Advertisement
ಪಾಕಿಸ್ಥಾನದಲ್ಲಿ ನಡೆಯಬೇಕಿದ್ದ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ತಟಸ್ಥ ಕೇಂದ್ರದಲ್ಲಿ ನಡೆಸುವುದು ಯೋಜನೆಯಾಗಿತ್ತು. ಆದರೆ ಶ್ರೀಲಂಕಾದ ಭದ್ರತಾ ನಿಯೋಗವೊಂದು ಇತ್ತೀಚೆಗೆ ಪಾಕಿಸ್ಥಾನಕ್ಕೆ ತೆರಳಿ ಲಾಹೋರ್ ಮತ್ತು ಕರಾಚಿಯ ಪರಿಸ್ಥಿತಿ ಬಗ್ಗೆ ಸಕಾರಾತ್ಮಕ ವರದಿ ನೀಡಿದೆ. ಇದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆ್ಯಶೆ ಡಿ’ಸಿಲ್ವ ಪಿಸಿಬಿ ಜತೆ ಮಾತುಕತೆಗೆ ನಿರ್ಧರಿಸಿದ್ದಾರೆ.
2009ರಲ್ಲಿ ಲಾಹೋರ್‌ನ
“ಗದ್ದಾಫಿ ಸ್ಟೇಡಿಯಂ’ ಹೊರಗೆ ಶ್ರೀಲಂಕಾ ಕ್ರಿಕೆಟಿಗರಿದ್ದ ಬಸ್ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಅಂದಿನಿಂದ ಪಾಕಿಸ್ಥಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಡಲು ತಂಡಗಳೆಲ್ಲ ಹಿಂದೇಟು ಹಾಕುತ್ತಲೇ ಇವೆ. ತೀರಾ ಅಪರೂಪವೆಂಬಂತೆ ಇಲ್ಲಿ ಕ್ರಿಕೆಟ್ ಪಂದ್ಯಗಳು ನಡೆದಿವೆ. 2015ರಲ್ಲಿ ಜಿಂಬಾಬ್ವೆ ತಂಡ ಪಾಕಿಸ್ಥಾನದಲ್ಲಿ ಸರಣಿ ಆಡಿತ್ತು. 2017ರಲ್ಲಿ ಶ್ರೀಲಂಕಾ ತಂಡ ಕೂಡ ಲಾಹೋರ್‌ನಲ್ಲಿ ಏಕೈಕ ಟಿ20 ಪಂದ್ಯವನ್ನಾಡಿತ್ತು. ಕಳೆದ ವರ್ಷ ವೆಸ್ಟ್ ಇಂಡೀಸ್ ಇಲ್ಲಿ 3 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಭೀತಿಯ ವಾತಾವರಣ ಇಲ್ಲ ಎಂಬುದನ್ನು ನಿರೂಪಿಸಲು
ಪ್ರಯತ್ನಿಸಿತ್ತು.