ಚನ್ನರಾಯಪಟ್ಟಣ: ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ನಡುವಿನ ಸಮನ್ವಯದ ಕೊರತೆಯಿಂದ ಸರ್ಕಾರ ಬಿಡುಗಡೆ ಮಾಡಿರುವ 1 ಕೋಟಿ ರೂ. ಹಣ ಕಳೆದ 28 ತಿಂಗಳಿನಿಂದ ಜಿಲ್ಲಾಧಿಕಾರಿ ಖಾತೆಯಲ್ಲಿ ಕೊಳೆಯುತ್ತಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರವಾಸೋದ್ಯಮ ಇಲಾಖೆ ಮೂಲಕ ಹಲವು ಉದ್ಯಾನವನವನ್ನು ಪ್ರವಾಸಿ ತಾಣ ಮಾಡುವ ನಿಟ್ಟಿನಲ್ಲಿ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆ ಮಾಡಿದ್ದರು. ಈ ಹಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಬಳಕೆ ಮಾಡಿಕೊಳ್ಳದೆ ಬೇಜವಾಬ್ದಾರಿ ತೋರುತ್ತಿದ್ದಾರೆ.
ಮುತುವರ್ಜಿ ತೋರದ ಅಧಿಕಾರಿಗಳು: ತಾಲೂಕಿ ನಲ್ಲಿ ಶ್ರವಣಬೆಳಗೊಳದ ಬಾಹುಬಲಿಗೆ ಈಗ್ಗೆ ಒಂದುವರೆ ವರ್ಷದ ಹಿಂದೆ ಮಹಾ ಮಸ್ತಕಾಭಿಷೇಕ ಮಹೋತ್ಸ ನೆರವೇರುವ ಈ ವೇಳೆ ಬೆಲಸಿಂದ ಪ್ರಕೃತಿ ವನ ಅಭಿವೃದ್ಧಿ ಮಾಡಲಿಲ್ಲ ಒಂದು ವೇಳೆ ಮಹಾ ಮಸ್ತಕಾಭಿಷೇಕ ಮಹೋತ್ಸವದ ಸಮಯದಲ್ಲಿ ಪ್ರಕೃತಿ ವನ ಅಭಿವೃದ್ಧಿ ಮಾಡಿದ್ದರೆ ಪ್ರವಾಸಿಗರ ತಾಣವಾಗಿ ಪರಿವರ್ತನೆ ಮಾಡಬಹುದಿತ್ತು. ಈ ಬಗ್ಗೆ ಜವಾಬ್ದಾರಿ ವಹಿಸಬೇಕಿದ್ದ ಅಧಿಕಾರಿಗಳು ಮುತುವರ್ಜಿ ತೋರದ ಹಿನ್ನೆಲೆಯಲ್ಲಿ ಬೆಲಸಿಂದ ಅಭಿವೃದ್ಧಿಯಿಂದ ಹೊರಗೆ ಉಳಿಯುವಂತಾಗಿದೆ.
ಕಬ್ಬನ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿ: ಮೈಸೂರು- ಶಿವಮೊಗ್ಗ-ಗೋವಾಕ್ಕೆ ತೆರಳುವ ರಾಜ್ಯ ಹೆದ್ದಾರಿ ಹಾಗೂ ಬೆಂಗಳೂರು-ಮಂಗಳೂರು ರಾಷ್ಟ್ರಿಯ ಹೆದ್ದಾರಿಯ ಪಕ್ಕದಲ್ಲಿ ಅದು ಪಟ್ಟಣದಲ್ಲಿನ ತಾಲೂಕು ಆಡಳಿತ ಕಚೇರಿ ಮಿನಿ ವಿಧಾನ ಸೌಧದಿಂದ ಕೇಲವ 2 ಕಿ.ಮೀ. ದೂರುದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಲಸಿಂದ ಪ್ರಕೃತಿ ಉದ್ಯಾನ ವನವಿದೆ ಇದನ್ನು ಅಭಿವೃದ್ಧಿ ಪಡಿಸುವುದರಿಂದ ನಗರವಾಸಿಗರು ನಿತ್ಯ ವಾಯು ವಿಹಾರಕ್ಕೆ ಹಾಗೂ ಚಿಕ್ಕ ಮಕ್ಕಳಿಗೆ ಬಳಕೆಯಾಗುವುದಲ್ಲದೇ ಹೆದ್ದಾರಿಯಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಕೆಲ ಹೊತ್ತು ಕಾಲ ಕಳೆಯಲು ಅನುಕೂಲ ಆಗುತ್ತದೆ ಹಾಗಾಗಿ ಈ ವನವನ್ನು ಬೆಂಗೂರಿನ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು.
4 ಮಂದಿ ಮುಖ್ಯ ಮಂತ್ರಿ ಬದಲಾದರು: ಹಣ ಬಿಡುಗಡೆ ಮಾಡಿದ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಅವಧಿ ಮುಕ್ತಾಯವಾಗಿ ರಾಜ್ಯದಲ್ಲಿ ಚುನಾವಣೆ ನಡೆದು ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿ ಅಧಿಕಾರಿ ಸ್ವೀಕರಿಸಿದರು. ಬಹುಮತ ಇಲ್ಲದ ಕಾರಣ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮಾಡಲು ಸಾಧ್ಯವಾಗಲಿಲ್ಲ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಸುಮಾರು 14 ತಿಂಗಳು ಅಧಿಕಾರಿ ನಡೆಸಿದರು, ಈಗ ಪ್ರಸ್ತುತ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾರೆ ಆದರೂ ಜಿಲ್ಲಾಧಿಕಾರಿ ಖಾತೆಯ ಅನುದಾನ ಮಾತ್ರ ಹಾಗೇ ಉಳಿದಿದೆ.
3 ಮಂದಿ ಜಿಲ್ಲಾ ಮಂತ್ರಿ ಬದಲಾದರು: ಬೆಲಸಿಂದ ಪ್ರಕೃತಿ ಉದ್ಯಾನ ವನ ಅಭಿವೃದ್ಧಿಗೆ ಹಣ ಬಿಡುಗಡೆ ಯಾದಾಗ ಹಾಸನ ಜಿಲ್ಲಾ ಉಸ್ತುವಾರಿಯಾಗಿ ಎಚ್.ಸಿ. ಮಹದೇವಪ್ಪ ಇದ್ದರು ಇದಾದ ಬಳಿಕ ಜಿಲ್ಲೆಯ ಶಾಸಕರನ್ನು ಜಿಲ್ಲಾ ಮಂತ್ರಿಯಾಗಿ ಎ.ಮಂಜು ಅವರನ್ನು ಸರ್ಕಾರ ನೇಮಕ ಮಾಡಿದರು ಜಿಲ್ಲೆಯ ವರು ಸಹ ಈ ಬಗ್ಗೆ ಗಮನ ಹರಿಸಲಿಲ್ಲ, ನಂತರ ರಾಜ್ಯದ ಸೂಪರ್ ಸಿಎಂ ಎಂದು ಖ್ಯಾತಿ ಪಡೆದಿರುವ ಅಭಿವೃದ್ಧಿ ಅಧಿಕಾರ ಎಚ್.ಡಿ.ರೇವಣ್ಣ ಅಧಿಕಾರ ನಡೆಸಿ ಮಾಜಿ ಆದರೂ ಒಂದು ಕೋಟಿ ಹಣ ವೆಚ್ಚ ಮಾಡಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿ ರುವುದ ಹಿಂದಿನ ಮರ್ಮ ತಿಳಿಯುತ್ತಿಲ್ಲ.
ಜಿಲ್ಲಾಧಿಕಾರಿಗಳು ಹಣ ಉಪಯೋಗಿಸಿಲ್ಲ: ರಾಜ್ಯ ಸರ್ಕಾರ ಬೆಲಸಿಂದ ಪ್ರಕೃತಿ ಉದ್ಯಾನ ವನವನ್ನು ಪ್ರವಾಸಿ ತಾಣವಾಗಿ ಮಾಡಲು ಹಣ ಬಿಡುಗಡೆ ಮಾಡಿದಾಗ ಅಂದು ಜಿಲ್ಲಾಧಿಕಾರಿಯಾಗಿ ಚೈತ್ರಾ ಇದ್ದರು ಇವರಾದ ಮೇಲೆ ಉಮೇಶ್ ಕುಸಗಲ್ ಜಿಲ್ಲಾಡಳಿತವನ್ನು ಮುಂದೆ ನಡೆಸಿದರು. ನಂತರ ರೋಹಿಣಿ ಸಿಂಧೂರಿ ದಾಸರಿ ಜಿಲ್ಲೆಗೆ ಆಗಮಿಸಿದಾಗ ತಮ್ಮ ಖಾತೆಯಲ್ಲಿ ಹಣ ಇರುವುದು ತಿಳಿದು ಒಮ್ಮೆ ಬೆಲಸಿಂದ ಪ್ರಕೃತಿ ವನಕ್ಕೆ ಭೇಟಿ ನೀಡಿ ಅಧಿಕಾರಿ ಗಳೊಂದಿಗೆ ಚರ್ಚಿಸಿದ್ದರು. ನಂತರದ ದಿವಸಗಳಲ್ಲಿ ಅವರ ವರ್ಗಾವಣೆೆ ವಿಷಯವಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಮೇಲೆ ಈ ಕೆಲಸ ಸ್ಥಗಿತವಾಯಿತು. ಪ್ರಸಕ್ತವಾಗಿ ಜಿಲ್ಲೆಯಲ್ಲಿ ಅಕ್ರಂ ಪಾಷಾ ಡೀಸಿ ಸ್ಥಾನದಲ್ಲಿ ಇದ್ದಾರೆ ಇವರಾದರು ಇತ್ತ ಗಮನ ಹರಿಸಬೇಕಿದೆ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ