Advertisement

ಹೆಚ್ಚು ಹಣ ಕೊಟ್ಟರೆ ರಸೆಲ್‌ ಹೆಚ್ಚು ಸಿಕ್ಸರ್‌ ಬಾರಿಸ್ತಾರಾ?

10:14 PM Apr 07, 2019 | Sriram |

ಲಂಡನ್‌: ಕೋಲ್ಕತ ನೈಟ್‌ ರೈಡರ್ಸ್‌ ಪರ ಆಡುತ್ತಿರುವ ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಆಂಡ್ರೆ ರಸೆಲ್‌, ಭರ್ಜರಿ ಸಿಕ್ಸರ್‌ಗಳಿಗೆ ಹೆಸರುವಾಸಿ. ಮೊನ್ನೆಯಷ್ಟೇ 7 ಸಿಕ್ಸರ್‌ ಬಾರಿಸಿ ಬೆಂಗಳೂರಿನ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು. ಇದನ್ನು ಪಾಕಿಸ್ತಾನದ ಪತ್ರಕರ್ತ ಶಾಹಿದ್‌ ಹಷ್ಮಿ ವ್ಯಂಗ್ಯವಾಡಿದ್ದರು.

Advertisement

“ರಸೆಲ್‌ ಈ ಬಾರಿ ಐಪಿಎಲ್‌ನ ನಾಲ್ಕೇ ಪಂದ್ಯಗಳಿಂದ 22 ಸಿಕ್ಸರ್‌ ಬಾರಿಸಿದ್ದಾರೆ. ಆತ ಪಾಕಿಸ್ತಾನದ 3 ಪಿಎಸ್‌ಎಲ್‌ನ 18 ಪಂದ್ಯಗಳಿಂದ ಸೇರಿ ಬರೀ 9 ಸಿಕ್ಸರ್‌ ಬಾರಿಸಿದ್ದಾರೆ. ಇದರರ್ಥ, ಹೆಚ್ಚು ಹಣ ಕೊಟ್ಟಷ್ಟೂ, ಅವರು ಹೆಚ್ಚು ಸಿಕ್ಸರ್‌ ಬಾರಿಸುತ್ತಾರೆ’ ಎಂಬ ಹಷ್ಮಿ ಹೇಳಿಕೆಗೆ ಇಂಗ್ಲೆಂಡ್‌ ವೇಗಿ ಸ್ಟುವರ್ಟ್‌ ಬ್ರಾಡ್‌ ತಿರುಗೇಟು ನೀಡಿದ್ದಾರೆ. ಪಿಚ್‌ಗಳು ಉತ್ತಮವಿರಬಹುದೇ? ಮೈದಾನ ಚಿಕ್ಕದಿರಬಹುದೇ? ಇನ್ನೂ ಉತ್ತಮ ವಾತಾವರಣದಲ್ಲಿ ಅವರು ಆಡುತ್ತಿರಬಹುದೇ? ಎಂದು ಬ್ರಾಡ್‌ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next