಯಾಗಿದೆ. ಅಲ್ಲದೇ ಕಣ್ಣೂರು ಜಿಲ್ಲೆಯು ಈಗಾಗಲೇ ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯಾಗಿದೆ. ಈ ಕ್ರಮವು ಭಾರತದ ಉಳಿದ ರಾಜ್ಯಗಳಿಗೆ ಬಳಸಿದ ತ್ಯಾಜ್ಯ ಪ್ಲಾಸ್ಟಿಕ್‌ಗಳ ಮರುಬಳಕೆಗೆ ಬೆಂಬಲ ನೀಡುವಂತಾಗಿದೆ. ಈಗಾಗಲೇ ರಾಜ್ಯ ಸರಕಾರವು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಶೇ.10ರಷ್ಟು ತ್ಯಾಜ್ಯಪ್ಲಾಸ್ಟಿಕ್‌ಗಳನ್ನು ಬಳಸಿ ಶೇ.10ರಷ್ಟು ರಸ್ತೆಗಳನ್ನು ಪ್ರತೀ ವರ್ಷ ನಿರ್ಮಿಸುವಂತೆ ಆದೇಶ ನೀಡಿದೆ. ಇತರ ರಾಜ್ಯಗಳೂ ಈ ಯೋಜನೆಗೆ ಮುಂದಾಗಿವೆ.ರಸ್ತೆ ಡಾಮರೀಕರಣ ಕಾಮಗಾರಿಗೆ ತ್ಯಾಜ್ಯ ಪ್ಲಾಸ್ಟಿಕ್‌ ಬಳಸಿದಲ್ಲಿ ರಸ್ತೆ ಪಕ್ಕದಲ್ಲಿ ಎಸೆಯುವ ತ್ಯಾಜ್ಯ ಮಾಲಿನ್ಯ ರಾಶಿ ಮುಕ್ತವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next