Advertisement

Politics ಚುನಾವಣ ರಾಜಕೀಯದಿಂದ ದೂರ ಉಳಿಯುವೆ: ನಿಖಿಲ್ ಕುಮಾರಸ್ವಾಮಿ

05:12 PM Sep 18, 2023 | Team Udayavani |

ಬೀದರ್‌: ಕೆಲವು ಸಮಯಗಳ ಕಾಲ ಚುನಾವಣ ರಾಜಕಾರಣದಿಂದ ದೂರವುಳಿಯಲು ಬಯಸಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಸದ್ಯ ನನ್ನ ಹೊಸ ಚಲನಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಅಥವಾ ಚುನಾವಣ ರಾಜಕಾರಣದಲ್ಲಿ ಸಕ್ರಿಯವಾಗಿರುವುದು ಕಷ್ಟದ ಕೆಲಸ ಎಂದರು.

ಮೈತ್ರಿ ಬಗ್ಗೆ ಹಿರಿಯರ ನಿರ್ಧಾರ
ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ಕುರಿತಂತೆ ಎಚ್‌.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಶೀಘ್ರ ನಿರ್ಧಾರ ಕೈಗೊಳ್ಳಲಿದ್ದಾರೆ. ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಬಲವಾಗಿದ್ದು, ಅಲ್ಲಿ ಬಿಜೆಪಿ ನಮಗೆ ಸಹಕರಿಸಲಿ. ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಅಲ್ಲಿ ನಾವು ಅವರಿಗೆ ಸಹಕರಿಸುವ ಬಗ್ಗೆ ಮಾತ್ರ ನಮ್ಮ ನಾಯಕರಾದ ಕುಮಾರಸ್ವಾಮಿ ಹೇಳಿದ್ದಾರೆ ಹೊರತು ಮೈತ್ರಿ ಬಗ್ಗೆ ಹೇಳಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next