ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಖ್ಯಾತ ಹಾಲಿವುಡ್ ನಟ ವಿಲ್ ಸ್ಮಿತ್ ವೇದಿಕೆ ಮೇಲೆ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ವಿಲಕ್ಷಣ ಘಟನೆ ನಡೆದಿದೆ.
ನಟ ಹಾಗೂ ನಿರೂಪಕ ಕ್ರಿಸ್ ರಾಕ್ ಅವರಿಗೆ ವಿಲ್ ಸ್ಮಿತ್ ಪ್ರತಿಷ್ಠಿತ ವೇದಿಕೆಯಲ್ಲೇ ಕೆನ್ನೆಗೆ ಹೊಡೆದಿದ್ದಾರೆ. ವಿಲ್ ಸ್ಮಿತ್ ಅವರ ಪತ್ನಿಯನ್ನು ಕ್ರಿಸ್ ರಾಕ್ ತಮಾಷೆ ಮಾಡಿದ್ದಕ್ಕೆ ವಿಲ್ ಸ್ಮಿತ್ ಕಪಾಳಕ್ಕೆ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಆಸ್ಕರ್ ವೇದಿಕೆಯ ಮೇಲೆ ಈ ಘಟನೆ ನಡೆದಿರುವುದಕ್ಕೆ ಆಯೋಜಕರು, ಪ್ರೇಕ್ಷಕರ ಕ್ಷಮೆ ಕೋರಿದ್ದಾರೆ.
ಆಗಿದ್ದೇನು?: ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಿರೂಪಕ ಕ್ರಿಸ್ ರಾಕ್, ಹಾಲಿವುಡ್ ನಟ ವಿಲ್ ಸ್ಮಿತ್ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದು, ಈ ಎಲ್ಲಾ ಘಟನೆಗೆ ಕಾರಣವಾಗಿದೆ. “ಜಡಾ ನೀವು ಬೋಳು ತಲೆಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ನನಗೆ ಬಹಳ ಇಷ್ಟ” ಎಂದು ಕ್ರಿಸ್ ರಾಕ್ ತಮಾಷೆ ಮಾಡಿದ್ದಾರೆ. ಆದರೆ ಇದರಿಂದ ಕೋಪಗೊಂಡ ವಿಲ್ ಸ್ಮಿತ್ ವೇದಿಕೆಯ ಮೇಲೆ ಹೋಗಿ ಕ್ರಿಸ್ ರಾಕ್ ಕಪಾಳಕ್ಕೆ ಹೊಡೆದಿದ್ದಾರೆ. ‘ನನ್ನ ಹೆಂಡತಿಯ ಹೆಸರನ್ನು ನಿಮ್ಮ ಬಾಯಲ್ಲಿ ಹೇಳಬೇಡ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ರಕ್ತಸಿಕ್ತ ‘ಕೆಜಿಎಫ್’ ಸಾಮ್ರಾಜ್ಯದ ಹೊಸ ಅಧ್ಯಾಯ
Related Articles
ಈ ಘಟನೆಯಿಂದ ಸಭಾಂಗಣದಲ್ಲಿ ಸೇರಿದ್ದ ಜನರ ಗಲಿಬಿಲಿಗೊಂಡರು. ನಂತರ ಆಯೋಜಕರು ಸ್ಮಿತ್ ಜೊತೆ ಮಾತನಾಡಿದ ಪರಿಸ್ಥಿತಿಯನ್ನು ತಿಳಿಗೊಳಿಸಿದರು.