ಗುಜರಾತ್: ಸ್ವಯಂ ಘೋಷಿತ ದೇವಮಾನವನೆಂದು ಕರೆಸಿಕೊಳ್ಳುವ ಬಾಗೇಶ್ವರ ಧಾಮ್ ಟ್ರಸ್ಟ್ ನ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಹಿಂದೂ ರಾಷ್ಟ್ರದ ಹೇಳಿಕೆಯ ವಿಚಾರದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ತನ್ನ ಪವಾಡ ಹಾಗೂ ಬೋಧನೆಯಿಂದ ಅಪಾರ ಭಕ್ತ ಸಮೂಹವನ್ನು ಸೆಳೆದಿರುವ, ಒಂದಷ್ಟು ವಿವಾದದಿಂದ ಸುದ್ದಿಯಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಹಿಂದೂ ರಾಷ್ಟ್ರ ನಿರ್ಮಾಣದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿರುವುದು ಸುದ್ದಿಯಾಗಿದೆ.
ಇತ್ತೀಚೆಗೆ ಗುಜರಾತಿನ ಸೂರತ್ ನಲ್ಲಿ ನಡೆದ ಸಾರ್ವಜನಿಕೆ ಸಭೆಯಲ್ಲಿ “ಗುಜರಾತಿನ ಜನರು ಈ ರೀತಿ ಒಂದಾದರೆ ಭಾರತ ಮಾತ್ರವಲ್ಲ ಪಾಕಿಸ್ತಾನವನ್ನೂ ಹಿಂದೂ ರಾಷ್ಟ್ರವನ್ನಾಗಿ ಮಾಡಬಹುದು. ಗುಜರಾತಿನ ಜನರಿಂದ ನಾನು ಧನ, ಸಂಪತ್ತನ್ನು ಪಡೆಯಲು ಬಂದಿಲ್ಲ. ಹಿಂದುತ್ವದ ವಿಚಾರದಲ್ಲಿ ಹಿಂದೂಗಳು ಒಂದಾಗಿರಬೇಕು” ಎಂದು ಅವರು ಹೇಳಿದ್ದಾರೆ.
ಬಾಗೇಶ್ವರ್ ಧಾಮ್ ಮುಖ್ಯಸ್ಥರಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರಿಗೆ ಇದೇ ಮೇ.24 ರಂದು ಮಧ್ಯಪ್ರದೇಶ ಸರ್ಕಾರದಿಂದ ವೈ-ಕೆಟಗರಿ ಭದ್ರತೆಯನ್ನು ನೀಡಿದೆ. ಅವರ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯ ಜನರು ಭಾಗಿಯಾಗುವುದರಿಂದ ಈ ಭದ್ರತೆಯನ್ನು ಅವರಿಗೆ ಸರ್ಕಾರ ನೀಡಿದೆ.