Advertisement
ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವುದರಲ್ಲಿ ಆಗುತ್ತಿರುವ ವಿಳಂಬದ ಕುರಿತು ಜನಸಾಮಾನ್ಯರಲ್ಲಿ ತೀವ್ರ ಆಕ್ರೋಶ ಇದೆ ಎನ್ನುವುದರಲ್ಲಿ ಯಾರಿಗೂ ಸಂದೇಹವಿರಲಾರದು. ಹೈದರಾಬಾದ್ ಅತ್ಯಾಚಾರದಿಂದ ಹತಪ್ರಭರಾದ ಜನರ ಕೋಪಾಗ್ನಿಗೆ ಉನ್ನಾವ್‌ನಲ್ಲಿ ಬೇಲ್ ಪಡೆದುಕೊಂಡ ಆರೋಪಿಗಳು ಸಂತ್ರಸ್ತೆಯನ್ನು ಜೀವಂತ ಸುಟ್ಟ ಘಟನೆ ತುಪ್ಪ ಸುರಿಯಿತು. ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳಿಗೆ ಇನ್ನೂ ಏಕೆ ಶಿಕ್ಷೆಯಾಗಿಲ್ಲ ಎಂದು ಪುರುಷರು-ಮಹಿಳೆಯರೆನ್ನದೆ ಜನರು ಪ್ರಶ್ನಿಸುತ್ತಿದ್ದರೆ ಸಂಸತ್ತಿನಲ್ಲಿಯೂ ಅಂತಹದೇ ಭಾವನೆ ವ್ಯಕ್ತವಾಯಿತು. ಜಯಾ ಬಚ್ಚನ್‌ರಂತಹ ಹಿರಿಯ ಸದಸ್ಯರು ಕೊಂಚ ಕಟುವಾಗಿಯೇ ಮಾತನಾಡುವಷ್ಟು ಕಾಮಾಂಧ ದುರುಳರ ವಿರುದ್ಧ ಭಾವನೆ ಮೇಲುಗೈ ಸಾಧಿಸಿದ್ದು ಸಂಸತ್ತಿನಲ್ಲೂ ಧ್ವನಿಸಿತು. ಸಂಪೂರ್ಣ ದೇಶವೇ ಅಪರಾಧಿಗಳಿಗೆ ಶೀಘ್ರಾತಿಶೀಘ್ರ ಮರಣದಂಡನೆ ಶಿಕ್ಷೆಯಾಗಲಿ ಎಂದು ಒತ್ತಾಯಿಸುತ್ತಿ¨ªಾಗ ಹೈದರಾಬಾದ್ ಅತ್ಯಾಚಾರ ಪ್ರಕರಣದ ಎÇÉಾ ನಾಲ್ಕು ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತಿರುವ ಘಟನೆ ನಡೆದಿದೆ. ಹೈದರಾಬಾದಿನ ಜನತೆ ಪೊಲೀಸರ ಮೇಲೆ ಪುಷ್ಪವೃಷ್ಟಿ ಮಾಡಿ ಅಭಿನಂದಿಸಿದರೆ, ದೇಶದಾದ್ಯಂತ ರಸ್ತೆಗಳಲ್ಲಿ ಮಿಠಾಯಿ ಹಂಚಿ ಸಂಭ್ರಮಿಸಲಾಯಿತೆಂದರೆ ಅಪರಾಧಿಗಳ ವಿರುದ್ಧ ಅದೆಂತಹ ಅತ್ಯುಗ್ರ ಸಿಟ್ಟಿರಬಹುದು ಜನರಲ್ಲಿ?ಹಲವು ನಾಯಕರು, ಸಂಸತ್ ಸದಸ್ಯರು ಪೊಲೀಸರ ಕ್ರಮವನ್ನು ಸಮರ್ಥಿಸಿದರೆ, ನ್ಯಾಯ ಪ್ರಕ್ರಿಯೆ ನಡೆದು ಅಪರಾಧ ಸಾಬೀತಾಗುವ ಮೊದಲೇ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತೆನ್ನುವ ಕುರಿತು ಕೆಲವು ನಾಯಕರು ಅಪಸ್ವರ ತೆಗೆದಿ¨ªಾರೆ. ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಿ ಅಪರಾಧ ರುಜುವಾತಾದ ನಂತರ ಶಿಕ್ಷೆಯಾಗಬೇಕು ಎನ್ನುವುದು ಕಾನೂನಾತ್ಮಕ ದೃಷ್ಟಿಯಿಂದ ಸರಿಯಾದದ್ದೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿನ ವ್ಯವಸ್ಥಿತ ಕಾನೂನು ಪ್ರಕ್ರಿಯೆ ಹೊಂದಿರುವ, ವಿಶ್ವಸಮುದಾಯದ ಪ್ರಬುದ್ಧ ರಾಷ್ಟ್ರವೆನಿಸಿದ ನಮ್ಮ ದೇಶದಲ್ಲಿ ಆರೋಪ ರುಜುವಾತಾಗಬೇಕಾದ ಮೊದಲೇ ಹತ್ಯೆ ಗೈಯ್ಯಲ್ಪಡುವುದು ಸಾಮಾನ್ಯ ಸಂದರ್ಭದಲ್ಲಿ ಸರಿಯಾದದ್ದಲ್ಲ ನಿಜ. ಆದರೆ ದೇಶದಲ್ಲಿ ದುರುಳರ ಅಟ್ಟಹಾಸ ಮೇರೆ ಮೀರುತ್ತಿರುವಾಗ, ಜನರಲ್ಲಿ ನ್ಯಾಯ ಪ್ರಕ್ರಿಯೆಯ ವಿಳಂಬಗತಿಯ ಕುರಿತು ಅತೃಪ್ತಿಯ ಕಟ್ಟೆಯೊಡೆಯುತ್ತಿರುವಾಗ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಂಡರೆ ಪರಿಸ್ಥಿತಿ ವಿಸ್ಫೋಟಕವಾಗುತ್ತಿರಲಿಲ್ಲವೇ? ಕಾನೂನು-ಸುವ್ಯವಸ್ಥೆಯ ಸಮಸ್ಯೆ ಎದುರಾಗುತ್ತಿರಲಿಲ್ಲವೇ?
Related Articles
Advertisement
– ಬೈಂದೂರು ಚಂದ್ರಶೇಖರ ನಾವಡ