Advertisement

 ಬಜೆಟ್‌ನಲ್ಲಿ ಜಿಲ್ಲೆಗೆ ಅನುಕೂಲವಾಗಲಿದೆಯೇ?

05:02 PM Mar 07, 2021 | Team Udayavani |

ತುಮಕೂರು: ತೆಂಗು ಬೆಳೆಗಾರರು, ಶೇಂಗಾ ಬೆಳೆಯುವ ರೈತರು, ಜಿಲ್ಲೆಯ ಜನಸಾಮಾನ್ಯರು ಸಂಕಷ್ಟ ಪಡುವ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಬಜೆಟ್‌ ಮಂಡಿಸಲು ಕ್ಷಣಗಣನೆ ಆರಂಭಗೊಂಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆಯ ಹಾದಿಯಲ್ಲಿರುವ ತುಮಕೂರು ಜಿಲ್ಲೆಗೆ ಕಳೆದ ಬಜೆಟ್‌ನಲ್ಲಿ ನಿರೀಕ್ಷಿಸಿದಷ್ಟು ಯೋಜನೆಗಳು ಕೊರೊನಾದಿಂದ ಕಾರ್ಯಗತವಾಗಿಲ್ಲ. ಮುಂದೆ ಜಿಪಂ ಮತ್ತು ತಾಂ ಚುನಾವಣೆಯ ಹೊಸ್ತಿಲಲ್ಲಿ ಮಂಡಿಸುತ್ತಿರುವ ಈ ಬಾರಿಯ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ವಿಶೇಷಯೋಜನೆಗಳು ಘೋಷಣೆ ಆಗುತ್ತವೆಯೇ..? ಎಂಬ ಪ್ರಶ್ನೆ ಮೂಡಿದೆ. ಜಿಲ್ಲೆಯು ಸ್ಮಾರ್ಟ್‌ಸಿಟಿ, ಕೈಗಾರಿಕಾ ನಗರವಾಗಿ ಅಭಿವೃದ್ಧಿಯ ಹೊಸ್ತಿಲಲ್ಲಿದ್ದು, ವಿವಿಧ ಕ್ಷೇತ್ರದಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಿರುವ ಜಿಲ್ಲೆಗೆ ಬಿಎಸ್‌ವೈ ಸರ್ಕಾರದ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಜೆಟ್‌ನಲ್ಲಿ ಜಿಲ್ಲೆಯ ಜನ ನೆನಪಿಸಿಕೊಳ್ಳುವ ಯೋಜನೆಗಳನ್ನು ಮುಖ್ಯ ಮಂತ್ರಿಗಳು ಪ್ರಕಟಿಸುವರು ಎನ್ನುವ ಕುತೂಹಲ ಮೂಡಿದೆ.

Advertisement

ರಾಜ್ಯದ ಬಜೆಟ್‌ನಲ್ಲಿ ಜಿಲ್ಲೆಯ ನಿರೀಕ್ಷೆಗಳು:

ತೆಂಗು ಬೆಳೆಗಾರರೇ ಹೆಚ್ಚಿರುವ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಮಳೆ ಕೈಕೊಟ್ಟು ತೆಂಗು ಬೆಳೆ ನಾಶವಾಗಿದೆ. ತೆಂಗು ಅಡಿಕೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಜೆಟ್‌ನಲ್ಲಿ ತೆಂಗು ಬೆಳೆಗಾರರಿಗೆ ಅನುಕೂಲ ಕಲ್ಪಿಸುವರೇ, ಜಿಲ್ಲೆಗೊಂದು ಬೆಳೆಗೆ ಉತ್ತೇಜನ ನೀಡಬೇಕು ಎಂದು ಕೇಂದ್ರ ಸರ್ಕಾರ ಪ್ರಕಟಿಸಿರುವ ವೇಳೆಯಲ್ಲಿ ಜಿಲ್ಲೆಯಲ್ಲಿ ತೆಂಗೇ ಪ್ರಧಾನ ಬೆಳೆಯಾಗಿದ್ದು ತೆಂಗು ಸ್ಪೇಷಲ್‌ ಎಕಾನಾಮಿಕ್‌ ಝೊàನ್‌ ತೆಂಗು ಟೆಕ್ನಾಲಜಿ ಪಾರ್ಕ್‌ ಬಗ್ಗೆ ಪ್ರಸ್ತಾಪ ಮಾಡುವರೆ, ಕರ್ನಾಟಕ ಹೆರಿಟೇಜ್‌ ಹಬ್‌ಗ ಯೋಜನೆ ರೂಪಿಸುವರೇ, ತುಮಕೂರು ಮಹಾನಗರ ಪಾಲಿಕೆಯ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ನಿರೀಕ್ಷೆಯಿದೆ. ತುಮಕೂರು ವಿವಿ ಕ್ಯಾಂಪಸ್‌ ನಿರ್ಮಾಣಕ್ಕೆ ವಿಶೇಷ ಅನುದಾನ ಘೋಷಿಸುವರೇ, ಮಳೆಯಿ ಲ್ಲದೇ ಸಂಕಷ್ಟ ಅನುಭವಿಸುತ್ತಿರುವ ತಾಲೂಕುಗಳಿಗೆ ವಿಶೇಷ ಪ್ಯಾಕೇಜ್‌ ನೀಡುವರೇ, ಮೆಡಿಕಲ್‌ ಕಾಲೇಜ್‌, ಮಲ್ಟಿ ಸ್ಪಷಾಲಿಟಿ ಆಸ್ಪತ್ರೆ ಕಾರ್ಯಾ ರಂಭದ ಬಗ್ಗೆ ಪ್ರಸ್ತಾಪ ಸಾಧ್ಯತೆಯಿದೆ.

ಜಿಲ್ಲೆಯ ನೀರಾವರಿ ಯೋಜನೆ ವೇಗದ ಬಗ್ಗೆ ಪ್ರಸ್ತಾಪವಾಗುವುದೇ: ತಾಲೂಕು ಪಾವಗಡ ಸೇರಿದಂತೆ ಜಿಲ್ಲೆಯಲ್ಲಿ ಚಾಲನೆ ಯಾಗುತ್ತಿರುವ ಎತ್ತಿನ ಹೊಳೆ ಭದ್ರ ಮೇಲ್ದಂಡೆ ನೀರಾವರಿ ಯೋಜನೆ ವೇಗ ಪಡೆಯುವ ಕುರಿತು ಜತೆಗೆ ಕೆಲವು ಕಡೆ ಅಗತ್ಯವಿರುವ ಕುಡಿವ ನೀರಿನ ಯೋಜನೆ ಕುರಿತ ನಿರೀಕ್ಷೆಯಿದೆ. ಪಾವಗಡ ತಾಲೂಕಿನ ಅಭಿವೃದ್ಧಿಗೆ ಹಾಗೂ ಕುಡಿಯುವ ನೀರು ಯೋಜನೆಗೆ ವಿಶೇಷ ಅನುದಾನ ಪ್ರಕಟಿಸುತ್ತಾರೆ ಎನ್ನುವ ನಿರೀಕ್ಷೆಯನ್ನು ಅಲ್ಲಿಯ ಜನ ಹೊಂದಿದ್ದಾರೆ.

ಇದರ ಜತೆಗೆ ಜಿಲ್ಲೆಯ ಜನರ ನಿರೀಕ್ಷೆಯಾಗಿರುವ ಪ್ರಮುಖ ಕುಡಿವ ನೀರು ಯೋಜನೆಯಾದ ಎತ್ತಿನಹೊಳೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಗಳು ಮಂದಗತಿಯಲ್ಲಿ ನಡೆಯು ತ್ತಿದ್ದು, ಈ ಯೋಜನೆಗಳನ್ನು ಚುರುಕುಗೊಳಿಸುವ ಬಗ್ಗೆ ಪ್ರಸ್ತಾಪ ಮಾಡುವರೇ,  ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ನೀರು ಹರಿಸುವ ಹೇಮಾವತಿ ಎಡದಂಡೆ ನಾಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿ 0-72 ಕಿ.ಮಿ. ನಾಲೆ ಅಭಿವೃದ್ಧಿ ಮಾಡಿತ್ತು.

Advertisement

ಆದರೂ ಮುಂದುವರಿದ ನಾಲೆಯಲ್ಲಿ ಹೂಳು ತುಂಬಿಕೊಂಡು ಗಿಡ, ಮರ ಬೆಳೆದಿರುವುದರಿಂದ ಜಿಲ್ಲೆಗೆ ಹರಿಯ ಬೇಕಿರುವ 25 ಟಿ.ಎಂ.ಸಿ ನೀರು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೇಮಾವತಿ ನಾಲೆ ಅಭಿವೃದ್ಧಿಗೆ ಹಣ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಅದರ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದಾರೆ.

ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next