Advertisement
ಹೌದು.., ಕನಕಪುರ ತಾಲೂಕಿನಲ್ಲಿ ಜಿಪಿಎಸ್ ಆಧಾ ರಿತ ರೋವರ್ ಸಹಾಯದಿಂದ ಭೂಮಾ ಪನ ಇಲಾಖೆ ಮರು ಭೂಮಾಪನ ಕಾರ್ಯಕ್ಕೆ ಮುಂದಾ ಗಿದೆ. ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬ ಳಿಯ 35 ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಮರು ಸರ್ವೆ ಕಾರ್ಯವನ್ನು ಕೈಗೊಂಡಿದ್ದು, ಇದು ಯಶಸ್ವಿ ಯಾದಲ್ಲಿ ಇಡೀ ರಾಜ್ಯದಲ್ಲಿ ಮರುಸರ್ವೆ ಕಾರ್ಯ ನಡೆಸಿ ಭೂಮಾ ಪನಕ್ಕೆ ಸಂಬಂಧಿಸಿದಂತೆ ಇವರ ವಿವಾದಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಚಿಂತನೆ ನಡೆಸಿದೆ.
Related Articles
Advertisement
ಸಮಗ್ರ ದಾಖಲೆಯೊಳಗೊಂಡ ಪಹಣಿ: ಭೂಮಿಯ ಮರು ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ರೈತರಿಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಪಹಣಿಯನ್ನು ಕಂದಾಯ ಇಲಾಖೆ ವಿತರಣೆ ಮಾಡಲಿದ್ದು, ನೂತನ ಪಹಣಿಯಲ್ಲಿ ಕೇವಲ ಭೂಮಿಯ ವಿಸ್ತೀರ್ಣ, ಬೆಳೆ, ಭೂಮಾಲೀಕತ್ವದ ವಿವರ, ಹಕ್ಕುಬಾಧ್ಯತೆಗಳಿಗಷ್ಟೇ ಸೀಮಿತ ವಾಗಿರದೆ, 11ಇ ನಕ್ಷೆ, ಟಿಪ್ಪಣಿಕಾಪಿ, ಅಟ್ಲಾಸ್ ಕಾಪಿ, ಆಕಾರ್ ಬಂದ್‌ಗಳು ಪಹಣಿಯೊಂದಿಗೆ ಲಭ್ಯ ವಾಗಲಿದ್ದು ಸಮಗ್ರ ಭೂದಾಖಲೆ ಆನ್‌ಲೈನ್‌ನಲ್ಲಿ ತಕ್ಷಣ ದೊರೆಯುವಂತಾಗುತ್ತದೆ. ಇನ್ನು 1858ರಲ್ಲಿ ರಾಜ್ಯದ ಭೂದಾಖಲೆಗಳನ್ನು ಸಿದ್ಧಪಡಿಸಿದ್ದು, ಕೆಲ ಭಾಗದಲ್ಲಿ ಆಕಾರ್‌ಬಂದ್ ಮತ್ತು ಟಿಪ್ಪಣಿ ಕಾಪಿ ಗಳಲ್ಲಿ ಹಳೆಯ ಮರಾರಿ ಭಾಷೆ ಮತ್ತು ಅಂಕಿಗಳು ಇದ್ದು ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗುತ್ತಿದೆ. ರೀ ಸರ್ವೆಯಿಂದಾಗಿ ಈ ಗೊಂದಲವನ್ನು ಪರಿಹರಿಸಬಹುದಾಗಿದೆ.
100 ವರ್ಷಗಳಿಂದ ಮರುಸರ್ವೆಯೇ ನಡೆದಿಲ್ಲ : ಪ್ರತಿ 30 ವರ್ಷಗಳಿಗೊಮ್ಮೆ ಮರು ಸರ್ವೆ ನಡೆಯಬೇಕು ಎಂದು ಕಂದಾಯ ಇಲಾಖೆಯ ನಿಯಮವಿದೆ ಯಾದರೂ ಹಲವು ಕಾರಣಗಳಿಂದ ಇದು ಸಾಧ್ಯವಾಗಿಲ್ಲ. 1920ರಲ್ಲಿ ಎಲ್ಲಾ ಭೂಮಿಗಳ ಸರ್ವೆ ಕಾರ್ಯ ನಡೆದಿದ್ದು, 1928 ರಿಂದ 40ರವರೆಗೆ ಹಿಸ್ಸಾ ಸರ್ವೆ, 1959ರಿಂದ 65ರವರೆಗೆ ಮರು ವರ್ಗೀಕರಣ ಸರ್ವೆ ನಡೆದಿದ್ದು, ಇಂದಿಗೂ ಎಲ್ಲಾ ನಕಾಶೆಗಳಲ್ಲಿ ಈ ಸರ್ವೆಯ ಆಧಾರದ ಮೇಲೆ ಭೂಮಿಯನ್ನು ಗುರುತಿಸ ಲಾಗುತ್ತಿದೆ. 103 ವರ್ಷಗಳ ಬಳಿಕ ಮೊದಲ ಬಾರಿಗೆ ಜಿಪಿಎಸ್ ಆಧಾರಿತ ಯಂತ್ರಗಳ ಸಹಾಯದೊಂದಿಗೆ ಸಮಗ್ರ ಸರ್ವೆ ಕಾರ್ಯ ಆರಂಭಿಸಲಾಗಿದೆ. ಮಾನವ ಸಂಪನ್ಮೂಲವನ್ನು ಬಳಸಿ ಹಳೆಯ ವಿಧಾನದಲ್ಲಿ ಅಳತೆ ಮಾಡಿದರೆ ಸುಮಾರು 10 ವರ್ಷಗಳ ಕಾಲ ಬೇಕಾಗುವ ಸರ್ವೆ ಕಾರ್ಯ ವನ್ನು ಡ್ರೋನ್ ಮತ್ತು ರೋವರ್ ಮೂಲಕ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬಹುದಾಗಿದೆ ಎಂಬುದು ಭೂಮಾಪನ ಇಲಾಖೆ ನಂಬಿಕೆ.
ನಮ್ಮ ಸರ್ವೆ ದಾಖಲೆಗಳು ನೂರು ವರ್ಷದಷ್ಟು ಅಳೆಯದಾಗಿದ್ದು, ಅಂದಿಗೂ ಇಂದಿಗೂ ಭೂಮಿಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಕೆಲ ಕೃಷಿ ಭೂಮಿಗಳು ಜನವಸತಿ ಪ್ರದೇಶ ಗಳಾಗಿ ಪರಿ ವರ್ತನೆಗೊಂಡಿರುವುದು ಸೇರಿದಂತೆ ಸಾಕಷ್ಟು ಬದಲಾವಣೆಗಳಾಗಿವೆ. ಸರ್ಕಾರಿ ದಾಖಲೆಗಳಲ್ಲಿ ಭೂಮಿಯ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವ್ಯತ್ಯಾಸಗಳಿವೆ. ಇದರಿಂದಾಗಿ ರೈತರು ತಮ್ಮದಲ್ಲದ ತಪ್ಪಿಗೆ ಅಲೆದಾಡುವಂತಾಗಿದೆ. ಇನ್ನು ಸಾಕಷ್ಟು ಭೂವಿವಾದಗಳು ಇದ ರಿಂದಾಗಿ ಬಾಕಿ ಉಳಿದಿವೆ. ಈ ಕಾರಣದಿಂದ ಹೊಸ ತಂತ್ರಜ್ಞಾನದಲ್ಲಿ ಡ್ರೋನ್ ಮತ್ತು ರೋವರ್ ಆಧರಿಸಿ ಭೂಮಿಯ ಸಮಗ್ರ ಮರು ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದ್ದು, ಇದರಿಂದಾಗಿ ರೈತರ ಭೂ ವಿವಾದಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. -ಕೃಷ್ಣಬೈರೇಗೌಡ, ಕಂದಾಯ ಸಚಿವ
– ಸು.ನಾ.ನಂದಕುಮಾರ್