ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ಪಕ್ಷದ ನಾಯಕ ಏಕನಾಥ್ ಶಿಂಧೆ ಅವರ ಬಂಡಾಯದ ನಂತರ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆಗೆ ಸಿಲುಕಿದೆ. ಈ ನಡುವೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಸೇನಾ ಸಚಿವ ಆದಿತ್ಯ ಠಾಕ್ರೆ, ‘ಇದು ಸತ್ಯ ಮತ್ತು ಸುಳ್ಳಿನ ನಡುವಿನ ಯುದ್ಧ’ ಎಂದು ಹೇಳಿದ್ದಾರೆ
ಮುಂಬೈನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಆದಿತ್ಯ ಠಾಕ್ರೆ, “ಸಭೆಯಲ್ಲಿ ಏನು ಚರ್ಚಿಸಲಾಗಿದೆ ಎಂದು ನಿಮಗೆ ಈಗಾಗಲೇ ತಿಳಿದಿದೆ, ಪ್ರಮುಖ ವಿಷಯವೆಂದರೆ ಬಂಡಾಯ ಶಿವಸೇನೆ ಶಾಸಕರು ಮಾಡಿದ ದ್ರೋಹವನ್ನು ನಾವು ಮರೆಯುವುದಿಲ್ಲ. ನಾವು (ಶಿವಸೇನೆ) ಖಂಡಿತವಾಗಿ ಗೆಲ್ಲುತ್ತೇವೆ” ಎಂದು ಹೇಳಿದರು.
ಇದನ್ನೂ ಓದಿ:ದ್ರೌಪದಿ ಮುರ್ಮು ಬಗ್ಗೆ ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ರಾಮ್ ಗೋಪಾಲ್ ವರ್ಮಾ
ಉದ್ಧವ್ ಠಾಕ್ರೆ ಕ್ಯಾಬಿನೆಟ್ ನ ಸಚಿವ ಏಕನಾಥ ಶಿಂಧೆ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು, ಎನ್‌ಸಿಪಿ ಮತ್ತು ಕಾಂಗ್ರೆಸ್ ಅಧಿಕಾರವನ್ನು ಹಂಚಿಕೊಂಡಿರುವ ಎಂವಿಎ ಸರ್ಕಾರವನ್ನು ಪತನದ ಅಂಚಿಗೆ ತಳ್ಳಿದ್ದಾರೆ.
ಶಿಂಧೆ ಅವರು ಸುಮಾರು 40 ಶಾಸಕರ ಬೆಂಬಲವಿದೆಯೆಂದು ಹೇಳಿಕೊಂಡಿದ್ದು, ಅವರೆಲ್ಲರೂ ಪ್ರಸ್ತುತ ಅಸ್ಸಾಂನ ಗುವಾಹಟಿಯಲ್ಲಿದ್ದಾರೆ.