ಕೋಲ್ಕತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಚಿತ್ರವನ್ನು ತಿರುಚಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಬಂಧನಕ್ಕೊಳಗಾಗಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮಾ ಅವರು ಬುಧವಾರ ಬಿಡುಗಡೆಯಾಗಿದ್ದಾರೆ.
ಬಿಡುಗಡೆಯಾಗಿ ಬಂದ ಬಳಿಕ ಮಾತನಾಡಿದ ಪ್ರಿಯಾಂಕಾ , ನಾನು ಯಾವುದೇ ಕಾರಣಕ್ಕೂಮಮತಾ ಬ್ಯಾನರ್ಜಿ ಅವರ ಕ್ಷಮೆ ಕೇಳುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.
ನನ್ನನ್ನು ಜೈಲಿನಲ್ಲಿಟ್ಟು ಚಿತ್ರಹಿಂಸೆ ನೀಡಲಾಗಿದೆ. ಜೈಲರ್ ಒಬ್ಬರು ನನ್ನನ್ನು ತಳ್ಳಿದರು. ಕಳಪೆಗುಣಮಟ್ಟದ ಆಹಾರವನ್ನು ನನಗೆ ತಿನ್ನಲು ನೀಡಿದರು ಎಂದು ಹೇಳಿಕೊಂಡಿದ್ದಾರೆ.
ನನ್ನಿಂದ ಒತ್ತಾಯ ಪೂರ್ವಕವಾಗಿ ಕ್ಷಮಾಪಣ ಪತ್ರಕ್ಕೆ ಅಧಿಕಾರಿಗಳು ಸಹಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿತ್ತು.
ಮೆಟ್‌ಗಲಾದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರವಿಭಿನ್ನ ಕೇಶ ವಿನ್ಯಾಸದ ಭಾವಚಿತ್ರಕ್ಕೆಕ್ಕೆ ಮಮತಾ ಬ್ಯಾನರ್ಜಿ ಅವರ ಮುಖ ಜೋಡಣೆ ಮಾಡಿದ ಆರೋಪದಲ್ಲಿ ಶುಕ್ರವಾರ ಪ್ರಿಯಾಂಕಾ ಅವರನ್ನ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು.