Advertisement

ಜಬಲ್‌ಪುರ ಮಂಡಿ ಸುಟ್ಟು ಹಾಕುವೆ : ಪೊಲೀಸರಿಗೆ ಕೈ ಶಾಸಕನ ಧಮ್ಕಿ Watch

11:38 AM Jun 13, 2017 | Team Udayavani |

ಭೋಪಾಲ್‌ : ಮಧ್ಯಪ್ರದೇಶದ ಜಬಲ್ಪುರದ ಇಡಿಯ ಮಂಡಿಯನ್ನೇ ಸುಟ್ಟು ಬಿಡುತ್ತೇನೆ ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಯಾದವ್‌ ಧಮ್ಕಿ ಹಾಕಿರುವುದು ವಿಡಿಯೋದಲ್ಲಿ ದಾಖಲಾಗಿದ್ದು ಅದೀಗ ವೈರಲ್‌ ಆಗಿದೆ. 

Advertisement

ಕೆಲ ಸಮಯದ ಹಿಂದೆ ಕರೇರಾ ಕಾಂಗ್ರೆಸ್‌ ಶಾಸಕಿ  ಶಂಕುತಳಾ ಖಾತಿಕ್‌ ಅವರು ಪೊಲೀಸ್‌ ಠಾಣೆಯನ್ನು  ಸುಟ್ಟು ಹಾಕುವಂತೆ ಜನ ಸಮೂಹವೊಂದಕ್ಕೆ ಪ್ರಚೋದನೆ ನೀಡಿರುವುದು ವಿಡಿಯೋದಲ್ಲಿ ದಾಖಲಾಗಿ ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. 

ಖಾತಿಕ್‌ ಅವರ ಉದ್ರಿಕ್ತ ಮಾತುಗಳನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದ ದಿಲ್ಲಿ ಬಿಜೆಪಿ ವಕ್ತಾರ ತಜೀಂದರ್‌ ಪಾಲ್‌ ಸಿಂಗ್‌ ಬಗ್ಗಾ ಅವರೇ ಇದೀಗ ಸಚಿನ್‌ ಯಾದವ್‌ ಅವರ ಉದ್ರಿಕ್ತ ಮಾತುಗಳನ್ನು ವಿಡಿಯೋದಲ್ಲಿ ಸೆರೆ ಹಿಡಿದಿರುವುದು ಗಮನಾರ್ಹವಾಗಿದೆ. 

ಕಾಂಗ್ರೆಸ್‌ ನಾಯಕ ಸಚಿನ್‌ ಯಾದವ್‌ ಅವರು ವಿಡಿಯೋ ಚಿತ್ರಿಕೆಯಲ್ಲಿ ಜಬಲ್‌ಪುರದಲ್ಲಿನ ಇಡಿಯ ಮಂಡಿಯನ್ನು ತಾನು ಸುಟ್ಟು ಬಿಡುತ್ತೇನೆ ಎಂದು ಸಿಟ್ಟಿನ ಆವೇಶದಲ್ಲಿ ಪೊಲೀಸರ ಮುಂದೆ ಗುಡುಗಿರುವುದು ಕಂಡು ಬರುತ್ತದೆ. 

ಕರೇರಾ ಶಾಸಕಿ ಶಕುಂತಳಾ ಖಾತಿಕ್‌ ವಿರುದ್ಧ ಅಧಿಕಾರಿಗಳು ಎಫ್ಐಆರ್‌ ದಾಖಲು ಮಾಡಿಕೊಂಡ ದಿನವೇ ಸಚಿನ್‌ ಯಾದವ್‌ ವಿಡಿಯೋ ಬಹಿರಂಗವಾಗಿರುವುದು ಕಾಂಗ್ರೆಸ್‌ಗೆ ಇರಿಸು ಮುರಿಸು ಉಂಟು ಮಾಡಿದೆ. 

Advertisement

ಶಾಸಕಿ ಖಾತಿಕ್‌ ಅವರು ಮಂದ್‌ಸೋರ್‌ನಲ್ಲಿ ಐವರು ರೈತರು ಪೊಲೀಸರ ಗುಂಡಿಗೆ ಬಲಿಯಾಗಿರುವುದನ್ನು ಪ್ರತಿಭಟಿಸುವ ಜನ ಸಮೂಹದ ನೇತೃತ್ವವನ್ನು ವಹಿಸಿದ್ದರು. ಆ ಸಂದರ್ಭದಲ್ಲಿ ಉದ್ರಿಕ್ತ ಜನರು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಪ್ರತಿಕೃತಿಯನ್ನು ಸುಟ್ಟರು.

ಆಗಲೇ ಖಾತಿಕ್‌ ಉದ್ರಿಕ್ತ ಜನ ಸಮೂಹಕ್ಕೆ ಪೊಲೀಸ್‌ ಠಾಣೆಯನ್ನೂ ಕೂಡ ಸುಟ್ಟು ಹಾಕಿ ಎಂದು ಹೇಳಿ ಉದ್ರಿಕ್ತರನ್ನು ಇನ್ನಷ್ಟು ಪ್ರಚೋದಿಸಿದ್ದರು. ಅದನ್ನು ಬಿಜೆಪಿ ವಕ್ತಾರ ತಜೀಂದರ್‌ ಬಗ್ಗಾ ವಿಡಿಯೋದಲ್ಲಿ ಸೆರೆ ಹಿಡಿದು ಇಂಟರ್‌ನೆಟ್‌ನಲ್ಲಿ ಹಾಕಿದ್ದರು. 

ಅದಾಗಿ ಇದೀಗ ಕಾಂಗ್ರೆಸ್‌ ನಾಯಕ ಸಚಿನ್‌ ಯಾದವ್‌ ಅವರು “ಜಬಲ್‌ಪುರದ ಇಡಿಯ ಮಂಡಿಯನ್ನೇ ಸುಟ್ಟು ಹಾಕುತ್ತೇನೆ’ ಎಂದು ಬೆದರಿಕೆ ಒಡ್ಡಿದ ವಿಡಿಯೋ ಬಗ್ಗಾ ಅವರಿಂದಾಗಿ ಬಹಿರಂಗವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಯಾವ ರೀತಿಯ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂಬುದಕ್ಕೆ ಈ ವಿಡಿಯೋಗಳು ಸಾಕ್ಷಿಯಾಗಿವೆ ಎಂದು ಬಿಜೆಪಿ ನಾಯಕ ನಿತೇಶ್‌ ಬಾಜ್‌ಪೇಯಿ ಹೇಳಿದ್ದಾರೆ. ಇದು ನಾಚಿಕೆಗೇಡಿನ ಘಟನೆ ಎಂದು ಸ್ವತಃ ಬಗ್ಗಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next