ಮಹಾಲಿಂಗಪುರ: ಕಾಂಗ್ರೆಸ್ ಪಕ್ಷ ಉತ್ತರ ಕರ್ನಾಟಕದ ಮಹಿಳೆ ವೀಣಾ ಕಾಶಪ್ಪನವರ ಅವರಿಗೆ ಟಿಕೆಟ್ ನೀಡಿ ಅವಕಾಶ ಕಲ್ಪಿಸಿದೆ. ಎಲ್ಲರೂ ತಮ್ಮ ಮತವನ್ನು ನೀಡಿ ಬದಲಾವಣೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಮನವಿ ಮಾಡಿದರು. ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಭ್ಯರ್ಥಿಗಳು ತಮಗೆ ಮತ ನೀಡಿ ಅನ್ನುತ್ತಿಲ್ಲ. ಮೋದಿ ನೋಡಿ ಮತ ನೀಡಿ ಎಂದು ಕೇಳುತ್ತಾರೆ. ಮೋದಿ ಬಂದು ಜಿಲ್ಲೆಯ ಅಭಿವೃದ್ಧಿ ಮಾಡ್ತಾರಾ ಎಂದು ಪ್ರಶ್ನಿಸಿ, ಧರ್ಮದ ಒಡೆದು ಆಳುವ ನೀತಿ ಅನುಸರಿಸುವ ಬಿಜೆಪಿಗೆ ಜನ ತಕ್ಕ
ಪಾಠ ಕಲಿಸಲಿಬೇಕು ಎಂದರು.
ನಮಗೆ 56 ಎದೆಯುಳ್ಳ ವ್ಯಕ್ತಿ ಬೇಕಾಗಿಲ್ಲ. ರೈತರ, ಮಹಿಳೆಯರು, ಜನಸಾಮಾನ್ಯರ ನೋವು ನಲಿವಿಗೆ ಸ್ಪಂದಿಸುವ ಹೃದಯವಂತ ವ್ಯಕ್ತಿ ಬೇಕು. ಪುಲ್ವಾಮಾದಲ್ಲಿ ಸೈನಿಕರ ಸಾವಿಗೆ ಬಿಜೆಪಿ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.
ಲೋಕಸಭಾ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ಬಿಜೆಪಿಯವರಿಗೆ ಅಭ್ಯರ್ಥಿ ಬಗ್ಗೆ ನಂಬಿಕೆ ಇಲ್ಲದೇ ಮೋದಿ ನೋಡಿ ವೋಟ್ ಹಾಕಿ ಎಂದು ಮತ ಕೇಳುತ್ತಿದ್ದಾರೆ. ಮತದಾರರು ಎಚ್ಚರಿಕೆಯಿಂದ ಉತ್ತಮರನ್ನು ಗುರುತಿಸಿ ಆಯ್ಕೆ ಮಾಡಬೇಕು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ, ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಬಸವರಾಜ ಕೊಣ್ಣೂರ ಉಪಸ್ಥಿತರಿದ್ದರು.
ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದೆ. ಮೋದಿ ಸರ್ಕಾರ ಮಾರ್ಕೆಟಿಂಗ್ ಮಾಡುವ ಸರ್ಕಾರ. ಸುಳ್ಳು ಹೇಳಿ ಕಣ್ಣಿಗೆ ಮಣ್ಣೇರಚುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಅಭಿವೃದ್ಧಿಗೆ ಶ್ರಮಿಸುವ ವೀಣಾ ಕಾಶಪ್ಪನವರ ಅವರನ್ನು
ಗೆಲ್ಲಿಸಬೇಕು.
ಸಂಯುಕ್ತಾ ಪಾಟೀಲ, ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ.