ಶಿರಸಿ: ಇಡೀ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಅವರು ಜ.9ರ ಮಂಗಳವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಾತನಾಡಿ,
ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಕುರಿತು ಕುರಿತು ಸಿಎಂ ಜೊತೆ ಸಮಾಲೋಚಿಸಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 16.5 ಕೋಟಿ ರೂ. ತಂದಿದ್ದೇವೆ. ಜಿಲ್ಲೆಯ ಎಲ್ಲ ತಹಶೀಲ್ದಾರರ ಬಳಿ 50 ರಿಂದ 1 ಕೋಟಿ ರೂ. ನೆರವಿನ ಅನುದಾನ ಇದೆ. ಒಂದು ಕಡೆ ಬರ ಇದೆ. ರೈತರಿಗೆ ಪರಿಹಾರ ಕೊಡಬೇಕು. ಜನ-ಜಾನುವಾರಿಗೆ ಆಹಾರ, ನೀರು ಸಮಸ್ಯೆ ಆಗಬಾರದು. ಖಾಸಗಿ ಬೋರ್ ಗಮನಿಸಿ ಬಾಡಿಗೆ ಆಧಾರದಲ್ಲಿ ಪಡೆಯುತ್ತೇವೆ. ಟೆಂಡರ್ ಕರೆದು ನೀರು ತರಲೂ ಯೋಜಿಸಿದ್ದೇವೆ ಎಂದರು.
ದೇವರ ಭಕ್ತರು, ರಾಮನ ಭಕ್ತರು ನಾವು. ಕುಡಿಯುವ ನೀರಿನ ತೊಂದರೆ ಆಗದಂತೆ ವಾತಾವರಣ ಇರುತ್ತದೆ ಎಂಬ ನಂಬಿಕೆ ಇದೆ ಎಂದರು.
ಶಿವಮೊಗ್ಗದಲ್ಲಿ ಎರಡು ಪ್ರಕರಣ ಮಂಗನ ಖಾಯಿಲೆಯಿಂದ ಮೃತ ಆಗಿದೆ. ಮಂಗನ ಕಾಯಿಲೆ ಉತ್ತರ ಕನ್ನಡದಲ್ಲಿ ಬಾರದಂತೆ ಎಚ್ಚರಿಕೆ ವಹಿಸಿದೆ. ಔಷಧ ಕೂಡ ಇದೆ ಎಂದರು.
ಬಿಜೆಪಿಗರು 25 ವರ್ಷ ಜಿಲ್ಲೆಯಲ್ಲಿ ಆಳ್ವಿಕೆ ಮಾಡಿದವರು. ಅವರಿಗೆ ಈಗ ಇಡೀ ಜಿಲ್ಲೆ ಓಡಾಡುವ ಸ್ಥಿತಿ ಬರಬಾರದಿತ್ತು ಎಂದ ಅವರು ನಮ್ಮ ಸಂಸತ್ತಿನ ಅಭ್ಯರ್ಥಿ ಯಾರೆಂಬುದು ನೋಡಿಕೊಂಡಿದ್ದೇವೆ ಎಂದೂ ಹೇಳಿದರು.
ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಪತ್ರಿಕಾ ಸಂಘದ ಅಧ್ಯಕ್ಷ ಜಿ.ಸು.ಬಕ್ಕಳ ಇತರರು ಇದ್ದರು.