ನವ ದೆಹಲಿ : ಉತ್ತರಾಖಂಡದಲ್ಲಿ ಉಪಚುನಾವಣೆ ಯಾವಾಗ ನಡೆಯಬೇಕೆಂಬುದನ್ನು ಚುನಾವಣಾ ಆಯೋಗ ನಿರ್ಧರಿಸಬೇಕು ಎಂದು ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಇಂದು(ಶುಕ್ರವಾರ, ಜುಲೈ 21) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಭಾರತೀಯ ಜನತಾ ಪಕ್ಷದ ಕೇಂದ್ರ ನಾಯಕತ್ವದ ಯೋಜನೆಗಳ ಪ್ರಕಾರ ಕೆಲಸ ಮಾಡುತ್ತೇನೆ. ಆಯೋಗದ ನಿರ್ಧಾರ. ಕೇಂದ್ರವು ಏನೇ ನಿರ್ಧರಿಸಿದರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ನಿರ್ಬಂಧಗಳ ಸಡಿಲಿಕೆ ಸಾಧ್ಯವಿಲ್ಲ, ಕೋವಿಡ್ ನ ಎರಡನೇ ಅಲೆ ಇನ್ನೂ ಮುಗಿದಿಲ್ಲ : ಕೇಂದ್ರ
ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಹೈಕಮಾಂಡ್ ಗುರುವಾರ ರಾವತ್ ಅವರನ್ನು ರಾಷ್ಟ್ರ ರಾಜಧಾನಿಗೆ ಕರೆಸಿಕೊಂಡಿದ್ದು, ಉತ್ತರಾಖಂಡದಲ್ಲಿ 70 ವಿಧಾನಸಭಾ ಸ್ಥಾನಗಳಿವೆ. ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ರಾಜ್ಯದ ಪಕ್ಷದ ಘಟಕವು ‘ಚಿಂತನ್ ಬೈಟೆಕ್’ ನಡೆಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾವತ್, “ನಾನು ಯಾವಾಗಲೂ ಪಕ್ಷದ ಹೈಕಮಾಂಡ್ ನ ಸೂಚನೆಗಳನ್ನು ಪಾಲಿಸುತ್ತಿದ್ದೇನೆ. ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ನಿರ್ಣಾಯಕ ಸಮಯದಲ್ಲಿ ನನ್ನನ್ನು ನಂಬಿದ್ದಾರೆ. ನಾನು ಯಾವ ಸ್ಥಾನದಿಂದ ಸ್ಪರ್ಧಿಸುತ್ತೇನೆ ಎಂದು ನಿರ್ಧರಿಸುವುದಿಲ್ಲ. ಪಕ್ಷವು ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ” ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ಉತ್ತರಾಖಂಡದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ನವಪ್ರಭಾತ್ ಕಳೆದ ವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಉಪಚುನಾವಣೆಗಳ ಬಗ್ಗೆ ರಾಜ್ಯದಲ್ಲಿ “ಗೊಂದಲವನ್ನು ನಿವಾರಿಸಬೇಕೆಂದು” ಒತ್ತಾಯಿಸಿದ್ದಲ್ಲದೇ, 1951 ರ ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 151 ಎ ನನ್ನು ಉಲ್ಲೇಖಿಸಿ, ಚುನಾವಣಾ ಆಯೋಗವು ರಾಜ್ಯ ಶಾಸಕಾಂಗಗಳಲ್ಲಿನ ಖಾಲಿ ಹುದ್ದೆಗಳನ್ನು ಆರು ತಿಂಗಳೊಳಗೆ ಉಪಚುನಾವಣೆಗಳ ಮೂಲಕ ಭರ್ತಿ ಮಾಡಬೇಕೆಂದು ಆದೇಶಿಸಿದೆ ಎಂದು ತಿಳಿಸಿದ್ದರು.
ಇದನ್ನೂ ಓದಿ : ಗೋವಾ : ಪಕ್ಷದ ಸಂಸದೀಯ ಮಂಡಳಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತದೆ : ಸಿ ಟಿ. ರವಿ