Advertisement

ಪೆಗಾಗಸ್‌ ತನಿಖೆಗೆ ತಜ್ಞರ ಸಮಿತಿ ರಚನೆಗೆ ಸಿದ್ಧ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ

09:31 PM Aug 16, 2021 | Team Udayavani |

ನವದೆಹಲಿ: “ಪೆಗಾಸಸ್‌ ಬೇಹುಗಾರಿಕೆ ವಿಚಾರದಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆಯೂ ತನಿಖೆ ನಡೆಸಲು ತಜ್ಞರ ಸಮಿತಿಯೊಂದನ್ನು ನಾವು ರಚಿಸುತ್ತೇವೆ’ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದಕ್ಕೆ ಅರ್ಜಿದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಪೆಗಾಸಸ್‌ ಪ್ರಕರಣವು ಊಹೆ, ಅರ್ಧಂಬರ್ಧ ಮಾಧ್ಯಮ ವರದಿಗಳು ಹಾಗೂ ಅಪೂರ್ಣ ಮಾಹಿತಿಗಳನ್ನು ಒಳಗೊಂಡಿರುವಂಥದ್ದು. ಸಮಯದ ಅಭಾವವಿರುವ ಕಾರಣ, ಕೋರ್ಟ್‌ಗೆ ಸಲ್ಲಿಸಲಾದ ಪ್ರತಿಯೊಂದು ಅರ್ಜಿಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಹೀಗಾಗಿ, ಸದ್ಯಕ್ಕೆ ಸೀಮಿತ ಅಫಿಡವಿಟ್‌ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ವಿಸ್ತೃತವಾಗಿ ಮತ್ತೂಂದು ಅಫಿಡವಿಟ್‌ ಸಲ್ಲಿಸುತ್ತೇವೆ ಎಂದೂ ಕೇಂದ್ರ ಸರ್ಕಾರ ಹೇಳಿದೆ. ಇದೇ ವೇಳೆ, ಪ್ರಕರಣದ ವಿಚಾರಣೆ ಮಂಗಳವಾರವೂ ಮುಂದುವರಿಯಲಿದೆ.

ಅರ್ಜಿದಾರರಾದ ಎನ್‌.ರಾಮ್‌ ಮತ್ತು ಶಶಿಕುಮಾರ್‌ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, “ಕೇಂದ್ರದ ಸರ್ಕಾರವಾಗಲೀ, ಅದರ ಸಂಸ್ಥೆಗಳಾಗಲೀ ಪೆಗಾಗಸ್‌ ಸ್ಪೈವೇರ್‌ ಅನ್ನು ಬಳಸಿದ್ದವೇ, ಇಲ್ಲವೇ ಎಂಬುದನ್ನು ಅಫಿಡವಿಟ್‌ನಲ್ಲಿ ಎಲ್ಲಿಯೂ ಸರ್ಕಾರ ಸ್ಪಷ್ಟಪಡಿಸಿಲ್ಲ. ಅಲ್ಲದೇ, ಸರ್ಕಾರದ ವಿರುದ್ಧವೇ ಆರೋಪ ಕೇಳಿಬಂದಿರುವಾಗ ಸರ್ಕಾರ ರಚಿಸುವ ತಜ್ಞರ ಸಮಿತಿಯ ವರದಿಯನ್ನು ಒಪ್ಪಲು ಹೇಗೆ ಸಾಧ್ಯ? ನಮಗೆ ಅಂಥ ಸಮಿತಿಯ ಅಗತ್ಯವಿಲ್ಲ. ಈ ಕುರಿತು ಸ್ವತಂತ್ರ ತನಿಖೆಯೇ ಆಗಬೇಕು’ ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next